ಮೈಸೂರು

ಮಹಿಳಾ ಸಾಹಿತ್ಯಕ್ಕೆ ಹಾಸ್ಯ ವಿರಳ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಅ. 26
ಮಹಿಳಾ ಸಾಹಿತ್ಯದಲ್ಲಿ ಹಾಸ್ಯಪ್ರಜ್ಞೆ ವಿರಳ ಎಂದು ಸಾಹಿತಿ ಡಾ.ಸಿಪಿಕೆ ಅಭಿಪ್ರಾಯಪಟ್ಟರು.
ಸತ್ಯವತಿ ವಿಜಯರಾಘವಾಚಾರ್ ಚಾರಿಟಬಲ್ ಟ್ರಸ್ಟ್ ಸರಸ್ವತಿಪುರಂನ ಜೆಎಸ್‌ಎಸ್ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸತ್ಯ ಸದನ ವಿದ್ಯಾರ್ಥಿ ನಿಲಯದ ದಶಮಾನೋತ್ಸವ ಸಮಾರಂಭದಲ್ಲಿ ಪುಷ್ಪ ಅಯ್ಯಂಗಾರ್ ಅವರ ಪುಷ್ಪಗುಚ್ಚ ಹನಿಗವಿತೆಗಳ ಸಂಕಲನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಮಹಿಳೆಯರಲ್ಲಿ ಹಾಸ್ಯಪ್ರಜ್ಞೆ ಕಡಿಮೆ, ಅಂತೆಯೇ ಅವರು ರಚಿಸುವ ಸಾಹಿತ್ಯದಲ್ಲಿಯೂ ಹಾಸ್ಯ ಮತ್ತು ವಿಡಂಬನೆಯ ಕೊರತೆ ಕಾಣಬಹುದು. ಲೇಖಕಿಯರು ತಮ್ಮ ಜೀವನದ ಅನುಭವ ಹಾಗೂ ಸಮಾಜದ ಕೌಟುಂಬಿಕ ಸಮಸ್ಯೆ ಕುರಿತಾದ ಗೋಳುಗಳನ್ನು ಸಾಹಿತ್ಯದ ಮೂಲಕ ತೋಡಿಕೊಳ್ಳುತ್ತಾ, ಗಂಭೀರ ಸಾಹಿತ್ಯದಲ್ಲಿ ತೊಡಗಿರುವುದು ಸಹಜ ಎಂದರು.
ಕಾವ್ಯಕ್ಕೆ ವರ್ತಮಾನ ಹಾಗೂ ಸಾಮಾಜಿಕ ಪ್ರಜ್ಞೆ ಒಂದು ಕಣ್ಣಾದರೆ, ಹಾಸ್ಯ ಮತ್ತು ವಿಡಂಬನೆ ಮತ್ತೊಂದು ಕಣ್ಣು. ಆದರೆ ಇವುಗಳನ್ನು ನೋಡುವ ನೋಟ ಒಂದೇ ಆದರೂ, ಮೂರನೇ ಕಣ್ಣಿನ ಅಗತ್ಯವಿದೆ. ಅದುವೇ ಒಳಗಣ್ಣು. ಪುಷ್ಪ ಅಯ್ಯಂಗಾರ್ ಅವರ ಕಾವ್ಯದಲ್ಲಿ ಹಾಸ್ಯ ಮತ್ತು ವಿಡಂಬನೆ ಸಾಕಷ್ಟಟಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚುಟುಕುಗಳ ಮಹಾಪೂರ ಹರಿದಿದೆ. ಆದರೆ ಇಂತಹ ಹನಿಗವನಗಳಲ್ಲವೂ ಉತ್ತಮ ಗುಣಮಟ್ಟ ಹೊಂದಿವೆ ಎಂದು ಹೇಳಲಾಗದು. ಅಪ್ಪಟ ಕಾವ್ಯಕ್ಕೆ ರಸಧ್ವನಿ ಇರಬೇಕು. ಅದು ಸಹೃದಯರಿಗೆ ಸಂತೋಷ ಕೊಡಬೇಕು. ಚಮತ್ಕಾರ ದಾಟಿ ಸಾಕ್ಷಾತ್ಕಾರ ಮೂಡಿಸಬೇಕು. ಇಂದು ಸಮಾಜದಲ್ಲಿ ದ್ವೇಷ ಹೆಚ್ಚಾಗಿ ಪ್ರೀತಿಗೆ ಕೊರತೆಯುಂಟಾಗಿದೆ. ಈ ಕೊರತೆ ನೀಗಿಸಿ ಸಮಾಜಕ್ಕೆ ಕಾವ್ಯಗಳು ಸಂದೇಶಗಳನ್ನು ನೀಡಬೇಕು ಎಂದರು.
ಸ್ಮರಣ ಸಂಚಿಕೆಯನ್ನು ಯೋಗನರಸಿಂಹ ದೇವಸ್ಥಾನದ ಸಂಸ್ಥಾಪಕ ಪ್ರೊ.ಭಾಷ್ಯಂ ಲೋಕಾರ್ಪಣೆಗೊಳಿಸಿದರು. ಲೇಖಕಿ ಪುಷ್ಪ ಅಯ್ಯಂಗಾರ್ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.  ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಚಂದ್ರಶೇಖರ್ ಮುಖ್ಯ ಅತಿಥಿಯಾಗಿದ್ದರು. ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಗೌರವ ಕಾರ್ಯದರ್ಶಿ ಡಾ. ವೈ.ಡಿ ರಾಜಣ್ಣ ಸ್ವಾಗತಿಸಿದರು. ಲೇಖಕಿ ಡಾ. ಅನುಸೂಯ ಕೆಂಪನಹಳ್ಳಿ ನಿರೂಪಿಸಿದರು. ಸಂಸ್ಥೆ ಧರ್ಮದರ್ಶಿ ವೈದೇಹಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.