ಪ್ರೇಯಸಿಯನ್ನು ಕೊಂದಿದ್ದ ಪ್ರಿಯಕರ ಸೇರಿ ಇಬ್ಬರು ಸಹಚರರ ಬಂಧನ
ನಂಜನಗೂಡು: ಪ್ರೇಯಸಿಯನ್ನೇ ಕೊಂದು ಪರಾರಿಯಾಗಿದ್ದ ಪ್ರಿಯಕರ ಸೇರಿದಂತೆ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ರಂಗನಾಥಪುರದ ಸ್ವಾಮಿ (22) ಹಾಗೂ ಈತನ ಸ್ನೇಹಿತರಾದ ಆನಂದ(18), ಶಂಕರ್(20) ಬಂಧಿತರು.
2014ರ ಜ. 7ರಂದು ಕಪಿಲಾ ನದಿಯ ಸೈನಿಕ ಮಾಳದಲ್ಲಿ ಸಿಕ್ಕಿದ ಅಪರಿಚಿತ ಯುವತಿಯ ಶವ ರಂಗನಾಥಪುರದ ಪುಟ್ಟಮ್ಮಣ್ಣಿ (18) ಎಂದು ನಂತರ ಪತ್ತೆಯಾಯಿತು. ಈಕೆಯ ಶವದ ಭಾವಚಿತ್ರವನ್ನು ಎಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕಟಿಸಿದ್ದ ಪೊಲೀಸರು, ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ರಂಗನಾಥಪುರದ ಪುಟ್ಟಮ್ಮಣ್ಣಿ ಎಂಬ ಯುವತಿ ಕಾಣೆಯಾಗಿದ್ದರ ಸುಳಿವು ಹಿಡಿದು ತನಿಖೆ ಪ್ರಾರಂಭಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಪುಟ್ಟಮ್ಮಣ್ಣಿ ಹಾಗೂ ಅದೇ ಗ್ರಾಮದ ಸ್ವಾಮಿ ಪರಸ್ಪರ ಪ್ರೀತಿಸುತ್ತಿದ್ದು, ಆಕೆ ತಕ್ಷಣ ಮದುವೆಯಾಗಬೇಕೆಂದು ಪೀಡಿಸತೊಡಗಿದಾಗ ಸ್ವಾಮಿ ಆದೇ ಗ್ರಾಮದ ತನ್ನ ಸ್ನೇಹಿತರಾದ ಆನಂದ ಹಾಗೂ ಶಂಕರ್ ಅವರೊಡನೆ ಸಮಾಲೋಚಿಸಿ ಈಕೆಯನ್ನು ಹತ್ಯೆಗೈಯಲು ತೀರ್ಮಾನಿಸಿದ್ದಾನೆ. ಪುಟ್ಟಮ್ಮಣ್ಣಿಯನ್ನು ಮದುವೆಯಾಗುವುದಾಗಿ ನಂಬಿಸಿ 2014ರ ಜ.6ರ ಸಂಜೆ ಎರಡು ಬೈಕ್ಗಳಲ್ಲಿ ಕಪಿಲಾ ನದಿಯ ತೀರಕ್ಕೆ ಕರೆ ತಂದು, ಅಲ್ಲಿಯೇ ಹತ್ಯೆಗೈದು ಪರಾರಿಯಾಗಿದ್ದರು ಎನ್ನಲಾಗಿದೆ.
ಈ ಪ್ರಕರಣ ಬೇಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಂಜನಗೂಡು ಎಸಿಪಿ ರಾಜಾ, ಸರ್ಕಲ್ ಇನ್ಸ್ಪೆಕ್ಟರ್ ರಘು, ಎಸ್ಐ ರವಿಶಂಕರ್, ಸಿಬ್ಬಂದಿ ಎಂ. ಮಹೇಶ್, ಜ್ಯೋತಿಕುಮಾರ್ ಹಾಗೂ ಮಹೇಶ್ ಅವರ ತಂಡವನ್ನು ರಚಿಸಲಾಗಿತ್ತು. ಕೊಲೆಗಾರರನ್ನು ಬಂಧಿಸಿದ ತಂಡ ಬಂಧಿತರಿಂದ 15 ಸಾವಿರ ನಗದು, ಎರಡು ಬೈಕ್ ಹಾಗೂ ಮೊಬೈಲ್ಗಳನ್ನು ವಶಪಡಿಸಿಕೊಂಡಿದೆ ಎಂದು ಜಿಲ್ಲಾ ಉಪಪೊಲೀಸ್ ವರಿಷ್ಠಾಧಿಕಾರಿ ಮೋಹನ್ ರೆಡ್ಡಿ ತಿಳಿಸಿದ್ದಾರೆ.
ಸ್ನೇಹಿತರಿಗೂ ನಾಮ: ಪುಟ್ಟಮ್ಮಣ್ಣಿ ಮನೆಯಿಂದ ಬರುವಾಗ 50 ಸಾವಿರ, ಒಂದು ಜೊತೆ ಜುಮುಕಿ, ಓಲೆ, ಬಳೆ ಸೇರಿದಂತೆ ಬಂಗಾರದ ಆಭರಣಗಳನ್ನು ತಂದಿದ್ದು, ಆಕೆಯನ್ನು ಕೊಲೆಗೈದ ಹಂತಕರು ಆಭರಣಗಳನ್ನು ಗುಂಡ್ಲುಪೇಟೆಯ ಗಿರವಿ ಅಂಗಡಿಗಳಿಗೆ ರವಾನಿಸಿದ್ದರು. ಸ್ವಾಮಿ ಆಕೆ ತಂದಿದ್ದು ಕೇವಲ 30 ಸಾವಿರ ಎಂದು ಸ್ನೇಹಿತರನ್ನು ನಂಬಿಸಿ ಅದರಲ್ಲಿ ಮೂರು ಪಾಲು ಮಾಡಿ ಸ್ನೇಹಿತರಿಗೆ ನಾಮ ಎಳೆದಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

