ಮೈಸೂರು

ರಾಜೇಂದ್ರ ಶ್ರೀಗಳಿಂದ ಅಕ್ಷರ, ಅನ್ನ ದಾಸೋಹ: ಗೋಗಿ

Published On :

ಕ.ಪ್ರ. ವಾರ್ತೆ   ಮೈಸೂರು   ಸೆ. 7
ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರು ಹಾಕಿಕೊಟ್ಟ ಅಕ್ಷರ ಮತ್ತು ಅನ್ನದಾಸೋಹಗಳ ಮಹತ್ವ ಜ್ಞಾಪಿಸಿಕೊಂಡು ಇಂದಿನ ಅಭಿವೃದ್ಧಿಗೆ ಅವರ ಕೊಡುಗೆ ಸ್ಮರಿಸುತ್ತಿದ್ದೇವೆ ಎಂದು ಆಯುಷ್ ಇಲಾಖೆಯ ನಿರ್ದೇಶಕ ವಿಜಯ್ಕುಮಾರ್ ಗೋಗಿ ಹೇಳಿದರು.
ನಗರದ ಜೆಎಸ್ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮಿಗಳ 98ನೇ ಜಯಂತಿ ಮಹೋತ್ಸವದಲ್ಲಿ ಮಾತನಾಡಿದರು. ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಡಾ.ಬಿ.ಎನ್. ಚಂದ್ರಯ್ಯ ಮಾತನಾಡಿ, ರಾಜೇಂದ್ರ ಸ್ವಾಮೀಗಳ ವ್ಯಕ್ತಿತ್ವ, ಕಾರ್ಯ ಸಾಧನೆ ಪರಿಕಲ್ಪನೆಗಳ ವೈಶಾಲ್ಯ ನೆನಪಿಸಿಕೊಳ್ಳುತ್ತಾ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಮುಂದುವರಿದರೆ ಪ್ರಗತಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕುದೇರು ಮಠದ ಗುರುಶಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಸ್ವಾಮೀಗಳ ಜೊತೆಯ ಒಡನಾಟ, ಅಂತಃಕರಣ, ಹೃದಯ ವೈಶಾಲ್ಯ ನೆನಪಿಸಿಕೊಂಡರು. ಸಂಸ್ಥೆಯ ಸಂಸ್ಥಾಪಕ ಪ್ರಾಂಶುಪಾಲ ಹಾಗೂ ನಿವೃತ್ತ ನಿರ್ದೇಶಕ ಡಾ. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾಮೀಜಿಯವರ ಕೃಪಾಕಟಾಕ್ಷದಲ್ಲಿ ತಾವು ಬೆಳೆದು ಬಂದ ಬಗೆ ವಿವರಿಸಿ, ಅವರ ಆಶೀರ್ವಾದ ಈ ಸಂಸ್ಥೆಯ ಮೇಲೆ ಸದಾ ನೆರಳಾಗಿರುತ್ತದೆ ಎಂದು ಹೇಳಿದರು.
ವಿವಿಧ ವಿಷಯದಲ್ಲಿ ಹೆಚ್ಚಿನ ಅಂಕ ಗಳಿಸಿದ ಪದವಿ ವಿದ್ಯಾರ್ಥಿಗಳಿಗೆ ಡಾ. ಚನ್ನಬಸಪ್ಪ, ಡಾ. ಲಕ್ಷ್ಮೀಶ ಉಪಾಧ್ಯ ಹಾಗೂ ಡಾ. ಸದಾನಂದ ಪರಗೊಂಡೆ ಕೊಡಮಾಡಿದ ಬಹುಮಾನ ವಿತರಿಸಲಾಯಿತು. ಡಾ. ಓಂಪ್ರಕಾಶ್ ಗೀತ ನಮನ ಸಲ್ಲಿಸಿದರು. ಡಾ. ನಾಗಮಣಿ ಹಾಗೂ ಡಾ. ಅಶೋಕ್ ಸಾತ್ಪುತೆ ಪ್ರತಿಜ್ಞಾ ವಿಧಿ ಬೋಧಿಸಿದರು. ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ ಅಧೀಕ್ಷಕ ಸುಚಿತಾ ವಚನ ಗಾಯನ ಪ್ರಸ್ತುತಪಡಿಸಿದರು. ಡಾ. ಪ್ರಾರ್ಥನ ನೃತ್ಯ ರೂಪಕಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿತು. ಡಾ.ಎಸ್.ಜಿ. ಮಂಗಲಗಿ ಸ್ವಾಗತಿಸಿದರು. ಡಾ. ರಮೇಶ್ಕುಮಾರ್ ನಿರೂಪಿಸಿದರು. ಪ್ರಾಂಶುಪಾಲ ಡಾ. ಲಕ್ಷ್ಮೀಶ್ ಉಪಾಧ್ಯ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.