24ರಂದು ಗಮಕ ಕಲಾ ಪರಿಷತ್ ಉದ್ಘಾಟನೆ
ಮೈಸೂರು: ಗಮಕ ಕಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಮೈಸೂರು ಜಿಲ್ಲಾ ಗಮಕ ಕಲಾ ಪರಿಷತ್ತು ಎಂಬ ನೂತನ ಅಂಗಸಂಸ್ಥೆಯು ಫೆ.24ರಂದು ಅಸ್ತಿತ್ವಕ್ಕೆ ಬರಲಿದೆ.
ಅಂದು ಸಂಜೆ 6ಕ್ಕೆ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಪ್ರಸಿದ್ಧ ವಿದ್ವಾಂಸ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ಅವರು ಉದ್ಘಾಟಿಸುವರು ಎಂದು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕೃ.ಪಾ. ಮಂಜುನಾಥ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಕರ್ನಾಟಕ ಕಲಾಶ್ರೀ ಎಂ.ಆರ್ ಸತ್ಯನಾರಾಯಣ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮೈಸೂರು ಪರಿಷತ್ತಿನ ಗೌರವಾಧ್ಯಕ್ಷ ಎಚ್.ಎಸ್. ಸತ್ಯನಾರಾಯಣ ಅಧ್ಯಕ್ಷತೆ ವಹಿಸುವರು ಎಂದರು.
ಗಮಕ ಕಲೆಯ ಮಹತ್ವದ ಬಗ್ಗೆ ಕಲಾಸಕ್ತರಿಗೆ ಅರಿವು ಮೂಡಿಸುವುದು. ಮನೆ ಮನೆಯಲ್ಲಿ ತಿಂಗಳಿಗೊಮ್ಮೆ ಗಮಕ ಕಾರ್ಯಕ್ರಮ ಏರ್ಪಡಿಸುವುದು, ಶಾಲಾ ಕಾಲೇಜುಗಳಲ್ಲಿ ವಾಚನ ವಾಖ್ಯಾನ ನಡೆಸಿ, ವಿದ್ಯಾರ್ಥಿಗಳಲ್ಲಿ ಗಮಕ ಕಲೆಯ ಆಸಕ್ತಿ ಮೂಡಿಸುವುದು, ಗಮಕ ತರಬೇತಿ ಏರ್ಪಡಿಸಿ ಪದ್ಯಗಳ ವ್ಯಾಕರಣ ತಿಳಿಸುವುದು ಹಾಗೂ ಹಳೆಗನ್ನಡದ ಕಾವ್ಯಗಳನ್ನು ಅರ್ಥಪೂರ್ಣವಾಗಿ ಲೋಪವಿಲ್ಲದೆ ಓದುವ ಬಗ್ಗೆ ತರಬೇತಿ ನೀಡುವುದು, ಅರ್ಹ ಗಮಕ ಕಲಾವಿದರನ್ನು ಗೌರವಿಸುವುದು ಪರಿಷತ್ತಿನ ಪ್ರಮುಖ ಉದ್ದೇಶಗಳಾಗಿವೆ ಎಂದು ಅವರು ತಿಳಿಸಿದರು.
ಪರಿಷತ್ತಿನ ಅಧ್ಯಕ್ಷ ಕೃ.ರಾಮಚಂದ್ರ, ಉಪಾಧ್ಯಕ್ಷೆ ವಿದುಷಿ ಬಿ.ಎಚ್.ನಾಗರತ್ನ, ಸಹಕಾರ್ಯದರ್ಶಿ ಕೆ. ವಿಜಯ್ ಹಾಗೂ ಖಜಾಂಚಿ ಎಂ.ಎನ್.ಪ್ರಭಾಕರ್ ಇದ್ದರು.
ಯುವತಿ ನಾಪತ್ತೆ
ಮೈಸೂರು: ಕೆಲಸಕ್ಕೆ ತೆರಳಿದ ಯುವತಿ ನಾಪತ್ತೆಯಾಗಿರುವ ಘಟನೆ ಕೆ.ಜಿ. ಕೊಪ್ಪಲಿನಲ್ಲಿ ನಡೆದಿದೆ. ಕನ್ನಡಪರ ಸಂಘಟನೆಯ ಕಚೇರಿಗೆ ಕೆಲಸಕ್ಕೆ ಹೋಗುತ್ತಿದ್ದ ಕೆ.ಜಿ. ಕೊಪ್ಪಲು ನಿವಾಸಿ ದೊಡ್ಡತಾಯಮ್ಮ ಎಂಬವರ ಪುತ್ರಿ ಅಂಜಲಿ (19) ನಾಪತ್ತೆಯಾಗಿದ್ದಾರೆ. ಫೆ.9ರಂದು ಕೆಲಸಕ್ಕೆ ಹೋಗುವುದಾಗಿ ಮನೆಯಿಂದ ತೆರಳಿದ ಈಕೆ ಈವರೆಗೂ ಪತ್ತೆಯಾಗಿಲ್ಲ ಎಂದು ದೊಡ್ಡತಾಯಮ್ಮ ಸರಸ್ವತಿಪುರಂ ಪೊಲೀಸರಿಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

