ಮೈಸೂರು

ಸಾಂಸ್ಕೃತಿಕ ಹಬ್ಬ

Published On :

ಮೈಸೂರು: ಕಲಾ ಪ್ರಪಂಚ, ಹೊಟೇಲ್ ಕ್ರಿಸ್ಟಲ್ ಪಾರ್ಕ್ ಇನ್ ಮತ್ತು ಮಾಮ್ ಕ್ರಿಯೇಷನ್ಸ್ ಸಂಯುಕ್ತವಾಗಿ ಏ.6ರ ಸಂಜೆ 5.30ಕ್ಕೆ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಯುಗಾದಿ ಸಾಂಸ್ಕೃತಿಕ ಹಬ್ಬ ಆಯೋಜಿಸಿದೆ. ಹಬ್ಬದ ಅಂಗವಾಗಿ ವಿವಿಧ ದೇಶಿಯ, ಪಾಶ್ಚಿಮಾತ್ಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಉದ್ಯಮಿ ಟಿ.ಆರ್. ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸುವರು. ನೆಲದನಿ ಸಂಸ್ಕೃತಿ ಸಂಸ್ಥೆಯ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಅಧ್ಯಕ್ಷತೆ ವಹಿಸುವರು ಎಂದು ಕಲಾ ಪ್ರಪಂಚ ಸಂಸ್ಥಾಪಕ ಅಧ್ಯಕ್ಷೆ ಎಚ್. ಲೀಲಾವತಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೆ.ಆರ್. ಸಹಕಾರ ಬ್ಯಾಂಕಿನ ನಿರ್ದೇಶಕಿ ಇಂದಿರಾ ವೆಂಕಟೇಶ್, ಮಾಮ್ ಕ್ರಿಯೇಷನ್ನ ಯೋಗೀಶ್ವರಿ, ಇನ್ಸ್ಪೆಕ್ಟರ್ ಸಂತೋಷ್, ಕಲಾವಿದ ಬಾದಲ್ ನಂಜುಂಡಸ್ವಾಮಿ, ಚಿರಾಗ್ ಆ್ಯಡ್ಸ್ನ ವಿವೇಕ್ ಅತಿಥಿಗಳಾಗುವರು. ಇದೇ ವೇಳೆ ನಾಗೇಶ್ ಕಂದೇಗಾಲ, ಆರತಿ ಅರುಣ್, ಅಂಬಿಕಾ ನಜರತ್, ಇಂದಿರಾ ವೆಂಕಟೇಶ್ ಮತ್ತು ಯೋಗೇಶ್ವರಿ ಅವರಿಗೆ ಕಲಾಪೋಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು. ಕಲಾ ಪ್ರಪಂಚದ ನಾಗರಾಜ್, ವೆಂಕಟೇಶ್ ಇದ್ದರು.
ಜೆಸಿಯಾನ ಸಂಭ್ರಮ
ಮೈಸೂರು: ಎಸ್ಜೆಸಿಇ ಸುವರ್ಣ ಮಹೋತ್ಸವ ಅಂಗವಾಗಿ ಜೆಸಿಯಾನ- 2014 ಎಂಬ ಮೂರು ದಿನಗಳ ಸಾಂಸ್ಕೃತಿ ಕಾರ್ಯಕ್ರಮವನ್ನು ಏ.5 ರಿಂದ 7 ರವರೆಗೆ ಆಯೋಜಿಸಲಾಗಿದೆ ಎಂದು ಜೆಸಿಯಾನ ಸಾಂಸ್ಕೃತಿಕ ಸಮಿತಿ ಮುಖ್ಯಸ್ಥೆ ವೈಷ್ಣವಿ ತಿಳಿಸಿದರು. ಜೆಸಿಯಾನವನ್ನು ಏ.5ರ ಸಂಜೆ 6.30ಕ್ಕೆ ಉದ್ಘಾಟಿಸಲಾಗುವುದು. ನಟ ವಿಜಯ ರಾಘವೇಂದ್ರ ಅವರು ತೀರ್ಪುಗಾರರಾಗಿ ಭಾಗವಹಿಸುವರು. ಎಸ್ಜೆಸಿಇ ಪ್ರಾಂಶುಪಾಲ ಪ್ರೊ.ಸೈಯದ್ ಶಕೀಬ್ ಉರ್ ರೆಹಮಾನ್ ಅತಿಥಿಗಳಾಗುವರು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಭಾ ಕಾರ್ಯಕ್ರಮದ ನಂತರ ಅಭಿನವ ಡ್ಯಾನ್ಸ್ ಕಂಪನಿ ನಿರುಪಮ ಮತ್ತು ರಾಜೇಂದ್ರ ಅವರ ತಂಡದಿಂದ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ. ಏ.6ರ ಸಂಜೆ ಬಾಲಿವುಡ್ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಶಂಕರ್ ಮಹಾದೇವನ್ ಅವರಿಂದ ಸಂಗೀತ ಕಾರ್ಯಕ್ರಮ, ಏ.7 ರಂದು ಪ್ರಸಾದ್ ಬಿದ್ದಪ್ಪ ಅವರ ತಂಡದಿಂದ ಮಿಸ್ ಜೆಸಿಯಾನ, ಆ್ಯಕ್ಸೆಂಟ್ ಅವರ ಅಂತಾರಾಷ್ಟ್ರೀಯ ತಂಡದಿಂದ ಲೈವ್ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಅಪರಿಚಿತ ಸಾವು
ಮೈಸೂರು: ಅಪರಿಚಿತ ವ್ಯಕ್ತಿಯೊಬ್ಬರು ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಬನ್ನಿಮಂಟಪದ ಎ ಬಡಾವಣೆಯ ಎಲ್ಲಮ್ಮ ತಾಯಿ ದೇವಸ್ಥಾನ ರಸ್ತೆಯಲ್ಲಿ ನಡೆದಿದೆ. ಚಹರೆ- 35 ವರ್ಷ, 5.4 ಅಡಿ ಎತ್ತರ, ಸಾಧಾರಣ ಶರೀರ, ಗೋದಿ ಮೈಬಣ್ಣ, ಕಪ್ಪು ಕೂದಲು, ಗಡ್ಡ ಮೀಸೆ ಬಿಟ್ಟಿದ್ದಾರೆ. ಬಲಗೈಯಲ್ಲಿ ಮಹಾಲಕ್ಷ್ಮಿ ಅಮ್ಮ, ಎಡಗೈಯಲ್ಲಿ ನೇತ್ರಾ ಎಂದು ಹಸಿರು ಹಚ್ಚೆ ಇದೆ. ಕಪ್ಪು ಬಿಳಿ ದೊಡ್ಡೆಗೆರೆ ಇರುವ ಟೀ- ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ದೂ.0821- 2418313, 513 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.