ಮೈಸೂರು

ಮುಗ್ಧತೆ ಕಳೆದುಕೊಳ್ಳಬೇಡಿ

Published On :

ಮೈಸೂರು: ಮುಗ್ಧತೆಯ ಮನಸ್ಸುಳ್ಳವರ ಮುಖ ಮಗುವಿನಂತಿರುತ್ತದೆ. ಹಾಗಾಗಿ ಎಂದಿಗೂ ಮುಗ್ಧತೆ ಕಳೆದುಕೊಳ್ಳಬೇಡಿ ಎಂದು ಬಿಗ್ಬಾಸ್ ಖ್ಯಾತಿಯ ನಟ ಅರುಣ್ಸಾಗರ್ ಅಭಿಪ್ರಾಯಪಟ್ಟರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಲ್ಲಿರುವ ಅಧ್ಯಾಪಕರನ್ನು ನೋಡಿದರೆ ಮುಗ್ಧತೆ ಪ್ರತಿಬಿಂಬಿಸುತ್ತಿದೆ. ಮುಗ್ಧತೆ ಇದ್ದುದ್ದರಿಂದಲೇ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಎಂಬ ಭೇದಭಾವವೇ ಗೊತ್ತಾಗುತ್ತಿಲ್ಲ ಎಂದರು.
ಸಾಂಸ್ಕೃತಿಕ ನಗರಿಯಲ್ಲಿರುವ ಮಹಾರಾಣಿ ಕಾಲೇಜು ತನ್ನದೇ ಆದ ಖ್ಯಾತಿ ಹೊಂದಿದೆ. ಮಹಾರಾಜರ ಕೊಡುಗೆಯಾಗಿರುವ ಈ ಕಾಲೇಜಿನ ವಿದ್ಯಾರ್ಥಿನಿಯರಾದ ನೀವು ಹೊಸತನ ಸೃಷ್ಟಿಸಿ. ನಾನೊಬ್ಬ ಕಲಾವಿದನಾಗಿ ಈ ವೇದಿಕೆ ಶೃಂಗಾರವಾಗದೆ ಇರುವುದು ಬೇಸರ ತಂದಿದೆ. ನೀವು ಒಟ್ಟಿಗೆ ಸೇರಿ ಮಾಡುವ ಕೆಲಸವನ್ನು ಸೃಜನಾತ್ಮಕ ಕೆಲಸಕ್ಕೆ ಬಳಸಿಕೊಳ್ಳಿ. ಮುಂದಿನ ವರ್ಷ ಕಾಲೇಜಿನ ಶೃಂಗಾರ ಕೆಲಸವನ್ನು ನೀವೇ ವಹಿಸಿಕೊಂಡು ನಳನಳಿಸಿ ಎಂದು ಕರೆ ನೀಡಿದರು.
ಊರು- ಗುರುವನ್ನು ಮರೆಯಬಾರದು: ನಾನು ಸಾಗರದಿಂದ ಬಂದವನಾದರೂ ನನ್ನೂರು ನಂಗೆ ಎಲ್ಲಾ ಕೊಟ್ಟಿದೆ. ಅದೇ ರೀತಿ ಮೈಸೂರು ಶಿಕ್ಷಣ ನೀಡಿತು. ರಂಗಾಯಣದಲ್ಲಿ ಬೆಳೆದ ನನಗೆ ನನ್ನ ಗುರು ಬಿ.ವಿ. ಕಾರಂತರು ಕಲೆ ಹೇಳಿಕೊಟ್ಟರು. ಹುಚ್ಚುತನ ಇಲ್ಲದಿದ್ದರೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಒತ್ತಿ ಹೇಳುತ್ತಿದ್ದರು. ಹಾಗಾಗಿ ನಾವು ಬಂದ ಊರು ಮತ್ತು ನಮಗೆ ವಿದ್ಯೆ ಕಲಿಸಿದ ಗುರುವನ್ನು ಮರೆಯಬಾರದು ಎಂದು ತಿಳಿಸಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ. ಸುಶೀಲಾ ಅಧ್ಯಕ್ಷತೆ ವಹಿಸಿದ್ದರು.



ಫೋಟೋ ತೆಗೆಯಲು ಆತುರ..
ಬಿಗ್ಬಾಸ್ ಖ್ಯಾತಿಯ ಅರುಣ್ಸಾಗರ್ ಅವರು ಮಾತನಾಡಲು ಮೈಕ್ ಮುಂದೆ ಬರುತ್ತಿದ್ದಂತೆಯೇ ವಿದ್ಯಾರ್ಥಿನಿಯರಲ್ಲಿ ಕೆಲವು ಮುಂದಿ ವೇದಿಕೆ ಮುಂಭಾಗ ಬಂದು ಮೊಬೈಲ್ನಲ್ಲಿ ವೀಡಿಯೋ ಮಾಡಿದರು. ಮಾತು ಆರಂಭಿಸಿದ ಸಾಗರ್- ಇಗ್ನೇಶ್ವರನೆ.. ಹರ ಹರ ಕುಮಾರನೆ... ಮಹದೇಶ್ವರಗೆ ಉಘೇ ಎನ್ನೀ.. ಎಂದು ಜಾನಪದ ಗೀತೆ ಹಾಡಿದರು. ಕೂಡಲೇ ಶಿಳ್ಳೆ, ಕೇಕೇ ಬಂದಿದ್ದರಿಂದ ಹೆಣ್ಣು ಮಕ್ಕಳು ಶಿಳ್ಳೆ ಹೊಡಿತಾರಲ್ರೀ ಎಂದು ನಕ್ಕರು. ನಾನು ಹಿಂದೆ ರಂಗಾಯಣದಲ್ಲಿ ಇದ್ದಾಗ ನಮ್ಮ ಗುರು ಬಿ.ವಿ. ಕಾರಂತರು ನಮಗೆಲ್ಲ ಸೈಕಲ್ ಕೊಡಿಸಿದ್ದರು. ಆ ಸೈಕಲ್ನಲ್ಲಿ ನಿಮ್ಮ ಕಾಲೇಜಿನ ಮುಂದೆ ಹೋಗುವಾಗ ನೋಡಿಕೊಂಡು ಹೋಗುತ್ತಿದ್ವಿ. ಈಗ ಇದೇ ಕಾಲೇಜಿನಲ್ಲಿ ಮಾತನಾಡ್ತಿದಿನಿ. ಶೃಂಗಾರವತಿಯರಾದ ನೀವು ನಿಮ್ಮ ಕಾಲೇಜನ್ನು ಶೃಂಗರಿಸಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.