ಮೈಸೂರು

ಆರ್ಬಿಎನ್ಸಿಸಿ ಎ ತಂಡಕ್ಕೆ ಗೆಲವು

Published On :

ಮೈಸೂರು: ನಗರದ ಜೆಎಸ್ಎಸ್- ಎಸ್ಜೆಸಿಇ ಮೈದಾನದಲ್ಲಿ ನಡೆಯುತ್ತಿರುವ ಕೆಎಸ್ಸಿಎ ಮೈಸೂರು ವಲಯ ಪ್ರಥಮ ವಿಭಾಗೀಯ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್ಬಿಎನ್ಸಿಸಿ ಎ ತಂಡವು ದಿ ಮೈಸೂರು ಸಿಟಿ ಜಿಮ್ಖಾನ ವಿರುದ್ಧ ರೋಚಕ ಜಯ ಸಾಧಿಸಿತು. ಆರ್ಬಿಎನ್ಸಿಸಿ ಎ ತಂಡದ ಎಂ.ಎಸ್. ರವೀಂದ್ರ ಅವರ ಮಿಂಚಿನ ಬೌಲಿಂಗ್ ಪಂದ್ಯದ ಗೆಲವಿಗೆ ಕಾರಣವಾಯಿತು. 36 ರನ್ ನೀಡಿ 3 ವಿಕೆಟ್ ಹಾಗೂ ಆಲ್ರೌಂಡರ್ ಸಚಿನ್ ಪಾಂಡೆ 34ಕ್ಕೆ 3 ವಿಕೆಟ್ ಕಬಳಿಸಿ, 28 ರನ್ ಗಳಿಸಿದರು. ಮೊದಲು ಬ್ಯಾಟ್ ಮಾಡಿದ ಆರ್ಬಿಎನ್ಸಿಸಿ ಎ ತಂಡವು 32.3 ಓವರ್ಗೆ 122 ರನ್ ಕಲೆಹಾಕಿತು. ದಿ ಮೈಸೂರು ಸಿಟಿ ಜಿಮ್ಖಾನ ತಂಡವು 120 ಕಲೆ ಹಾಕುವಷ್ಟರಲ್ಲೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡ ಸೋಲೊಪ್ಪಿಕೊಂಡಿತು.
ಚೆಸ್ನಲ್ಲಿ ಅಜಿತ್ಗೆ ಪ್ರಶಸ್ತಿ
ಮೈಸೂರು: ಎಸ್ಕೆಆರ್ ಫೌಂಡೇಷನ್ ನಡೆಸಿದ ಎಸ್ಕೆಆರ್ ಸ್ಮಾರಕ ಜಿಲ್ಲಾ ಮುಕ್ತ ಚದುರಂಗ ಪಂದ್ಯಾವಳಿಯಲ್ಲಿ ರಂಗರಾವ್ ಆ್ಯಂಡ್ ಸನ್ಸ್ ಸಂಸ್ಥೆಯ ಎಂ.ಪಿ. ಅಜಿತ್ ಪ್ರಶಸ್ತಿ ಗೆದ್ದರು. ಮೈಸೂರು ವೃತ್ತಿಪರ ಚದುರಂಗ ಅಕಾಡೆಮಿಯಿಂದ ಭಾಗವಹಿಸಿದ್ದ ಅಜಿತ್ ಸಮೀಪದ ಸ್ಪರ್ಧಿಗಳಾದ ಎಲ್. ವಿವೇಕಾನಂದ ಹಾಗೂ ಕೇದಾರ್ ಉಮೇಶ್ ವಾಜ್ ಅವರಿಗೆ ಪೈಪೋಟಿ ನೀಡಿದರು. ಏಳು ಸುತ್ತುಗಳಲ್ಲಿಯೂ 5.5 ಅಂಕ ಗಳಿಸಿದ ಅಜಿತ್ಗೆ ಟೈ ಬ್ರೇಕರ್ನಲ್ಲಿ ಗಳಿಸಿದ್ದ 32 ಅಂಕ ಜಯ ಗಳಿಸಲು ಮುಖ್ಯ ಕಾರಣವಾಯಿತು. ಮೊದಲ ಬಹುಮಾನ 2000 ಅನ್ನು ಅಜಿತ್, ಎರಡನೇ ಬಹುಮಾನ 1,500 ಅನ್ನು ವಿವೇಕಾನಂದ ಹಾಗೂ ಮೂರನೇ ಬಹುಮಾನ 800 ಅನ್ನು ಉಮೇಶ್ ವಾಜ್ ಪಡೆದುಕೊಂಡರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.