ಪಾದಾಚಾರಿ ರಸ್ತೆಯಲ್ಲಿ ಪೆಟ್ಟಿಗೆ ಅಂಗಡಿ ಕಿರಿಕಿರಿ
ಟಿ. ನರಸೀಪುರ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಚುನಾಯಿತ ಪ್ರತಿನಿಧಿಯೊಬ್ಬರ ಹೊಣೆಗೇಡಿತನದಿಂದ ಸಾರ್ವಜನಿಕರು ತಿರುಗಾಡುವ ಕಿರಿದಾದ ಪಾದಚಾರಿ ರಸ್ತೆಯಲ್ಲಿ ಸಫಾಯಿ ಕರ್ಮಚಾರಿಯೊಬ್ಬರ ಅಂಗಡಿ ತಲೆ ಎತ್ತಿದೆ.
ಪಟ್ಟಣದ ಜನದಟ್ಟಣೆ ಲಿಂಕ್ ರಸ್ತೆಗೆ ಸಂಪರ್ಕ ಕಲ್ಪಿಸುವ ಖಾಸಗಿ ಬಸ್ ನಿಲ್ದಾಣದ ಕಿರಿದಾದ ಪಾದಚಾರಿ ರಸ್ತೆಗೆ ಭೈರಾಪುರ ಗ್ರಾಪಂ ಸದಸ್ಯರೊಬ್ಬರ ಒತ್ತಾಯದಿಂದ ಹಾಗೂ ಪಿಡಿಒ ನಿರ್ಲಕ್ಷ್ಯದಿಂದ ವೃತ್ತಿಪರ ಸಫಾಯಿ ಕರ್ಮಚಾರಿಯೊಬ್ಬರು ಕಬ್ಬಿಣದ ಪೆಟ್ಟಿಗೆ ಅಂಗಡಿಯನ್ನು ಅಡ್ಡಲಾಗಿ ಇಟ್ಟಿದ್ದಾರೆ. ಇದರಿಂದ ಈ ರಸ್ತೆಯಲ್ಲಿ ತಿರುಗಾಡುವ ಪಾದಾಚಾರಿಗಳಿಗೆ ತೊಂದರೆ ಆಗುತ್ತಿದೆ. ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿಜೃಂಭಣೆಯ ಸಿದ್ದರಾಮೇಶ್ವರ ಜಯಂತಿ
ಹುಣಸೂರು: ಮನುಷ್ಯತ್ವನ್ನು ಬೋಧಿಸುವ ಧರ್ಮ ಮಾತ್ರ ಮೇರು ಧರ್ಮವಾಗಲು ಸಾಧ್ಯ ಎಂದು ಶಾಸಕ ಎಚ್.ಪಿ.ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಪುರಸಭಾ ಮೈದಾನದಲ್ಲಿ ಆಯೋಜಿಸಿದ್ದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ 841ನೇ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲೇ ಸಾಮಾಜಿಕ ಕ್ರಾಂತಿಯನ್ನು ಉಂಟು ಮಾಡಿದ್ದ ಬಸವಣ್ಣನವರ ನಂತರ ಅಷ್ಟೇ ಪ್ರಭಾವಯುತವಾಗಿ ಸಾಮಾಜಿಕ ಕಳಕಳಿಯನ್ನು ಹೊಂದಿದ್ದ, ಅನುಭವ ಮಂಟಪದಲ್ಲಿ ಬಸವಣ್ಣನವರ ನಂತರ ನೇತೃತ್ವ ವಹಿಸಿದ್ದ ಸಿದ್ಧರಾಮೇಶ್ವರರ ಜೀವನ ಸಿದ್ಧಾಂತಗಳು ಇಂದಿಗೂ ಮಾದರಿಯಾಗಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮಂಜುನಾಥ ದೇವಾಲಯದಿಂದ ಶ್ರೀ ಸಿದ್ಧರಾಮೇಶ್ವರರ ಭಾವಚಿತ್ರವನ್ನೊಳಗೊಂಡ, ವೀರಗಾಸೆ ಕುಣಿತ, ಡೊಳ್ಳುಕುಣಿತ, ಪೂಜಾ ಕುಣಿತ ಸೇರಿದಂತೆ ವಿವಿಧ ಕಲಾಪ್ರಾಕಾರಗಳ ತಂಡದ ಭವ್ಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಇದೇ ವೇಳೆ ರಾಜ್ಯ ಮಟ್ಟದ ಕಬಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆಗೈದ ತಾಲೂಕಿನ ವಿನೋಬಾ ಕಾಲೋನಿಯ ವಿದ್ಯಾರ್ಥಿಗಳ ತಂಡವನ್ನು ಹಾಗೂ ಇದೇ ಗ್ರಾಮದಿಂದ ರಾಷ್ಟ್ರಮಟ್ಟದಲ್ಲಿ ಕಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಅಮೃತ ಅವರನ್ನು ಭೋವಿ ಸಮುದಾಯದ ವತಿಯಿಂದ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಪಿರಿಯಾಪಟ್ಟಣದ ಶಿಕ್ಷಣ ಸಂಯೋಜಕ ಪ್ರೊ. ಶಿವರಾಮೇಗೌಡ ಸಿದ್ಧರಾಮೇಶ್ವರರ ಹುಟ್ಟು, ಜೀವನ ವೃತ್ತಾಂತವನ್ನು ತಿಳಿಸಿದರು. ಉಪವಿಭಾಗಾಧಿಕಾರಿ ಎಂ.ಕೆ. ಜಗದೀಶ್, ತಹಸೀಲ್ದಾರ್ ವೆಂಕಟಾಚಲಪ್ಪ, ಜಿಪಂ ಸದಸ್ಯ ರಮೇಶ್, ಮಾಜಿ ಸದಸ್ಯರಾದ ಡಿ.ಕೆ.ಕುನ್ನೇಗೌಡ, ಬಿ.ಕೆ.ಪರಮೇಶ್, ರತ್ನಯ್ಯ, ತಾಪಂ ಸದಸ್ಯ ರಂಗಸ್ವಾಮಿ, ಹಿರಿಯ ಮುಖಂಡರಾದ ರಾಮಕೃಷ್ಣಪ್ಪ, ಪಟೇಲ್ ಕೊಂಡಯ್ಯ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಪಿ.ಆರ್. ರಾಚಪ್ಪ, ಜಯರಾಂ, ನಾರಾಯಣ ರೈ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

