ಛಲವಾದಿ ಮಹಾಸಭಾ ಸಮಾವೇಶ ಮಾ. 2ಕ್ಕೆ
ಟಿ. ನರಸೀಪುರ: ಛಲವಾದಿ ಮಹಾಸಭಾರಾಜ್ಯ ಮಟ್ಟದ 3ನೇ ವರ್ಷದ ಮಹಾ ಸಮಾವೇಶವನ್ನು ಮಾ. 2 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ತಾಲೂಕು ಅಧ್ಯಕ್ಷ ಎ. ನಾಗರಾಜು ಹೇಳಿದರು.
ರಾಜ್ಯಾಧ್ಯಕ್ಷ ಕೆ. ಶಿವರಾಂ ನೇತೃತ್ವದಲ್ಲಿ ನಡೆಯುವ ಸಮಾವೇಶವನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯೆ ಡಾ. ಮೋಟಮ್ಮ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ವಿ. ಶ್ರೀನಿವಾಸಪ್ರ್ರಸಾದ್, ಡಾ.ಎಚ್.ಸಿ. ಮಹದೇವಪ್ಪ, ಸಂಸದ ಆರ್. ಧ್ರುವನಾರಾಯಣ ಭಾಗವಹಿಸುವರು ಎಂದು ತಿಳಿಸಿದ್ದಾರೆ.
ನಾಳೆ ವಾರ್ಷಿಕೋತ್ಸವ
ನಂಜನಗೂಡು: ಪಟ್ಟಣದ ಹುಲ್ಲಹಳ್ಳಿ ರಸ್ತೆಯ ಮಹದೇಶ್ವರ ಬಡಾವಣೆಯ ಶ್ರೀ ಮಹದೇಶ್ವರ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದ 12ನೇ ವಾರ್ಷಿಕೋತ್ಸವ ಮಾ. 1 ಏರ್ಪಡಿಸಿದೆ. ಬೆಳಗ್ಗೆ 7ಕ್ಕೆ ರುದ್ರಾಭಿಷೇಕ, ಮಹಾಮಂಗಳಾರತಿ, 11ಕ್ಕೆ ಉತ್ಸವ, ನಂತರ ಪ್ರಸಾದ ವಿನಿಯೋಗವಾಗಲಿದೆ. ಭಕ್ತಾದಿಗಳು ಭಾಗವಹಿಸುವಂತೆ ಕಾರ್ಯದರ್ಶಿ ಎಚ್.ಕೆ. ಚನ್ನಪ್ಪ ಕೋರಿದ್ದಾರೆ.
ನಾಳೆ ನೇತ್ರ ತಪಾಸಣಾ ಶಿಬಿರ
ನಂಜನಗೂಡು: ತಾಲೂಕಿನ ಹೊಸಳ್ಳಿಯ ವಕೀಲ ಎಚ್.ಎಸ್. ಮಲ್ಲಿಕಾರ್ಜುನಸ್ವಾಮಿ ಮತ್ತು ವಾಸನ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಮಾ. 1ರ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ತಾಲೂಕಿನ ಮಹದೇವತಾತಾರವರ ಐಕ್ಯಸ್ಥಳದಲ್ಲಿ ಕಣ್ಮಿನ ಉಚಿತ ತಪಾಸಣೆ ಮಾಡಲಾಗುವುದು. ಬಿಪಿಎಲ್ ಮತ್ತು ಯಶಸ್ವಿನಿ ಕಾರ್ಡದಾರರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗುವುದು. ನಿತಿನ್, ಮೊ. 9164969410, ಕುಮಾರ್, 9902048468 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

