ಮೈಸೂರು

ಮಕ್ಕಳ ಸಭೆ; ಗ್ರಾಮದ ಸಮಸ್ಯೆ ಅನಾವರಣ

Published On :

ಹುಣಸೂರು: ಶಾಲೆಯ ಎಲ್ಲ ಮಕ್ಕಳಿಗೂ ಸಮವಸ್ತ್ರ ನೀಡುತ್ತೀರ, ನಮಗ್ಯಾಕೆ ಕೊಡೋದಿಲ್ಲ ಸಾರ್? ಅಂಗನವಾಡಿ ಕಟ್ಟಡ ಶಿಥಿಲಗೊಂಡಿದೆ. ಬೇರೆ ಕಟ್ಟಡ ನೀಡಿ ಸ್ವಾಮಿ, ನಮ್ಮ ಶಾಲೆಯ 45 ಮಕ್ಕಳಿಗೆ ಒಬ್ಬರೆ ಶಿಕ್ಷಕರಿದ್ದಾರೆ, ನಮ್ಮೂರಲ್ಲಿ ನೂರು ಮನೆಯಿದೆ, ಆದರೆ 10 ಮನೆಗೆ ಮಾತ್ರ ಶೌಚಾಲಯವಿದೆ. ಹಿಂಗಾದ್ರೆ ಹೆಂಗೆ ಸಾರ್ ಎಂದು ಮಕ್ಕಳು ತಮ್ಮ ಗ್ರಾಮದ ಮತ್ತು ಶಾಲೆಯ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿದರು.
ತಾಲೂಕಿನ ಉಯಿಗೊಂಡನಹಳ್ಳಿ ಗ್ರಾಪಂ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಶಾಲಾ ಮಕ್ಕಳು ಕೇಳಿದ ನೇರ ಪ್ರಶ್ನೆಗಳಿಗೆ ಉತ್ತರಿಸಲು ಅಧಿಕಾರಿಗಳು ಹಾಗೂ ಗ್ರಾಪಂ ಅಧ್ಯಕ್ಷೆ ತಡಕಾಡಿದರು.
ಶಾಂತಿಪುರ ಅನುದಾನಿತ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಸೌಂದರ್ಯ, ಟಿ.ಕೆ. ದೊಡ್ಡೆಕೊಪ್ಪಲಿನ ದಿವ್ಯಾ, ದಾಸನಪುರದ 4ನೇ ತರಗತಿ ವಿದ್ಯಾರ್ಥಿನಿ ರಶ್ಮಿ, ಎನ್. ಕಿರಣ್‌ಕುಮಾರ್, 9ನೇ ತರಗತಿಯ ಚಂದ್ರಶೇಖರ್ ಸೇರಿದಂತೆ ಹತ್ತಾರು ವಿದ್ಯಾರ್ಥಿಗಳು ಶಾಲೆಯ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದರು. ಮಕ್ಕಳ ಗ್ರಾಮಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಹೊರತುಪಡಿಸಿ ಯಾಮೊಬ್ಬ ಸದಸ್ಯರಾಗಲಿ, ಗ್ರಾಮದ ಮುಖಂಡರಾಗಲಿ ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಮಕ್ಕಳು ಇಂಥ ಜನಪ್ರತಿನಿಧಿಗಳಿಗೆ ನಮ್ಮ ಧಿಕ್ಕಾರ ಎಂದು ಘೋಷಣೆ ಕೂಗಿದರು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಶೋಭಾ ಚಂದ್ರನಾಯ್ಕ, ಪಿಡಿಒ ತೇಜೇಂದ್ರನಾಥ, ವರಪ್ರಸಾದ್, ಬಿಲ್ ಕಲೆಕ್ಟರ್ ಗೋಪಾಲಕೃಷ್ಣ, ಕಾರ್ಯದರ್ಶಿ ನಾಗರಾಜ್, ಶಿಕ್ಷಕರಾದ ನಾಗರಾಜ್, ಜಗದೀಶ್, ಚಂದ್ರೇಶ್, ಸುರೇಶ್, ಶಶಿಕಲಾ, ರಶ್ಮಿ, ರಮೇಶ್, ಹರೀಶ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.