ಮೈಸೂರು

ಬಹಿರಂಗ ಚರ್ಚೆಗೆ ಕಾಂಗ್ರೆಸ್ ಶಾಸಕರು ಬರಲಿ: ಪ್ರತಾಪ್‌ಸಿಂಹ ಸವಾಲು

Published On :

ಮಡಿಕೇರಿ: ಮೈಸೂರಿನ ಕಾಂಗ್ರೆಸ್ ಶಾಸಕರು ಒಂದೇ ವೇದಿಕೆಗೆ ಬಂದರೆ ತಾನು ಏಕಾಂಗಿಯಾಗಿ ಮತ್ತೊಂದು ವೇದಿಕೆಗೆ ಬರುವೆ. ತನ್ನ ಮೇಲಿನ ಆರೋಪಗಳ ಬಗ್ಗೆ ಈ ಶಾಸಕರು ಬಹಿರಂಗ ಚರ್ಚೆಗೆ ವೇದಿಕೆಯೇರಲು ಸಜ್ಜಾಗಲಿ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.
ಮಡಿಕೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮ್ಮೆ ನೀಡಿದ ಹೇಳಿಕೆಯನ್ನು ಸದಾ ತಿರುಚುತ್ತಲೇ ಇರುವ ರಾಜಕಾರಣಿ ರಾಜ್ಯದಲ್ಲಿ ಯಾರಾದರೂ ಇದ್ದಲ್ಲಿ ಅವರೇ ವಿಶ್ವನಾಥ್ ಎಂದು ಟೀಕಿಸಿದರು. ವಾರಪತ್ರಿಕೆಯೊಂದರಲ್ಲಿ ತನ್ನ ವಿರುದ್ಧ ಕೊಳಕು ಪತ್ರಕರ್ತರೋರ್ವರು ಬರೆದ ಬರಹವನ್ನು ಮನೆಮನೆ ಹಂಚಿ ಕಾಂಗ್ರೆಸ್‌ನವರು ಅಪಪ್ರಚಾರಕ್ಕೆ ಮುಂದಾದರು. ಆದರೆ, ಜನರ ವಿಶ್ವಾಸ ಕಡಿಮೆಯಾಗಲಿಲ್ಲ. ತನ್ನ ವಿರುದ್ಧ ಹೇಳಿಕೆ ನೀಡುತ್ತಿರುವ ವಿಶ್ವನಾಥ್‌ಗೆ ಪ್ರತಿಕ್ರಿಯಿಸಿ, ನಿಮ್ಮ ನಡವಳಿಕೆ ಬಗ್ಗೆ ನಾನು ಬಹಿರಂಗವಾಗಿ ಹೇಳಿದ್ದೇ ಆದಲ್ಲಿ ಬ್ರಹ್ಮಾಂಡವೇ ಹೊರಬರುತ್ತೆ ಎಂದು ಎಚ್ಚರಿಸಿದರು. ಮೋದಿ ಅಲೆ ರಾಜ್ಯದಲ್ಲಿ ಇಲ್ಲ ಎಂದು ಆಗಿಂದಾಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡುತ್ತಲೇ ಇದ್ದರು. ಆದರೆ, ಮೈಸೂರಿನಲ್ಲಿ ಮೋದಿ ಪ್ರಚಾರ ಸಭೆಗೆ ಸೇರಿದ ಜನಸ್ತೋಮ ನೋಡಿ ಸಿದ್ದರಾಮಯ್ಯ ಅವರ ಪತ್ನಿ, ಮಕ್ಕಳೂ ಕೂಡ ಮೋದಿಗೆ ಈ ಬಾರಿ ಮತಹಾಕುತ್ತಾರೆ ಎಂದು ತಾನು ಹೇಳಿಕೆ ನೀಡಿದ್ದಾಗಿ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.