ಶಂಕರ ಜಯಂತಿಗೆ ಸಿದ್ಧತೆ ಇಂದಿನಿಂದ
ಕ.ಪ್ರ.ವಾರ್ತೆ ನಂಜನಗೂಡು ಏ. 29
ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಏ.30 ರಿಂದ ಮೇ 4 ರವರೆಗೆ ಶ್ರೀ ಶಂಕರ ಭಗವತ್ಪಾದರ ಜಯಂತಿ ಮಹೋತ್ಸವ ವಿಜೃಂಭಣೆಯಿಂದ ನಡೆಯಲು ಸರ್ವ ಸಿದ್ಧತೆ ನಡೆಯುತ್ತಿದೆ ಎಂದು ಶಂಕರ ಮಠದ ಧರ್ಮಾಧಿಕಾರಿ ಎನ್.ಸಿ.ಶ್ರೀಕಂಠ ಜೋಯಿಸ್ ಹೇಳಿದ್ದಾರೆ.
ಪ್ರತಿದಿನ ಬೆಳಗ್ಗೆ 8 ರಿಂದ ಮಧ್ಯಾಹ್ನ 12ರವರೆಗೆ ಮಹಾನ್ಯಾಸ ಪುರಸ್ಪರ ಏಕದಶವಾರ ರುದ್ರಾಭಿಷೇಕ, ಮಹಾನಿವೇದನ ಮತ್ತು ಮಂಗಳಾರತಿ ನಡೆಯಲಿದೆ. ಏ.30ರ ಬೆಳಗ್ಗೆ 7 ರಿಂದ 9 ರವರೆಗೆ ಶ್ರೀ ಮಹಾಗಣಪತಿ ಹೋಮ, ಸಂಜೆ 4ಕ್ಕೆ ಶ್ರೀ ಶ್ರೀ ಶಂಕರ ಭಗವತ್ಪಾದರ ಉತ್ಸವವು ಶ್ರೀಮಠದಿಂದ ಹೊರಟು ವಿಪ್ರಜನರ ವೇದಘೋಷಗಳೊಂದಿಗೆ ಪಟ್ಟಣದ ಊಟಿ ರಸ್ತೆಯ ಶ್ರೀ ಪ್ರಸನ್ನ ಚಿಂತಾಮಣಿ ದೇವಸ್ಥಾನ ತಲುಪಿ ಅದೇ ಮಾರ್ಗದಲ್ಲಿ ಶ್ರೀ ಮಠ ತಲುಪಲಿದೆ.
ಮೇ 1ರ ಸಂಜೆ 4.30 ರಿಂದ 6 ರವರೆಗೆ ಚಿನ್ಮಯ ಮಿಷನ್ನ ಪದ್ಮಶ್ರೀ ಮತ್ತು ವೃಂದದವರಿಂದ ಭಜನಾ ಕಾರ್ಯಕ್ರಮ. ಸಂಜೆ 6 ರಿಂದ 7ರವರೆಗೆ ಇ.ಕೆ ರಾಮ್ಮೋಹನ್ ಅವರಿಂದ ಶ್ರೀ ಮಾದವೀಯ ಶಂಕರ ವಿಜಯ- 1 ಸಂಕ್ಷಿಪ್ತ ಪರಿಚಯ, ಸಂಜೆ 7 ರಿಂದ 9.30ರವರೆಗೆ ಟಿ.ವಿ. ಶ್ರೀನಿವಾಸ್ರಾವ್ ಮತ್ತು ವೃಂದದವರಿಂದ ಶಾಸ್ತ್ರೀಯ ಗಾಯನ ಮತ್ತು ದೇವರನಾಮ, ಮೇ 2 ರಂದು ಶುಕ್ರವಾರ ಬೆಳಗ್ಗೆ ಉಚಿತ ಸಾಮೂಹಿಕ ಉಪನಯನ, ಸಂಜೆ 4.30 ರಿಂದ 6ರವರೆಗೆ ಆಶಾ ಶ್ರೀನಿವಾಸ್ ಮತ್ತು ತಂಡದವರಿಂದ ಭಜನಾ ಕಾರ್ಯಕ್ರಮ. ಸಂಜೆ 6 ರಿಂದ 7ರವರೆಗೆ ಮೈಸೂರು ಭಾರತೀ ಯೋಗಧಾವುದ ವಿದ್ವಾನ್ ಆದರ್ಶಭಟ್ ಅವರಿಂದ ಜೀವನದಲ್ಲಿ ಗುರುವಿನ ಪಾತ್ರ, ಬಗ್ಗೆ ಪ್ರವಚನ, ಸಂಜೆ 7 ರಿಂದ 9.30ರವರೆಗೆ ಕವಿತಾ ಕಾಮತ್ ಮತ್ತು ತಂಡದವರಿಂದ ಭಕ್ತಿ ಗೀತೆ ಏರ್ಪಡಿಸಿದೆ.
ಮೇ 3 ರಂದು ಮಂಜುಳಾ ವೆಂಕಟೇಶ್ ತಂಡದವರಿಂದ ಪ್ರವಚನ, ವಸಂತ ಲಕ್ಷ್ಮಿ ಮತ್ತು ವೃಂದದವರಿಂದ ಶಾಸ್ತ್ರೀಯ ಸಂಗೀತ. ಮೇ 4ರ ಬೆಳಗ್ಗೆ 8ಕ್ಕೆ ವೇದಘೋಷಗಳೊಂದಿಗೆ ರಥ ಬೀದಿಯಲ್ಲಿ ಶ್ರೀ ಶಂಕರ ಭಗವತ್ಪಾದರ ಉತ್ಸವ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

