ಬೈಲಕುಪ್ಪೆಯಲ್ಲಿ ವಾಲ್ಮೀಕಿ ಜಯಂತಿ
ಕ.ಪ್ರ.ವಾರ್ತೆ , ಬೈಲುಕುಪ್ಪೆ , ಅ. 18
ವಿಶ್ವಮಾನವ ವಾಲ್ಮೀಕಿ ಒಂದು ಜನಾಂಗಕ್ಕೆ ಸೀಮಿತವಲ್ಲ ಎಂದು ಬೈಲಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್ ಹೇಳಿದರು. ಮಂಚೆದೇವನಹಳ್ಳಿ ಗ್ರಾಮದಲ್ಲಿ ಶುಕ್ರವಾರ ವಾಲ್ಮೀಕಿ ಜಯಂತಿ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ ಮಾತನಾಡಿದ ಅವರು, ರತ್ನಾಕರ ಹೆಚ್ಚಿನ ಸಂಪಾದನೆಗಾಗಿ ಅವಿರತ ತಪಗೈದ.
ಅವನ ಸುತ್ತಲೂ ವಾಲ್ಮೀಕಿ ಹುತ್ತ ಬೆಳೆಯಿತು. ರಾಮ ಧ್ಯಾನದಲ್ಲಿ ನಿರತನಾದ ಅವನನ್ನು ಪುನಃ ಸಪ್ತ ಋಷಿಗಳೇ ಬಂದು ಎಚ್ಚರಿಸಿ ವಾಲ್ಮೀಕದಿಂದ ಈಚೆಗೆ ತಂದು, ವಾಲ್ಮೀಕಿ ಎಂದೆ ನಾಮಕರಣ ಮಾಡಿದರು ಎಂದು ತಿಳಿಸಿದರು.
ಚಿಗುರು ಜಾನಪದ ಕಲಾತಂಡ ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಬೈಲಕುಪ್ಪೆ ಗ್ರಾಪಂ ಸದಸ್ಯರಾದ ಮಹದೇವ, ವರ್ತಕರಾದ ವೆಂಕಟೇಶ್, ಗ್ರಾಮದ ಹನುಮನಾಯಕ, ಶ್ರೀನಿವಾಸ, ಶಿವಣ್ಣ, ಹನುಮಂತನಾಯಕ, ಗಿಡ್ಡೇಗೌಡ, ಪ್ರಭಾಕರ, ಸ್ವಾಮಿನಾಯಕ, ವೆಂಕಟೇಶ, ನಾರಾಯಣನಾಯಕ, ಮಂಜುನಾಯಕ, ಗೌರಮ್ಮ ಇದ್ದರು.
ಹಲವೆಡೆ ವಾಲ್ಮೀಕಿ ಜಯಂತಿ
ಹುಣಸೂರು: ಮಾನವನ ಪ್ರತಿ ಪಯಣದಲ್ಲಿ ರಾಮನ ಹೆಸರಿಲ್ಲದೆ ಏನು ನಡೆಯದು, ಆದರೆ ವಾಲ್ಮೀಕಿ ಜಯಂತಿಯನ್ನು ಒಂದೇ ವರ್ಗ ಆಚರಿಸುವಂತಾಗಬೇಕಾಗಿರುವುದು ದುರ್ದೈವದ ಸಂಗತಿ ಎಂದು ಮೈಸೂರು ವಿವಿಯು ಮಂಡ್ಯ ಪಿ.ಜಿ. ಕೇಂದ್ರದ ಅರ್ಥಶಾಸ್ತ್ರ ಸಂಶೋಧಕ ಡಿ. ಬೆಟ್ಟನಾಯಕ ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪುರಸಭಾ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಮಾತನಾಡಿದರು. ಶಾಸಕ ಎಚ್.ಪಿ. ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, 1 ಕೋಟಿ ವೆಚ್ಚದಲ್ಲಿ ಹುಣಸೂರಿನಲ್ಲಿ ಹಾಗೂ 50 ಲಕ್ಷ ವೆಚ್ಚದಲ್ಲಿ ಬಿಳಿಕೆರೆಯಲ್ಲಿ ವಾಲ್ಮೀಕಿ ಭವನ ನಿರ್ಮಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಸೂಕ್ತ ಸ್ಥಳ ಗುರುತಿಸಲು ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕರು ತಿಳಿಸಿದರು.
ಜಿಪಂ ಸದಸ್ಯರಾದ ಡಾ. ಪುಷ್ಪಾವತಿ ಅಮರ್ನಾಥ್, ದೇವರಾಜ್, ರಮೇಶ್, ತಾಪಂ ಅಧ್ಯಕ್ಷೆ ದೇವಕಿ ತಿಮ್ಮನಾಯ್ಕ, ಸದಸ್ಯ ಪ್ರಸನ್ನ, ತಾ. ನಾಯಕರ ಸಂಘದ ಅಧ್ಯಕ್ಷ ತಿಮ್ಮನಾಯ್ಕ, ಮುಖಂಡ ಹರಿಹರ ಆನಂದಸ್ವಾಮಿ, ತಾಪಂ ಇಒ ಮಹದೇವಸ್ವಾಮಿ, ತಹಸೀಲ್ದಾರ್ ವೆಂಕಟಾಚಲಪ್ಪ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಜಯರಾಂ, ರಾಚಪ್ಪ, ಸುಬ್ಬರಾವ್ ಮಾತನಾಡಿದರು. ತಾಪಂ ಉಪಾಧ್ಯಕ್ಷ ಮಹದೇವ, ಮಾಜಿ ಅಧ್ಯಕ್ಷೆ ಚಂದ್ರಕಲಾ ಇದ್ದರು. ಸಮಾರಂಭಕ್ಕೂ ಮುನ್ನ ರಂಗನಾಥ ಬಡಾವಣೆಯಿಂದ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಯಿತು.
ಸಾಲಿಗ್ರಾಮ
ಮಹಾನ್ ದಾರ್ಶನಿಕ ಮಹರ್ಷಿ ವಾಲ್ಮೀಕಿಯವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸುಂದರ ಸಮಾಜದ ನಿರ್ಮಾಣಕ್ಕೆ ಕಾರಣರಾಗಬೇಕೆಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಚ್.ಡಿ. ಮಂಜುನಾಥ್ ಹೇಳಿದರು. ಗ್ರಾಪಂ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದ ಅವರು, ತಮ್ಮ ಜೀವನವನ್ನೆ ಸಮಾಜಕ್ಕಾಗಿ ಮುಡುಪಾಗಿಟ್ಟು ಜಾಗೃತಿಗಾಗಿ ದುಡಿದ ಮಹಾಪುರುಷರಲ್ಲಿ ವಾಲ್ಮೀಕಿಯವರು ಪ್ರಮುಖರು ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷೆ ರಾಣಿ ರಾಜಣ್ಣ, ಉಪಾಧ್ಯಕ್ಷ ಎಸ್.ಎಸ್. ನಟರಾಜ್, ಸದಸ್ಯರಾದ ಸಾ.ರಾ. ಗುರುಪ್ರಸಾದ್, ಎಸ್.ಟಿ. ರೇವಣ್ಣ, ದೇವೇಗೌಡ, ಶೇಖರಚಾರ್, ವನಜಾಕ್ಷಿ, ಸಿಬ್ಬಂದಿಗಳಾದ ಅಭಿ, ಮರೀಗೌಡ, ವಸಂತ, ಮಾರ, ಕೃಷ್ಣ ಇದ್ದರು.
ಕಂಪ್ಲಾಪುರ
ಮಹರ್ಷಿ ವಾಲ್ಮೀಕಿ ಕೇವಲ ಒಂದು ಜನಾಂಗಕ್ಕೆ ಸೀಮಿತರಲ್ಲ ಎಂದು ಕಂಪ್ಲಾಪುರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವರಾಜ್ ಹೇಳಿದರು. ತಾಲೂಕಿನ ಕಂಪಲಾಪುರ ಗ್ರಾಮದ ವಿನಾಯಕ ವೃತ್ತದಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಯಂತಿ ಆಚರಣೆ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ, ಪ್ರತಿಯೊಬ್ಬರೂ ಆಚರಿಸುವಂತಾಗಬೇಕು ಎಂದು ತಿಳಿಸಿದರು. ಎಸ್ಡಿಎಂಸಿ ಮಾಜಿ ಅಧ್ಯಕ್ಷ ಐ.ಎಸ್. ಸುಬ್ರಹ್ಮಣ್ಯ, ಕೆ.ಪಿ. ಕುಮಾರ್ ಮಾತನಾಡಿದರು. ಜಿಪಂ ಸದಸ್ಯ ಎಂ.ಪಿ. ಚಂದ್ರೇಶ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ. ರಮೇಶ್, ಗ್ರಾಪಂ ಸದಸ್ಯ ಪ್ರಕಾಶ್ಗೌಡ, ಮಾಜಿ ಅಧ್ಯಕ್ಷ ಕೆ. ಕುಮಾರ್, ಸಹಕಾರ ಸಂಘದ ಅಧ್ಯಕ್ಷ ರವಿ, ನಿರ್ದೇಶಕ ಕೆ.ಸಿ. ರಾಜೇಗೌಡ, ಕೆ.ಪಿ. ನಿಂಗರಾಜು, ಎಸ್ಡಿಎಂಸಿ ಅಧ್ಯಕ್ಷ ಲಕ್ಷ್ಮಣ್, ಬಿಳಿಗಿರಿನಾಯಕ, ಸೂರಿ, ನಿಂಬೆ ರಾಜ ಇದ್ದರು.
ಕೆಂಡನಕೊಪ್ಪಲು
ಟಿ. ನರಸೀಪುರ ತಾಲೂಕಿನ ಕೆಂಡನಕೊಪ್ಪಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೇಟೆಗಾರರಾಗಿದ್ದ ಮಹರ್ಷಿ ವಾಲ್ಮೀಕಿ ಅವರು ಮಹಾನ್ ತಪಸ್ವಿಯಾಗಿ ಪರಿವರ್ತನೆಯ ಹರಿಕಾರರಾದರು. ನಂತರ ಮನುಕುಲದ ಒಳಿತಿಗಾಗಿ ರಾಮಾಯಣವನ್ನು ರಚನೆ ಮಾಡಿದರು. ಅಂತಹವರ ಸ್ಮರಣೆ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು. ಮುಖ್ಯ ಶಿಕ್ಷಕಿ ಉಮಾರಾಣಿ, ಶಿಕ್ಷಕರಾದ ಮಲ್ಲಪ್ಪ, ಚಾಮುಂಡಿ, ಯಜಮಾನ್ ಮಾದೇಶ್, ನಂಜುಂಡನಾಯ್ಕ, ಮಲ್ಲೇಶ್, ಮುಖಂಡರಾದ ಗೌರೀಶ್, ಸಿದ್ದಪ್ಪಾಜಿ, ಸಿದ್ದಪ್ಪ, ಮಲ್ಲಪ್ಪ, ಅಂಗನವಾಡಿ ಕಾರ್ಯಕರ್ತೆ ಗೌರಮ್ಮ ಇದ್ದರು.
ಟಿ. ನರಸೀಪುರ ಪಪಂ ಕಚೇರಿ
ಪಪಂ ಕಚೇರಿ ಆವರಣದಲ್ಲಿ ಶುಕ್ರವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಪಪಂ ಸದಸ್ಯ ರಾಘವೇಂದ್ರ, ಮುಖ್ಯಾಧಿಕಾರಿ ವಿ.ಟಿ. ವಿಲ್ಸನ್, ಕಿರಿಯ ಎಂಜಿನಿಯರ್ ಪುರುಷೋತ್ತಮ, ಮುಖಂಡರಾದ ಲಿಂಗಣ್ಣ, ಪ್ರಕಾಶ, ಗುರುಮಲ್ಲ, ಲೆಕ್ಕ ಪರಿಶೋಧಕ ವಿನಯ್, ಯೋಜನಾಧಿಕಾರಿ ಕೆಂಪರಾಜು, ಮಹದೇವಯ್ಯ ಭಾಗವಹಿಸಿದ್ದರು. ಪಟ್ಟಣದ ಹೊಸ ತಿರುಮಕೂಡಲಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಮಹರ್ಷಿ ವಾಲ್ಮೀಕಿ ಪುರುಷರ ಸ್ವಸಹಾಯ ಸಂಘದಿಂದ ಹಮ್ಮಿಕೊಂಡಿದ್ದ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿಯವರ ಸ್ಮರಣೆಯೊಂದಿಗೆ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಪುಟ್ಟಮಾದು, ಪುಟ್ಟು, ದಾಮೂರ್ತಿ, ಪುರುಷ ಸ್ವಸಹಾಯ ಸಂಘದ ಮಹದೇವ, ಬಾಳೆಮಂಡಿ ರಮೇಶ್, ಯಜಮಾನ್ ರಮೇಶ, ಚಂದ್ರಶೇಖರ, ಅಂಗಡಿ ಸೋಮಣ್ಣ, ಆರ್. ಶೇಖರ್, ಬಸವಣ್ಣ, ಬಿ. ಮಹದೇವು, ಮಲ್ಲಕಾರ್ಜುನ, ಸಿದ್ದಪ್ಪ, ಕೃಷ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

