ಕಾಡು ಕುರಿ ಮಾಂಸ ಸಾಗಿಸುತ್ತಿದ್ದ ಮೂವರ ಸೆರೆ
ಕ.ಪ್ರ.ವಾರ್ತೆ ಹುಣಸೂರು ಸೆ. 13
ಕಾಡು ಕುರಿ ಕೊಂದು ಮಾಂಸ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಗುರುವಾರ ಮಧ್ಯರಾತ್ರಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಜರುಗಿದೆ. ತಾಲೂಕಿನ ಹನಗೋಡು ಹೋಬಳಿಯ ದಾಸನಪುರ ಗ್ರಾಮದ ನೀರುಗಂಟಿ ಜಗದೀಶ, ರವಿಗೌಡ, ದಾಸನಪುರ ಕಾಲೋನಿಯ ಕುಮಾರ ಬಂಧಿತ ಆರೋಪಿಗಳು. ನಾಗರಹೊಳೆ ರಾಷ್ಟ್ರೀಯ ಉದ್ಯಾನ ವೀರನಹೊಸಳ್ಳಿ ವಲಯದ ಕಾಡಿನಲ್ಲಿ ಉರುಳು ಹಾಕಿ ಕಾಡು ಕುರಿಯನ್ನು ಕೊಂದು ಮಾಂಸ ಸಾಗಿಸುವ ಬಗ್ಗೆ ಅರಣ್ಯ ಇಲಾಖೆಗೆ ಬಂದ ಖಚಿತ ಮಾಹಿತಿ ಮೇರೆಗೆ, ವೀರನಹೊಸಳ್ಳಿ ವಲಯದ ವಲಯ ಅರಣ್ಯಾಧಿಕಾರಿ ಎನ್.ಪಿ. ರಾಜಪ್ಪ ನೇತೃತ್ವದಲ್ಲಿ ಮೂರ್ನಾಲ್ಕು ಸ್ಥಳಗಳಲ್ಲಿ ತಂಡಗಳು ಕಾಯುತ್ತಿದ್ದ ವೇಳೆ, ಉದ್ಯಾನದ ಕೆಂಪಗೌಡನ ಕಟ್ಟೆ ಕಡೆಯಿಂದ ಕಪ್ಪನಕಟ್ಟೆ ಹಾಡಿ ಬಳಿ ಆನೆ ಕಂದಕ ದಾಟಿ, ಮಾಂಸ ತುಂಬಿದ ಪ್ಲಾಸ್ಟಿಕ್ ಕವರ್ ಅನ್ನು ಹಿಡಿದು ಹೋಗುತ್ತಿದ್ದ ವೇಳೆ ಸುತ್ತುವರಿದು ಆರೋಪಿಗಳನ್ನು ಬಂಧಿಸಿದರು. ಬಂಧಿತರನ್ನು ವನ್ಯಜೀವಿ ಕಾಯ್ದೆಯಡಿ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಆರ್. ಗೋಕುಲ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಎನ್.ಪಿ. ರಾಜಪ್ಪ, ವನಪಾಲಕ ಮಹೇಶ್, ಅರಣ್ಯ ರಕ್ಷಕ ಕಿರಣ್ ಮದರ್ ಸಾಬ್, ಚಾಲಕ ಮಂಜು, ಅರಣ್ಯ ವೀಕ್ಷಕ ಗೋಪಿ, ಸಂಜೀವ್ ಕುಮಾರ್, ನವೀನ್ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

