ರಾಮಾಯಣ ಮಹಾಕಾವ್ಯ ಪ್ರೇರಣೆಯಾಗಲಿ: ಜಯಣ್ಣ
ಕ.ಪ್ರ.ವಾರ್ತೆ , ಯಳಂದೂರು , ಅ. 18
ಮಹರ್ಷಿ ವಾಲ್ಮೀಕಿ ಬರೆದಿರುವ ರಾಮಾಯಣ ಮಹಾಕಾವ್ಯದ ಪ್ರೇರಣೆಯಿಂದ ನಾವೆಲ್ಲರೂ ನೀತಿವಂತರಾಗಬೇಕು ಎಂದು ಶಾಸಕ ಎಸ್.ಜಯಣ್ಣ ಹೇಳಿದರು.
ಪಟ್ಟಣದ ಜಹಗೀರ್‌ದಾರ್ ಬಂಗಲೆ ಅವರಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಾಲ್ಮೀಕಿ ಮಹರ್ಷಿಗಳು ಮೂರು ಸಾವಿರ ವರ್ಷಗಳ ಹಿಂದೆಯೇ ರಾಮಾಯಣದಂಥ ಮಹಾಕಾವ್ಯ ಬರೆದು ಮಹಾಜ್ಞಾನಿಗಳಾಗಿದ್ದಾರೆ. ಅವರ ಜಯಂತಿಯನ್ನು ಎಲ್ಲರೂ ಆಚರಿಸಬೇಕೆಂದು ಕರೆ ನೀಡಿದರು.
ಉಪನ್ಯಾಸಕ ಪಿ.ನಾಗೇಂದ್ರ ಮಾತನಾಡಿ, ವಾಲ್ಮೀಕಿ ದರೋಡೆ, ಕೊಲೆ, ಸುಲಿಗೆ ಮಾಡಿಲ್ಲ. ಅವೆಲ್ಲ ಕಟ್ಟು ಕಥೆ ಅಷ್ಟೇ. ಹಾಗೆ ಮಾಡಿದ್ದರೆ 24 ಸಾವಿರ ಪುಟದಷ್ಟು ಸಂಸ್ಕೃತದಲ್ಲಿ ಶ್ಲೋಕ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಸಂಶೋಧನೆಗಳಿಂದ ಇದು ತಿಳಿದು ಬಂದಿದೆ ಎಂದರು.
ಜಿಪಂ ಸದಸ್ಯೆ ಕೇತಮ್ಮ, ಜಿಪಂ ಮಾಜಿ ಸದಸ್ಯ ದಾಸ್, ತಾಪಂ ಸದಸ್ಯರಾದ ವೆಂಕಟಚಲ, ಕೆ.ಪಿ.ಶಿವಣ್ಣ, ಲಕ್ಷ್ಮೀದೇವಿ, ಉಮಾವತಿ, ರಾಮಚಂದ್ರ, ನಾಗೇಶ್, ಪಪಂ ಸದಸ್ಯರಾದ ಭೀಮಪ್ಪ, ನಾಗರಾಜು, ವೈ.ಜಿ.ಶಿಲ್ಪ, ಜೆ.ಶ್ರೀನಿವಾಸ್, ತಾಲೂಕು ನಾಯಕ ಸಂಘದ ಅಧ್ಯಕ್ಷ ಮುರುಳಿಕೃಷ್ಣಾ, ಶಿವಯ್ಯ ನಾಯ್ಕ, ಕೆಸ್ತೂರು ರಾಮನಾಯಕ, ತಹಸೀಲ್ದಾರ್ ಜಗದೀಶ್, ಬಿಇಒ ಮಂಜುನಾಥ್, ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ್, ಇಒ ದೇವರಾಜು ಇದ್ದರು.
ಮೆರವಣಿಗೆ: ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಪಟ್ಟಣದ ತಾಲೂಕು ಕಚೇರಿ ಅವರಣದ ಬಳಿ ಪಲ್ಲಕ್ಕಿಯಲ್ಲಿದ್ದ ವಾಲ್ಮೀಕಿ ಭಾವಚಿತ್ರಕ್ಕೆ ಸಂಸದ ಆರ್.ಧ್ರುವವನಾರಾಯಣ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆ ನಡೆಯುತ್ತಿದ್ದ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ರಸಾದ್ ಆಗಮಿಸಿ ಪುಷ್ಪಾರ್ಚನೆ ಮಾಡಿದರು.
ಮೆರವಣಿಗೆಯಲ್ಲಿ ಕಲಾ ತಂಡಗಳಾದ ವೀರಗಾಸೆ, ಮಾರಿ ಕುಣಿತ, ಕೋಲಾಟ, ನಗರಿ, ತಮಟೆವಾದ್ಯ ಮೇಳಗಳು, ವೀರಮದಕರಿ ನಾಯಕ, ವಾಲ್ಮೀಕಿ ಮಹರ್ಷಿ ವೇಷಭೂಷಣಧಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಶಾಲಾ ಮಕ್ಕಳಿಂದ ಕಳಸ ಮೆರವಣಿಗೆ, ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸ್ತಬ್ದ ಚಿತ್ರಗಳು ಜನರ ಕಣ್ಮನ ಸೆಳೆದವು.
ಮೆರವಣಿಗೆ ಕೆ.ಕೆ.ರಸ್ತೆ ಮುಖಾಂತರ ಹಳೆ ಅಂಚೆ ಕಚೇರಿ ಬೀದಿ, ಬಳೇಪೇಟೆ, ಕೆಇಬಿ ಕಚೇರಿ, ದೊಡ್ಡಂಗಡಿ ಬೀದಿ ಮುಖಾಂತರ ಬಸ್ ನಿಲ್ದಾಣ, ಮಹದೇಶ್ವರ ಚಿತ್ರಮಂದಿರ, ಗಾಂಧಿಸರ್ಕಲ್ ತಲುಪಿ ಜಹಗೀರ್‌ದಾರ್ ಬಂಗಲೆ ಅವರಣ ಪ್ರವೇಶಿಸಿತು.
ವಾಲ್ಮೀಕಿ ಜಯಂತಿ ಅಂಗವಾಗಿ ಬಳೇಮಂಟಪ, ಗೌರೇಶ್ವರ, ಪಾರ್ವತಿ, ಭೂವರಹ ಸ್ವಾಮಿ, ದೇವಾಲಯ, ಜಹಾಗೀರ್‌ದಾರ್ ಬಂಗಲೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ತಾಲೂಕಿನ ವಿವಿಧ ಗ್ರಾಮಗಳಿಂದ ನಾಯಕ ಸಮಾಜದ ನೂರಾರು ಜನ ಭಾಗವಹಿಸಿದ್ದರು. ಪಟ್ಟಣದ ಮುಖ್ಯ ರಸ್ತೆ ಹಾಗೂ ಪ್ರಮುಖ ಬೀದಿಗಳನ್ನು ಬಾಳೆ ಕಂದು, ಮಾವಿನ ತೋರಣಗಳಿಂದ ಸಿಂಗರಿಸಲಾಗಿತ್ತು.
ಜಿಪಂ ಸದಸ್ಯ ಕೇತಮ್ಮ, ತಾಪಂ ಅಧ್ಯಕ್ಷೆ ಗಂಗಾಮಣಿ, ತಾಪಂ ಸದಸ್ಯರಾದ ವಿಜಯಲಕ್ಷ್ಮಿ, ಕಂದಹಳ್ಳಿ ನಾಗೇಶ್, ಕೆಪಿ.ಶಿವಣ್ಣ, ಮಹೇಶ್ವರಿ, ಲಕ್ಷ್ಮೀದೇವಿ, ರಾಮಚಂದ್ರ, ವೆಂಕಟಾಚಲ, ಪಪಂ ಸದಸ್ಯರಾದ ಭೀಮಪ್ಪ, ರವಿ, ಉಮಾಶಂಕರ್, ನಿಂಗರಾಜು. ಮಹದೇವಮ್ಮ, ನಾಗರತ್ನ, ಶಿಲ್ಪ, ತಹಸೀಲ್ದಾರ್ ಎನ್.ಸಿ.ಜಗದೀಶ್, ತಾಪಂ ಇಒ ದೇವರಾಜು, ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ್, ಬಿಇಒ ಮಂಜುನಾಥ್, ಪಪಂ ಮುಖ್ಯಾಧಿಕಾರಿ ವಿಜಯ್, ತಾಲೂಕು ನಾಯಕ ಸಂಘದ ಅಧ್ಯಕ್ಷ ವೈ.ಎನ್.ಮುರಳಿಕೃಷ್ಣಾ, ಗ್ರಾಪಂ ಮಾಜಿ ಅಧ್ಯಕ್ಷ ಸಿ.ಸಿದ್ದನಾಯಕ, ಮದ್ದೂರು ಸೋಮಶೇಖರ್, ಬಿ.ರಂ.ಬೆಟ್ಟದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಮೈಸೂರು ಶ್ರೀನಿವಾಸ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

