ಮೈಸೂರು

ಪತ್ರಿಕಾ ವಿತರಕರ ಬೇಡಿಕೆಗೆ ಮನವಿ

Published On :

ಮೈಸೂರು: ಪತ್ರಿಕಾ ವಿತರಕರ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ವಹಿಸಿದ್ದು, ಕೂಡಲೇ ಅವರ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರಿಕಾ ವಿತರಕ ಪಿ. ಶಿವಲಿಂಗು ಮನವಿ ಮಾಡಿದ್ದಾರೆ. ಪತ್ರಿಕಾ ವಿತರಕರ ಬಗ್ಗೆ ಯಾವುದೆ ಇಲಾಖೆ ಗಮನಹರಿಸುತ್ತಿಲ್ಲ. ಆದ್ದರಿಂದ ಕೂಡಲೆ ಆರೋಗ್ಯ ವಿಮೆ, ಬಿಪಿಎಲ್ ಕಾರ್ಡ್, ವಿತರಕರ ಮಕ್ಕಳಿಗೆ ಉಚಿತ ಶಿಕ್ಷಣ, ವಿತರಕರ ಜೀವನಕ್ಕೆ ಭದ್ರತೆ, ಸರ್ಕಾರದ ವಿವಿಧ ವಸತಿ ಯೋಜನೆಗಳಲ್ಲಿ ಮನೆಗಳನ್ನು ನೀಡುವಂತೆ ಅವರು ಒತ್ತಾಯಿಸಿದ್ದಾರೆ.
ಮಂಗಳ ಕಾರ್ಯಾಲಯ ಉದ್ಘಾಟನೆ ಇಂದು
ಹೆಬ್ಬಾಳಿನ ಶ್ರೀ ಭವಾನಿಶಂಕರ ದೇವಸ್ಥಾನದ ಆವರಣದಲ್ಲಿನ ಮಂಗಳ ಕಾರ್ಯಾಲಯದ ಉದ್ಘಾಟನೆ ಫೆ.18 ರಂದು ನಡೆಯಲಿದೆ. ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸುವರು. ಬೋರಮ್ಮ ಮತ್ತು ಮಾದೇಗೌಡರ ನೆನಪಿನಾರ್ಥ ಈ ಮಂಗಳ ಕಾರ್ಯಾಲಯ ನಿರ್ಮಿಸಲಾಗಿದ್ದು, ಸಣ್ಣಪುಟ್ಟ ಮದುವೆ, ಮುಂಜಿ ಮುಂತಾದ ಸಮಾರಂಭಗಳಿಗೆ ಉಚಿತವಾಗಿ ಲಭ್ಯವಾಗಲಿದೆ. ಹೆಚ್ಚಿನ ಮಾಹಿತಿಗೆ ಮೊ. 8970741424 ಸಂಪರ್ಕಿಸಬಹುದು.
ಲ್ಯಾಪ್ಟಾಪ್ ನೀಡಲು ಮನವಿ
ಉಚಿತ ಲ್ಯಾಪ್ಟಾಪ್ ಅನ್ನು ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುವಂತೆ ಮಾನಸಗಂಗೋತ್ರಿಯ ಸಂಶೋಧನಾ ವಿದ್ಯಾರ್ಥಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. 2014-15ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡುವ ತಮ್ಮ ನಿರ್ಧಾರ ಸ್ವಾಗತಾರ್ಹವಾಗಿದ್ದು, ಆದರೆ ಪ.ಜಾತಿ ಹಾಗೂ ಪಂಗಡದ ಹಿಂದುಳಿದ ವಿದ್ಯಾರ್ಥಿಗಳಿಗೆ ಸೀಮಿತವಾದುದು ಎಂದು ಹೇಳಲಾಗಿದೆ. ಆದ್ದರಿಂದ ಈ ಯೋಜನೆಯನ್ನು ಮರು ಪರಿಶೀಲಿಸಿ ಎಲ್ಲ ಸಂಶೋಧನಾ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್ಟಾಪ್ ನೀಡುವಂತೆ ಮನವಿ ಮಾಡಿದ್ದಾರೆ.
ಸಾಂಸ್ಕೃತಿಕ ಕಲಾ ಉತ್ಸವ
ಕಲಾಧಾರೆ ಕಲ್ಚರಲ್ ಟ್ರಸ್ಟ್ ಮಾಸ್ಟರ್ ಎನ್ ಬ್ಲಾಸ್ಟರ್ ಡ್ಯಾನ್ಸ್ ಗ್ರೂಪ್ ಹಾಗೂ ಬಹುಜನ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ 14ನೇ ವರ್ಷದ ರಾಜ್ಯಮಟ್ಟದ ಸಾಂಸ್ಕೃತಿಕ ಕಲಾ ಉತ್ಸವವು ಫೆ.22 ಮತ್ತು 23 ರಂದು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ನಡೆಯಲಿದೆ. ಉತ್ಸವದಲ್ಲಿ ಜಾನಪದ ನೃತ್ಯ, ಪಾಶ್ಚಿಮಾತ್ಯ, ಭರತನಾಟ್ಯ, ಹಾಡುಗಾರಿಕೆ, ಅಭಿನಯ, ಚಿತ್ರಕಲೆ, ಫ್ಯಾಷನ್ ಶೋ ಸ್ಪರ್ಧೆ ಏರ್ಪಡಿಸಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಫೆ.19 ರೊಳಗೆ ಹಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಮೊ. 9880777121 ಸಂಪರ್ಕಿಸಬಹುದು.
ಪರೀಕ್ಷೆ ತರಬೇತಿ
ಜ್ಞಾನದೀಪ್ತಿ ಟ್ರಸ್ಟ್ ವತಿಯಿಂದ ಮುಂಬರುವ ಐಬಿಪಿಎಸ್ ಹಾಗೂ ಎಸ್ಬಿಐನ ಹುದ್ದೆಗಳಿಗೆ ನಡೆಯುವ ಪರೀಕ್ಷೆಗೆ ಫೆ.19 ರಿಂದ ತರಬೇತಿ ಆರಂಭವಾಗಲಿದೆ. ಪ್ರತಿದಿನ ಸಂಜೆ 5 ರಿಂದ 8 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 9844099674 ಸಂಪರ್ಕಿಸಬಹುದು.
ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ
ಮೈಸೂರು: ಜೆಎಸ್ಎಸ್ ಮಹಿಳಾ ಪಾಲಿಟೆಕ್ನಿಕ್ ಹಿರಿಯ ವಿದ್ಯಾರ್ಥಿನಿಯರ ಸಂಘವು ಮೈಸೂರು ವಲಯ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಫೆ.23 ರಂದು ಏರ್ಪಡಿಸಿದೆ. ಆಸಕ್ತರು ಫೆ.21 ರೊಳಗೆ ತಮ್ಮ ಹೆಸರನ್ನು ಞಡಡಠಢಿಛಟ್ಡಟಟ್ಝಿಣಣಝ್ಟ್ಟ.್ಛ್ಟಟ ಇ ಮೇಲ್ ಮೂಲಕ ನೋಂದಾಯಿಸಿಕೊಳ್ಳಬಹುದು. ಪ್ರತಿ ಪಾಲಿಟೆಕ್ನಿಕ್ನಿಂದ ಎರಡು ತಂಡಗಳು ಹಾಗೂ ಪ್ರತಿ ತಂಡದಿಂದ ಇಬ್ಬರು ಮಾತ್ರ ಭಾಗವಹಿಸಬಹುದು ಎಂದು ಸಂಘದ ಕಾರ್ಯದರ್ಶಿ ಕುಮಾರಿ ತಿಳಿಸಿದ್ದಾರೆ. ಮಾಹಿತಿಗೆ ಮೊ. 99456 53587 ಅಥವಾ 94481 67418  ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.