ಮೈಸೂರು

ಜಾಗತಿಕ ಯುಗದಲ್ಲಿ ಸಂವಹನ ಕೌಶಲ ಅಗತ್ಯ

Published On :

ಕ.ಪ್ರ.ವಾರ್ತೆ  ಮೈಸೂರು  ಸೆ. 16
ಇಂದಿನ ಜಾಗತಿಕ ಯುಗದಲ್ಲಿ ಸಂವಹನ ಕೌಶಲ ಅತ್ಯವಶ್ಯಕ ಎಂದು ಎಸ್‌ಡಿಎಂ ಐಎಂಡಿ ಮಾಜಿ ನಿರ್ದೇಶಕ ಪ್ರೊ.ಜೆ.ಎಂ. ಸುಬ್ರಹ್ಮಣ್ಯ ಹೇಳಿದರು.
ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ಸೋಮವಾರ ಏರ್ಪಡಿಸಿದ್ದ ಎಂಬಿಎ ಹಾಗೂ ಎಂ.ಟೆಕ್ ಸ್ನಾತಕೋತ್ತರ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಿನ ಯಶಸ್ಸಿಗೆ ಸಂವಹನ ಕೌಶಲ ಅಗತ್ಯ. ಅದರಲ್ಲೂ ಇಂದಿನ ಆರ್ಥಿಕ ಪರಿಸ್ಥಿತಿಯ ಸನ್ನಿವೇಶದಲ್ಲಿ ಎಂಬಿಎ ವಿದ್ಯಾರ್ಥಿಗಳಂತೂ ಸಂವಹನ ಕೌಶಲವನ್ನು ಕರಗತ ಮಾಡಿಕೊಳ್ಳುವುದು ತೀರ ಅವಶ್ಯಕ. ಕೇವಲ ತರಗತಿಯಲ್ಲಿ ಕಲಿಯುವ ಪಾಠದಿಂದ ಮಾತ್ರ ಸಂವಹನ ಕಲೆ ಸಾಧ್ಯವಾಗುವುದಿಲ್ಲ. ಹೊರಗಿನ ಪ್ರಪಂಚದಲ್ಲಿನ ವಿದ್ಯಮಾನಗಳನ್ನು ಅರಿಯುವುದು, ಜನರೊಂದಿಗೆ ಬೆರೆಯುವುದು, ಪತ್ರಿಕೆಗಳನ್ನು ಓದುವುದು ಈ ಮುಂತಾದ ವಿಧಾನಗಳಿಂದ ಇಂತಹ ಕೌಶಲ ಸಾಧ್ಯ ಎಂದರು.
ಉತ್ಸಾಹ ಬತ್ತದಿರಲಿ: ಯುವಜನತೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾದಾಗ ಮಾತ್ರ ಹೆಚ್ಚಿನ ಸಾಧನೆ ಮಾಡಲು ಸಾಧ್ಯ. ಹಾಗೂ ಇದರಿಂದ ಆರೋಗ್ಯವಂತ ಸಮಾಜ ನಿರ್ಮಾಣವಾಗುವುದರ ಜತೆಗೆ ದೇಶ ಅಭಿವೃದ್ಧಿಯಾಗಲಿದೆ. ಸಮಯ ಹಾಗೂ ಶಕ್ತಿ ಸಾಮರ್ಥ್ಯಗಳ ಬಗ್ಗೆ ತಿಳಿಯುವುದು ಮತ್ತು ತಮ್ಮ ಭಾವನೆಗಳನ್ನು ನಿಯಂತ್ರಿಸುವ ನಿರ್ವಹಣೆಯನ್ನು ಹೊಂದುವುದು ಬಹುಮುಖ್ಯ. ತಮ್ಮೊಳಗಿರುವ ಶಕ್ತಿ ಹಾಗೂ ಉತ್ಸಾಹ ಬತ್ತದಂತೆ ಸದಾ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 2012-13ನೇ ಸಾಲಿನ ವಿವಿಧ ಸೆಮಿಸ್ಟರ್‌ಗಳಲ್ಲಿ ಅತ್ಯಧಿಕ ಅಂಕ ಗಳಿಸಿ ತೇರ್ಗಡೆಯಾಗಿರುವ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಾದ ಎಸ್.ಸಿ. ರಾಜೇಶ್, ಎಸ್.ಸೌಮ್ಯ, ವಿ.ಟಿ. ಶ್ವೇತಾ, ವರ್ಷ ಹಾಗೂ ಎಸ್. ಮಂಜುವಾಣಿ ಅವರನ್ನು ಸನ್ಮಾನಿಸಲಾಯಿತು.
ಶೈಕ್ಷಣಿಕ ಚಟುವಟಿಕೆಗಳ ಕುರಿತು ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಪಿ.ಎಸ್.ವಿ. ಬಾಲಾಜಿ ರಾವ್, ಡಾ. ಜಿ.ಬಿ. ಕೃಷ್ಣಪ್ಪ, ಡಾ.ಡಿ.ಜೆ. ರವಿ, ಡಾ.ಜಿ.ವಿ. ನವೀನ್ ಪ್ರಕಾಶ್ ಹಾಗೂ ಡಾ.ಸಿ.ಎಂ. ಪಾಟೀಲ್ ಅವರು ಮಾಹಿತಿ ನೀಡಿದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಎಸ್.ಎನ್. ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಹಾಗೂ ಮಾಜಿ ಮೇಯರ್ ಪಿ. ವಿಶ್ವನಾಥ್, ಪ್ರಾಂಶುಪಾಲ ಡಾ. ಬಿ. ಸದಾಶಿವೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.