ಮೈಸೂರು

ರೈಲು ನಿಲ್ದಾಣದಲ್ಲಿ ಫುಡ್ ಪ್ಲಾಜಾ ಆರಂಭ

Published On :

ಕ.ಪ್ರ.ವಾರ್ತೆ , ಮೈಸೂರು , ಅ. 16
ಕೇಂದ್ರ ರೇಲ್ವೆ ಸಚಿವಾಲಯ, ಭಾರತೀಯ ರೇಲ್ವೆ ಆಹಾರ ಸೇವೆ ಮತ್ತು ಪ್ರವಾಸೋದ್ಯಮ ನಿಗಮ ವತಿಯಿಂದ ಮೈಸೂರು ರೈಲು ನಿಲ್ದಾಣದಲ್ಲಿ ಫುಡ್ ಪ್ಲಾಜಾ ಆರಂಭಿಸಲಾಗಿದೆ.
ಭಾರತದ ಪ್ರಮುಖ ರೈಲು ನಿಲ್ದಾಣಗಳಲ್ಲಿ 40 ಆಹಾರ ಕೇಂದ್ರ ಆರಂಭಿಸಲಾಗಿದೆ. ಈ ಪೈಕಿ ಮೈಸೂರು ರೈಲು ನಿಲ್ದಾಣವೂ ಸೇರಿದೆ. ದಿನದ 24 ಗಂಟೆಯೂ ಈ ಆಹಾರ ಕೇಂದ್ರ ಕಾರ್ಯ ನಿರ್ವಹಿಸಲಿದೆ. ಮೈಸೂರಿನ ಈ ಕೇಂದ್ರದಲ್ಲಿ ದಕ್ಷಿಣ ಭಾರತೀಯ, ಉತ್ತರ ಭಾರತೀಯ ಮತ್ತು ಚೈನೀಸ್, ಬೇಕರಿ ತಿನಿಸುಗಳು, ಐಸ್ ಕ್ರೀಂ, ಹಣ್ಣಿನ ರಸ, ಕಾಫಿ, ಟೀ, ಮ್ಯಾಕ್ ಡೋನಾಲ್ಡ್, ಕಾಫಿ ಡೇ, ಆಗ್ರಾ ಪೇಡ, ನಾಗಪುರದ ಟಂಟ್ರ ಬರ್ಫಿ, ಫಿಜಾ, ಬರ್ಗರ್ ಮುಂತಾದ ತಿನಿಸುಗಳು ಲಭ್ಯವಿದೆ.
1700 ಚದರ ಅಡಿ ವಿಸ್ತೀರ್ಣದಲ್ಲಿ ಈ ಕೇಂದ್ರ ತೆರೆಯಲಾಗಿದೆ. ಮತ್ತೊಂದೆಡೆ ಸಸ್ಯಹಾರಿ ಮತ್ತು ಮಾಂಸಾಹಾರಿ ತಿನಿಸುಗಳು ಲಭ್ಯವಿದೆ. ಉತ್ತಮ ಗುಣಮಟ್ಟದ ತಿನಿಸುಗಳ ಜೊತೆಗೆ ಮನೆಗೆ ಅಥವಾ ಪ್ರಯಾಣಕ್ಕೆ ಕೊಂಡೊಯ್ಯಲು ಅನುಕೂಲವಾಗುವಂತೆ ಶುದ್ಧವಾಗಿ ಕಟ್ಟಿ(ಪಾರ್ಸಲ್ ವ್ಯವಸ್ಥೆ) ಕೊಡಲಾಗುತ್ತದೆ. ದಕ್ಷಿಣ ಭಾರತ ಊಟಕ್ಕೆ 51 ರು., ಉತ್ತರ ಭಾರತ ಊಟಕ್ಕೆ 95 ರು., ಮಾಂಸಾಹಾರ ಬಿರಿಯಾನಿಗೆ 127 ರು. ದರ ನಿಗದಿ ಪಡಿಸಲಾಗಿದೆ.
ನವದೆಹಲಿಯ ಶ್ರೀನಾಥ್‌ಜೀ ಕೇಟರರ್ಸ್ ಅವರು ಈ ಗುತ್ತಿಗೆ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಮೈಸೂರು ವಿಭಾಗದ ದಾವಣಗೆರೆ ರೈಲು ನಿಲ್ದಾಣದಲ್ಲಿಯೂ ಈ ಕೇಂದ್ರ ತೆರೆಯುವ ಉದ್ದೇಶ ಇದೆ.
ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ವಿನೋದ್‌ಕುಮಾರ್ ಈ ಫುಡ್ ಪ್ಲಾಜಾ ಉದ್ಘಾಟಿಸಿ ಮಾತನಾಡಿ, ಮೈಸೂರಿಗೆ ದೇಶ- ವಿದೇಶಗಳಿಂದ ಪ್ರವಾಸಿಗರು ಆಗಮಿಸುವುದರಿಂದ ಈ ಫುಟ್ ಪ್ಲಾಜಾ ಅಗತ್ಯವಿತ್ತು. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕು ಎಂದರು.
ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಬೋಜ್, ವಾಣಿಜ್ಯ ವಿಭಾಗದ ಹಿರಿಯ ವಿಭಾಗೀಯ ವ್ಯವಸ್ಥಾಪಕ ಅನಿಲ್‌ಕುಮಾರ್, ವಿಭಾಗೀಯ ಎಲೆಕ್ಟ್ರಿಕಲ್ ಎಂಜಿನಿಯರ್ ಸೌಂದರರಾಜನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.