ಮೈಸೂರು

ಕಬ್ಬಿಗೆ ಬೆಂಬೆಲೆಗೆ ಸಚಿವರ ಮೇಲೆ ಒತ್ತಡ ಹಾಕಿ

Published On :

ನಂಜನಗೂಡು: ರೈತರ ಕಬ್ಬಿಗೆ ಬೆಂಬಲ ಬೆಲೆ ಪಡೆಯಲು ಸಚಿವರ ಮೇಲೆ ಒತ್ತಡ ತರಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಜಿಲ್ಲಾ ಹಾಗೂ ತಾಲೂಕಿನ ಕಬ್ಬು ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಕಬ್ಬು ಬೆಳೆಯುವ ರೈತರು ಬೆಂಬಲ ಬೆಲೆ ಪಡೆಯಲು ಕಬ್ಬು ಖರೀದಿ ಸರಬರಾಜು ಮಂಡಳಿಯ ಸಚಿವ ಸದಸ್ಯರಾದ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್, ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರ ಬಳಿ ತೆರಳಿ ರೈತರು ಒತ್ತಡ ತರಬೇಕು, ಆಗ ಮಾತ್ರ ಬೆಂಬಲ ಬೆಲ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಕಬ್ಬು ಬೆಳೆದ ರೈತರ ಪ್ರಮುಖ ಬೇಡಿಕೆಗಳಾದ ಬನ್ನಾರಿ ಅಮ್ಮನ್ ಕಾರ್ಖಾನೆಯಿಂದ ಎರಡು ವರ್ಷಗಳಿಂದ ಕೊಡಬೇಕಾದ ಬಾಕಿ ಹಣ ಸಂದಾಯ ಹಾಗೂ ಕಬ್ಬಿನ ಇಳುವರಿ ಆಧಾರದ ಮೇಲೆ ಬೆಳೆದ ಕಬ್ಬಿಗೆ ಬೆಲೆ ನಿಗದಿ ಪಡಿಸಲು, ಕಬ್ಬು ಖರೀದಿ ಸರಬರಾಜು ಮಂಡಳಿ ಈ ತಿಂಗಳ 20ರೊಳಗೆ ಸಭೆ ಕರೆದಿದ್ದು, ಈ ಸಭೆಯಲ್ಲಿ ನಾನೂ ಸೇರಿದಂತೆ ಸಚಿವರು ಭಾಗವಹಿಸುವುದರಿಂದ ರೈತರು ಸಚಿವರ ಬಳಿ ಕಾರ್ಖಾನೆಯಿಂದ ಪ್ರತಿ ಟನ್ಗೆ ರೈತರ ಹೊಲದಲ್ಲಿರುವ ದರದ ನಿಯಮದ ಆಧಾರದ ಮೇಲೆ 2,510 ನಿಗದಿ ಪಡಿಸಬೇಕೆಂದು ಸಚಿವರಲ್ಲಿ ಮನವರಿಕೆ ಮಾಡಿಕೊಡಬೇಕೆಂದು ಹೇಳಿದರು.
ಕೆಲವು ಡೋಂಗಿ ರೈತ ನಾಯಕರ ಮಾತಿಗೆ ಕಿವಿಗೊಡದೆ ಕಾರ್ಖಾನೆಯ ಮಾಲೀಕರ ತಂತ್ರ ಕುತಂತ್ರಗಳಿಗೆ, ಆಸೆ ಆಮಿಷಗಳಿಗೆ ಬಲಿಯಾಗದೆ, ರೈತರು ಜಾಗೃತರಾಗಿ ಹೋರಾಟ ಮನೋಭಾವನೆಯಿಂದ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಂತಹ ಮನೋಭಾವ ಬೆಳೆಸಿಕೊಳ್ಳಬೇಕೆಂದರು. ಸಭೆಯಲ್ಲಿ ತಾ. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಚಿಕ್ಕಸ್ವಾಮಿ, ಜಿಲ್ಲಾಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ಎಂ.ಕೆ. ರವಿಕುಮಾರ್, ವಕೀಲ ರಾಚಪ್ಪ, ಮುಖಂಡರಾದ ದೇವರಾಜ್, ಅಶೋಕ್, ಬಸವಣ್ಣ, ರಾಜು ರವಿ, ಸತೀಶ್, ನಂಜಪ್ಪ, ಪುಟ್ಟಸ್ವಾಮಿ, ಕಿರಂಗೂರು ಶಂಕರ್, ಸುರೇಶ್, ಚಿನ್ನಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.