ಟಿ.ನರಸೀಪುರ ತಾಪಂ: ರು. 1642.9 ಲಕ್ಷ ಬಜೆಟ್
ಟಿ. ನರಸೀಪುರ: 2014-15ನೇ ಸಾಲಿಗೆ ತಾಪಂ ರಾಜ್ಯ ಹಾಗೂ ಕೇಂದ್ರ ವಲಯ ಕಾರ್ಯಕ್ರಮಗಳಡಿಯಲ್ಲಿ 1642.9 ಲಕ್ಷ ರು. ಬಜೆಟ್ ಅನ್ನು ಅಧ್ಯಕ್ಷ ಚಿದರಹಳ್ಳಿ ನಟರಾಜುಮಂಡಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಬಜೆಟ್ ಮಂಡಿಸಿದ ಅವರು, ಕಳೆದ ಸಾಲಿನಲ್ಲಿ 1063.42 ಲಕ್ಷ ಬಜೆಟ್ ಮಂಡಿಸಲಾಗಿತ್ತು. ಮುಂದಿನ ಸಾಲಿಗೆ 579.48 ಲಕ್ಷ ರು. ಹೆಚ್ಚುವರಿ ಬಜೆಟ್ ಪ್ರಸ್ತಾಪಿಸಲಾಗಿದೆ. ಯೋಜನೇತರ ಬಾಬ್ತಿನಲ್ಲಿ 4198.53 ಲಕ್ಷ ಅನುದಾನ ನಿಗದಿಯಾಗಿದ್ದು, 2014-15ನೇ ಸಾಲಿಗೆ 4747.45 ಲಕ್ಷಗಳನ್ನು ಪ್ರಸ್ತಾಪಿಸಲಾಗಿದೆ ಎಂದರು.
ಶಿಕ್ಷಣ ಇಲಾಖೆಗೆ ಯೋಜನೆಯಡಿ 508 ಲಕ್ಷ, ಯೋಜನೇತರ 3793 ಲಕ್ಷ, ವೈದ್ಯಕೀಯ ಜನಾರೋಗ್ಯ ಯೋಜನೆಯಡಿ 22 ಲಕ್ಷ ಹಾಗೂ ಯೋಜನೇತರ 58 ಲಕ್ಷ, ಆಯುಷ್ ಇಲಾಖೆ ಯೋಜನೇತರ 31 ಲಕ್ಷ, ನೀರು ಸರಬರಾಜು ಮತ್ತು ನೈರ್ಮಲ್ಯ ಯೋಜನೇತರ 9 ಲಕ್ಷ, ಸಮಾಜ ಕಲ್ಯಾಣ (ಎಸ್ಸಿ) 221 ಲಕ್ಷ, ಯೋಜನೇತರ 123 ಲಕ್ಷ, ಎಸ್ಟಿ ವರ್ಗಕ್ಕೆ ಯೋಜನೆಯಡಿ 51 ಲಕ್ಷ, ಯೋಜನೇತರ 12 ಲಕ್ಷ, ವಿಶೇಷ ಘಟಕ ಯೋಜನೆಯಡಿ 38.50 ಲಕ್ಷ, ಹಿಂದುಳಿದ ವರ್ಗ ಅಲ್ಪ ಸಂಖ್ಯಾತ ಯೋಜನೆಯಡಿ 9.5 ಲಕ್ಷ ಯೋಜನೇತರ 16.45 ಲಕ್ಷ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಯಡಿ 425 ಲಕ್ಷ, ಪೌಷ್ಟಿಕ ಆಹಾರ ಯೋಜನೆಯಡಿ
ಯೋಜನೇತರ 400 ಲಕ್ಷ ಕೃಷಿ ಯೋಜನೆಯಡಿ 1.50 ಲಕ್ಷ ಯೋಜನೇತರ 60 ಲಕ್ಷ, ತೋಟಗಾರಿಕೆ ಯೋಜನೆಯಡಿ 1.70 ಲಕ್ಷ, ಪಶು ಸಂಗೋಪನೆ ಯೋಜನೆಯಡಿ 9.5 ಯೋಜನೇತರ 65 ಲಕ್ಷ, ಸಹಕಾರ ಇಲಾಖೆಗೆ 3 ಲಕ್ಷ, ಗ್ರಾಮೀಣಾಭಿವೃದ್ಧಿ 256 ಲಕ್ಷ, ಯೋಜನೇತರ 180 ಲಕ್ಷ, ರೇಷ್ಮೇ 1.50 ಲಕ್ಷ, ರಸ್ತೆ ಮತ್ತು ಸೇತುವೆ 3 ಲಕ್ಷ , ಗಿರಿಜನ ಉಪ ಯೋಜನೆ 10.70 ಲಕ್ಷ ರು. ನಿಗದಿಪಡಿಸಲಾಗಿದೆ.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ತಾಲೂಕಿನ 36 ಗ್ರಾಪಂಗಳಲ್ಲಿ 550 ಲಕ್ಷ ರು. ಕಾಮಗಾರಿ ಅನುಷ್ಠಾನಗೊಂಡಿದೆ. ಮುಂದೆ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರ ಜತೆಗೆ ಸಂಪೂರ್ಣ ನೈರ್ಮಲ್ಯ ತಾಲೂಕಾಗಿ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ ಎಂದ ಅವರು, ಮುದ್ರಾಂಕ ಶುಲ್ಕದ ಅನುದಾನ 13.17 ಲಕ್ಷ ಕ್ರಿಯಾ ಯೋಜನೆಯ ಬಗ್ಗೆ ಅನುಮೋದನೆ ಪಡೆದರು.
ಸಭೆಯಲ್ಲಿ ಇಒ ಜೈಕೃಷ್ಣ, ಉಪಾಧ್ಯಕ್ಷೆ ಕಮಲಾಕ್ಷಿ ನಾಗರಾಜು, ಮಾಜಿ ಅಧ್ಯಕ್ಷ ತುಂಬಲ ಅಂದಾನಿ, ಮಾಜಿ ಉಪಾಧ್ಯಕ್ಷೆ ಸುಜಾತ ವೆಂಕಟೇಶ್, ಸದಸ್ಯ ಸಿ. ವೆಂಕಟೇಶ್, ಗಿರೀಶ್, ಸೀಹಳ್ಳಿ ಗುರುಮೂರ್ತಿ, ಪುಟ್ಟಮಾದಮ್ಮ, ನಂಜಮ್ಮ, ನಾಗರತ್ನ, ನಸ್ರೀನ್ ರೂಹಿ, ಸುವರ್ಣ ಪ್ರಸನ್ನ, ರೂಪಶ್ರೀ ಪರಮೇಶ್, ಶಿವಮ್ಮ ಮಹದೇವ, ಸವಿತಾ ಜಯರಾಮ್, ಜಯಲಕ್ಷ್ಮೀ ಕುಮಾರ, ಶಂಕರೇಗೌಡ, ಪ್ರಭಾಕರ, ತಲಕಾಡು ಸುಬ್ರಮಣ್ಯ, ಗ್ರಾಪಂ ಅಧ್ಯಕ್ಷೆ ಗರ್ಗೇಶ್ವರಿ ಸೋಮಪ್ರಭ, ಉಕ್ಕಲಗೆರೆ ರಾಜಮ್ಮ, ಆಲಗೂಡು ಚಿಕ್ಕೇಣ್ಣಮ್ಮ, ಅಧಿಕಾರಿಗಳಾದ ಡಾ. ಶ್ರೀನಿವಾಸ್, ಡಾ. ಚಿನ್ನಸ್ವಾಮಿ, ಕೃಷ್ಣಮೂರ್ತಿ, ರಮೇಶ್, ಸಿದ್ದರಾಜು, ಜವರೇಗೌಡ, ಬಸವರಾಜು, ಎಇಇ ರಘು, ಕೃಷ್ಣಾಚಾರ್, ಟಿಓಟಿ ನಾಗರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

