ಮೈಸೂರು

ದೇಗುಲ ಒತ್ತುವರಿ ತೆರವಿಗೆ ಆಗ್ರಹ

Published On :

ಕ.ಪ್ರ.ವಾರ್ತೆ  ಕಿತ್ತೂರು  ಸೆ. 16
ಇಲ್ಲಿನ ಗ್ರಾಮದಲ್ಲಿರುವ ಅನಾದಿ ಕಾಲದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ (ನಂಜುಂಡೇಶ್ವರ) ಸ್ವಾಮಿಯ ದೇವಸ್ಥಾನಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಈ ಜಾಗವನ್ನು ಕೂಡಲೆ ತೆರವುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮಸ್ಥರು ಸೋಮವಾರ ಸಭೆ ನಡೆಸಿ, ಇನ್ನೊಂದು ವಾರದಲ್ಲಿ ಈ ಜಾಗವನ್ನು ತೆರವುಗೊಳಿಸದೆ ಹೋದರೆ ತಾಲೂಕು ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಭೆಯ ನೇತೃತ್ವ ವಹಿಸಿದ್ದ ಮುಖಂಡ ಕೆ.ಜೆ. ವೆಂಕಟೇಶ್ ಮಾತನಾಡಿ, ಶ್ರೀ ಸೋಮೇಶ್ವರ (ನಂಜುಂಡೇಶ್ವರ ) ದೇವಸ್ಥಾನದ ಜಾಗವನ್ನು ಅಕ್ಕಪಕ್ಕದವರು ಹಿಂದಿನಿಂದಲೂ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿ ಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಗ್ರಾಮದ ಲೇಟ್ ಜವರೇಗೌಡರ ಪುತ್ರ ಶಿವಣ್ಣ ಅವರು ದೇವಸ್ಥಾನಕ್ಕೆ ಸೇರಿದ ಖಾಲಿ ಜಾಗವನ್ನು ಮತ್ತು ದೇವಸ್ಥಾನದ ಹಳೆಯ ವಿಗ್ರಹಗಳನ್ನು ಮತ್ತು ದಿನನಿತ್ಯ ಪೂಜೆ ಮಾಡುತ್ತಿದ್ದ ಬಿಲ್ವಪತ್ರೆ ಮರವನ್ನು ಇತಿಹಾಸ ತಿಳಿಸುವ ಶಾಸನವನ್ನು ನಾಶಪಡಿಸಿದ್ದಾರೆ.
ಈ ದೇವಸ್ಥಾನಕ್ಕೆ ಸೇರಿದ ಜಾಗ ಒತ್ತುವರಿಯಾಗಿರುವುದರ ಬಗ್ಗೆ ಈಗಾಗಲೇ ಶಾಸಕ ಕೆ.ವೆಂಕಟೇಶ್ ಅವರಿಗೆ ದೂರನ್ನು ನೀಡಲಾಗಿದೆ. ಈ ವಿಚಾರವಾಗಿ ತುಂಬಾ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಕಾನೂನಿನಂತೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಬೇಕೆಂದು ತಿಳಿಸುವುದಾಗಿ ಭರವಸೆ ನೀಡಿದ್ದಾರೆ. ಐತಿಹಾಸಿಕ ಸ್ಥಳವನ್ನು ಸಂರಕ್ಷಿಸುವಲ್ಲಿ ಮುಜರಾಯಿ ಇಲಾಖೆ ಮತ್ತು ತಾಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಒಂದು ವಾರದಲ್ಲಿ ಜಾಗ ಖಾಲಿ ಮಾಡಿಸಿ, ಕಾಂಪೌಂಡ್ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಎದುರು ಗ್ರಾಮಸ್ಥರು ಸೇರಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾಮದ ಮುಖಂಡರಾದ ಕೆ.ಸಿ. ಶಿವದೇವಪ್ಪ, ಕೆ.ಎಂ. ಪ್ರಕಾಶ್, ಕೆ.ಎಂ. ರಾಜು, ಕೆ.ಬಿ. ನೀಲಕಂಠ, ಕೆ.ಎಸ್. ಗಿರೀಶ್, ಕೆ.ಎಸ್. ನವೀನ್, ಕೆ.ಬಿ. ರವಿ, ಕೆ.ಎಸ್. ರಾಜೇಂದ್ರ, ಪ್ರಸನ್ನಾಚಾರ್, ಸತೀಶ್, ಕಾಂತರಾಜಾಚಾರ್, ನಾಗೇಶ್, ದೊರೆಸ್ವಾಮಿ, ಮಂಜು, ಸಿದ್ದೇಗೌಡ, ಮಹದೇವಪ್ಪ, ಶಿವಣ್ಣಾಚಾರ್, ಶ್ರೀಕಂಠ, ರವಿಕುಮಾರ್, ಅಶೋಕ್, ಸ್ವಾಮಾಚಾರ್, ಮರಿಯಪ್ಪ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.