ಮೈಸೂರು

ಸಂಗೀತ ವಿವಿಗೆ ಧರ್ಮಾಪುರ ಬಳಿ ಜಾಗ

Published On :

ಕ.ಪ್ರ. ವಾರ್ತೆ   ಹುಣಸೂರು   ಸೆ.6
ಧರ್ಮಾಪುರ ಜಿಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಗೀತ ವಿವಿ ಸ್ಥಾಪಿಸಬೇಕೆನ್ನುವುದು ತಮ್ಮ ಕನಸಾಗಿದ್ದು, ಈ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಮಂಜೂರಾತಿ ಮಾಡಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗವುದು ಎಂದು ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.
ತಾಲೂಕಿನ ರತ್ನಪುರಿ ಗ್ರಾಮದಲ್ಲಿ 1.14 ಕೋಟಿ ವೆಚ್ಚದ ಕಸ್ತೂರಬಾ ಬಾಲಕಿ ವಸತಿಶಾಲೆ ಕಾಮಗಾರಿಗೆ ಶುಕ್ರವಾರ ಗುದ್ದಲಿಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದ ಬಳಿಕ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಧರ್ಮಾಪುರ ಜಿಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಮೊರಾರ್ಜಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ಈಗ ಕಸ್ತೂರಬಾ ವಸತಿಶಾಲೆ ಕೂಡ ಪ್ರಾರಂಭವಾಗುತ್ತಿರುವುದು ಈ ಭಾಗದ ಜನರ ಪುಣ್ಯವಾಗಿದೆ. ಕಸ್ತೂರ ಬಾ ವಸತಿ ಶಾಲೆಯಲ್ಲಿ ಪ್ರಥಮ ಹಂತವಾಗಿ 6 ರಿಂದ ದ್ವಿತೀಯ ಪಿಯುಸಿವರೆಗಿನ 100 ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಒತ್ತುವರಿ ಸಮಸ್ಯೆಗೆ ಪರಿಹಾರ: ರತ್ನಪುರಿ ಸರ್ಕಾರಿ ಪ್ರೌಢಶಾಲೆಗೆ ಸೇರಿದ ಭೂಮಿ ಒತ್ತುವರಿಯಾಗಿದ್ದು, ಶೀಘ್ರದಲ್ಲಿ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಇದೆ ಆವರಣದಲ್ಲಿ ಪಿಯು ಕಾಲೇಜಿಗೆ ಕೊಠಡಿ ಸಮಸ್ಯೆ ಇದೆ ಎನ್ನುವುದು ತಮ್ಮ ಅರಿವಿಗೆ ಬಂದಿದ್ದು, ಡಿಸೆಂಬರ್ ತಿಂಗಳಾಂತ್ಯಕ್ಕೆ ಶಾಸಕರ ಅನುದಾನ ಬರಲಿದ್ದು, ಕೊಠಡಿ ನಿರ್ಮಿಸಲು ಅನುದಾನ ಒದಗಿಸಲಾಗುವುದು. ಪಿಯುಸಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಯೋಗಾಲಯ ಇನ್ನಿತರ ಪೀಠೋಪಕರಣಗಳನ್ನು ವೈಯಕ್ತಿಕವಾಗಿ ತಾವು ಒದಗಿಸಲು ಸಿದ್ಧರಿದ್ದು, ಕಾಲೇಜು ಆಡಳಿತ ಅಗತ್ಯವಿರುವ ಪೀಠೋಪಕರಣಗಳ ಕುರಿತು ತಮಗೆ ಮಾಹಿತಿ ಒದಗಿಸಲು ಸೂಚಿಸಿದರು.
ಜಿಪಂ ಸದಸ್ಯರಾದ ರಮೇಶ್, ಡಾ.ಬಿ. ಪುಷ್ಪಾ ಅಮರನಾಥ್, ತಾಪಂ ಸದಸ್ಯರಾದ ಜಯಂತಿ, ಪರಮೇಶ್ವರಿ, ಆಸ್ಪತ್ರೆ ಕಾವಲ್ ಗ್ರಾಪಂ ಅಧ್ಯಕ್ಷ ರಾಮಯ್ಯ, ಉದ್ದೂರು ಕಾವಲ್ ಗ್ರಾಪಂ ಅಧ್ಯಕ್ಷ ವೆಂಕಟರಾಮು, ಬಿಇಒ ರಾಜಶೇಖರ್, ಜಿಪಂ ಮಾಜಿ ಸದಸ್ಯ ಡಿ.ಕೆ.ಕುನ್ನೇಗೌಡ, ಬಿಳಿಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು, ಪ್ರಾಂಶುಪಾಲ ಗುಣಶೇಖರ್ ಇದ್ದರು. ಮುಖ್ಯಶಿಕ್ಷಕ ಮೋಹನ್ ರಾಜ್ ಸ್ವಾಗತಿಸಿದರು. ಶಿಕ್ಷಕ ತಿಮ್ಮೇಗೌಡ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.