ಮೈಸೂರು

ಅಬಕಾರಿ ದಿನಾಚರಣೆ; ಉತ್ತಮ ಸೇವೆ ಸಲ್ಲಿಸಿದವರಿಗೆ ಸನ್ಮಾನ

Published On :

ಮೈಸೂರು: ಕೇಂದ್ರ ಅಬಕಾರಿ, ಸೀಮಾಸುಂಕ ಮತ್ತು ಸೇವಾ ತೆರಿಗೆ ಇಲಾಖೆಯಿಂದ ಸೋಮವಾರ ಕೇಂದ್ರ ಅಬಕಾರಿ ದಿನ ಆಚರಿಸಲಾಯಿತು.
ನಗರದ ಅಂಚೆ ತರಬೇತಿ ಕೇಂದ್ರದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧೀಕ್ಷಕರಾದ ಜಿ.ಕೆ. ಚಂದ್ರಶೇಖರ್, ಸತೀಶ್ ವಿ. ಅಯ್ಯಂಗಾರ್, ನಂದಕುಮಾರ್, ನಾಗರಾಜ್, ಅನ್ವರ್, ನಿರೀಕ್ಷಕರಾದ ನಿರಂಜನ್ಮೂರ್ತಿ, ಕೆ. ನಳಿನಿ, ಡಿಒಎಸ್ ಶಾರದಾ ಚಿನ್ನಪ್ಪ, ಬ್ರಿಟಿಯಸ್ ಬಾರಾ, ರಾಮಕೃಷ್ಣ ನಾಯಕ್, ಹವಾಲ್ದಾರರಾದ ಜಿ. ಪ್ರಭಾಕರ್, ಎಂ. ಕುಮಾರಸ್ವಾಮಿ, ಪ್ರೇಮಾ, ಮಹದೇವಯ್ಯ, ಬಸಪ್ಪ, ಟಿ. ಕುಮಾರ್ ಅವರಿಗೆ ಪ್ರಶಂಸನಾ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಇಲಾಖೆಗೆ ವಂಚಿಸದೆ ಸರಿಯಾಗಿ ತೆರಿಗೆ ಪಾವತಿಸಿದ ಸಂಸ್ಥೆಗಳಾದ ಬಾಲಾಜಿ ಮಾಲ್ಟ್ಸ್ ಲಿ., ಎನ್ಲೈಟೆಡ್ ಎಂಜಿನಿಯರ್ (ಮೈಸೂರು), ಸುರಕ್ಷಾ ಸೆಕ್ಯೂರಿಟಿ ಸರ್ವೀಸ್ (ಹಾಸನ), ಶ್ರೀಕಂಠೇಶ್ವರ ಎಂಟರ್ಪ್ರೈಸಸ್ (ನಂಜನಗೂಡು) ಮಾಲೀಕರಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಮೈಸೂರು ವಲಯ ಮುಖ್ಯ ಆಯುಕ್ತ ಇಂದ್ರಜಿತ್ ದಾಸ್ಗುಪ್ತ ಮಾತನಾಡಿ, ಸರ್ಕಾರ ಪ್ರಕಟಿಸುವ ಯೋಜನೆಗಳಿಗೆ ಅಗತ್ಯ ಸಂಪನ್ಮೂಲ ಕ್ರೋಢೀಕರಿಸುವಲ್ಲಿ ನಮ್ಮ ಇಲಾಖೆ ಪ್ರಮುಖ ಪಾತ್ರ ವಹಿಸುತ್ತಿದೆ. ಕಳೆದ ಸಾಲಿನಲ್ಲಿ ಅಬಕಾರಿ ತೆರಿಗೆ 1.8 ಲಕ್ಷ ಕೋಟಿ, ಸೀಮಾಸುಂಕ ತೆರಿಗೆ 1.7 ಲಕ್ಷ ಕೋಟಿ  ಹಾಗೂ ಸೇವಾ ತೆರಿಗೆ 1.3 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿದ್ದೇವೆ. ನಮ್ಮ ಈ ಸೇವೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದು ತಿಳಿಸಿದರು.
ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ, ದಕ್ಷಿಣ ವಲಯದ ಐಜಿಪಿ ಡಾ.ಕೆ. ರಾಮಚಂದ್ರರಾವ್, ಕೇಂದ್ರ ಅಬಕಾರಿ, ಸೀಮಾಸುಂಕ ಹಾಗೂ ಸೇವಾ ತೆರಿಗೆ ಆಯುಕ್ತ ಜೆ.ಎಸ್. ಚಂದ್ರಶೇಖರ್, ಸಹಾಯಕ ಆಯುಕ್ತ ಹೇಮಂತ ಎ. ಭಟ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.