ಮೈಸೂರು

ಮೈ- ನಂಜನಗೂಡು ರಸ್ತೆ ಅಗಲೀಕರಣ; ಇಕ್ಕೆಲಗಳಲ್ಲೂ ಸರ್ವೆ ನಡೆಸಲು ಒತ್ತಾಯ

Published On :

ತಾಂಡವಪುರ: ಮೈಸೂರು- ನಂಜನಗೂಡು ನಡುವೆ ಚತುಷ್ಪಥ ಹೆದ್ದಾರಿಯ ರಸ್ತೆ ವಿಸ್ತರಣೆಗಾಗಿ ರಸ್ತೆ ಮಧ್ಯ ಭಾಗದಿಂದ ಸರ್ವೆ ನಡೆಸಿ, ನಂತರ ಹೆದ್ದಾರಿ ಅಗಲೀಕರಣದ ಕಾಮಗಾರಿ ನಡೆಸಬೇಕೆಂದು ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು ಒತ್ತಾಯಿಸಿದ್ದಾರೆ.
ಈ ರಸ್ತೆ ವಿಸ್ತರಣೆಗಾಗಿ ಸರ್ವೆ ನಡೆದಿದ್ದು, ಸರ್ವೆಯನ್ನು ರಸ್ತೆ ಮಧ್ಯ ಭಾಗದಿಂದ ಎರಡೂ ಕಡೆಗಳಲ್ಲಿ ಸಮಾನವಾಗಿ ತೆಗೆದುಕೊಳ್ಳುವ ಬದಲು, ಒಂದೇ ಭಾಗದಿಂದ ಸರ್ವೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಸರ್ವೆ ಮಾಡುವಾಗ ರಸ್ತೆ ಎರಡೂ ಕಡೆಗಳಲ್ಲಿ ಸಮಾನವಾಗಿ ಜಮೀನನ್ನು ವಿಸ್ತರಣೆಗಾಗಿ ತೆಗೆದುಕೊಳ್ಳಬೇಕು. ಆದರೆ ಇಲ್ಲಿ ಕೇವಲ ಒಂದೇ ಕಡೆ ತೆಗೆದುಕೊಂಡಿರುವುದರಿಂದ, ಬಡವರಿಗೆ ಹಾಗೂ ಜನ ಸಾಮಾನ್ಯರಿಗೆ ಅತಂತ್ರ ಸ್ಥಿತಿ ಉಂಟಾಗಿದೆ. ಕೆಲವೆಡೆ ಮನೆಗಳು ಸಂಪೂರ್ಣವಾಗಿ ಈ ಸರ್ವೆಗೆ ಒಳಪಡುವುದರಿಂದ ಕೆಲವರು ಮನೆ ಕಳೆದುಕೊಂಡು ನಿರ್ಗತಿಕರಾಗುವ ಭೀತಿಯಿಂದ ದಿನ ದೂಡುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಗಮನ ಹರಿಸುವಂತೆ ಕೋರಿದ್ದಾರೆ.



ಪರೀಕ್ಷೆ ಒಂದು ಹಬ್ಬ-  ಇಂದು ಉಪನ್ಯಾಸ
ಸುತ್ತೂರು: ಶ್ರೀಕ್ಷೇತ್ರದಲ್ಲಿ ಜೆಎಸ್ಎಸ್ ಪ್ರೌಢಶಾಲೆಯ ಸುವರ್ಣ ಮಹೋತ್ಸವ ವರ್ಷಾಚರಣೆಯ ಪ್ರಥಮ ಕಾರ್ಯಕ್ರಮವಾಗಿ ಪರೀಕ್ಷೆ ಒಂದು ಹಬ್ಬ ಎಂಬ ವಿಷಯ ಕುರಿತು ಫೆ.19ರಂದು ಜೆಎಸ್ಎಸ್ ಸಂಸ್ಥೆಗಳ ಸಂಕೀರ್ಣದಲ್ಲಿ ಮೈಸೂರಿನ ವ್ಯಕ್ತಿತ್ವ ವಿಕಸನ ತರಬೇತುದಾರ ಆರ್.ಎ. ಚೇತನ್ರಾಮ್ ಅವರಿಂದ ವಿಶೇಷ ಉಪನ್ಯಾಸ ಏರ್ಪಡಿಸಿದೆ. ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಅಧ್ಯಯನ ಮತ್ತು ಗೆಲವಿನ ಹೆಜ್ಜೆಗಳು, ಓದು- ಏಕೆ, ಏನು, ಹೇಗೆ, ಅಧ್ಯಯನ ಸೂತ್ರಗಳು, ಪರೀಕ್ಷೆಯ ನಿರೀಕ್ಷೆ, ಏಕಾಗ್ರತೆಯ ಜಾದೂ, ನೆನಪೆಂಬ ಮಾಯೆ, ಮೆದುಳಿನ ನಿರ್ವಹಣೆ, ಅಧ್ಯಯನ ಕಲೆ ಪರೀಕ್ಷೆಗೊಂದು ಬೆಲೆ, ಮುಂತಾದ ವಿಷಯಗಳ ಕುರಿತು ಉಪನ್ಯಾಸ ನಡೆಸಿಕೊಡುವರು.


ನಾಳೆ ತ್ರಿಪದಿ ಕವಿ ಸರ್ವಜ್ಞ ದಿನಾಚರಣೆ
ಕೆ.ಆರ್. ನಗರ: ರಾಜ್ಯ ಸರ್ಕಾರ ಮತ್ತು  ರಾಜ್ಯ ಕುಂಬಾರರ ಮಹಾ ಸಂಘದ ಸಹಯೋಗದೊಂದಿಗೆ ತ್ರಿಪದಿ ಕವಿ ಸರ್ವಜ್ಞಮೂರ್ತಿ ಜಯಂತಿಯನ್ನು ಫೆ. 20ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಸಲಾಗುತ್ತದೆ ಎಂದು ತಾಲೂಕು ಪ್ರಧಾನ ಕಾರ್ಯದರ್ಶಿ ಡಿ.ವೆಂಕಟೇಶ್ ತಿಳಿಸಿದ್ದಾರೆ. ಅಂದು ಬೆಳಗ್ಗೆ 10ಕ್ಕೆ ಫ್ರೀಡಂ ಪಾರ್ಕ್ನಿಂದ ರವೀಂದ್ರ ಕಲಾ ಕ್ಷೇತ್ರದವರೆಗೆ ಸರ್ವಜ್ಞಮೂರ್ತಿ ಮೆರವಣಿಗೆ ನಡೆಯಲಿದ್ದು, ಸಂಜೆ 5ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಕಾರ್ಯಕ್ರಮಕ್ಕೆ  ತಾಲೂಕಿನ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವೆಂಕಟೇಶ್ ಮನವಿ ಮಾಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.