ಬಾಲಕನ ಚಿಕಿತ್ಸೆಗೆ ನೆರವಾಗುವಿರಾ?
ಮೈಸೂರು: ಮೂಳೆ ಮಜ್ಜಿ (ಮೋನ್ ಮ್ಯಾರೊ) ರೋಗದಿಂದ ಬಳಲುತ್ತಿರುವ ಟಿ. ನರಸೀಪುರ ತಾಲೂಕು ಸಿದ್ದನಹುಂಡಿಯ ಯುಕೆಜಿ ವಿದ್ಯಾರ್ಥಿ ದೀಪಕ್ (5) ಎಂಬಾತನ ಚಿಕಿತ್ಸೆಗೆ ನೆರವಾಗುವಂತೆ ಆತನ ತಂದೆ ಆರ್. ಮಲ್ಲೇಶ್ ಎಂಬುವರು ದಾನಿಗಳಲ್ಲಿ ಮನವಿ ಮಾಡಿದ್ದಾರೆ. ಮಲ್ಲೇಶ್ ಕೂಲಿ ಕಾರ್ಮಿಕ. ಜಮೀನು ಇಲ್ಲ. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಹಳ್ಳಿಯಲ್ಲಿಯೇ ವಾಸ ಮಾಡುತ್ತಾರೆ. ದೀಪಕ್ ಟಿ. ನರಸೀಪುರದಲ್ಲಿ ಯುಕೆಜಿ ಓದುತ್ತಿದ್ದು, ಈತನ ಚಿಕಿತ್ಸೆಗೆ ರು. 12.50 ಲಕ್ಷ ವೆಚ್ಚವಾಗುತ್ತದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪರಿಹಾರ ನಿಧಿಯಿಂದ ರು.2 ಲಕ್ಷ ನೀಡಿದನ್ನು ಹೊರತುಪಡಿಸಿದರೆ ಬೇರೆ ಯಾವ ಮೂಲದಿಂದಲೂ ಹಣ ಬಂದಿಲ್ಲ. ವೆಚ್ಚ ಭರಿಸಲು ಅಶಕ್ತವಾಗಿದ್ದು, ದಾನಿಗಳು, ಟಿ. ನರಸೀಪುರ ಎಸ್ಬಿಎಂ ಖಾತೆ ನಂ. 18386 40076, ಮೊ. 99162-27496 ಸಂಪರ್ಕಿಸುವಂತೆ ಮಲ್ಲೇಶ್ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

