ಸುದ್ದಿ ಸಂಕ್ಷೇಪ
ಜನಸಂಪರ್ಕ ಸಭೆ ಇಂದು
ಭೇರ್ಯ: ಕೆ.ಆರ್. ನಗರ ತಾಲೂಕಿನ ಹೊಸಅಗ್ರಹಾರ ಹೋಬಳಿಯ ಮುಂಜನಹಳ್ಳಿ ಗ್ರಾಪಂನಲ್ಲಿ ಜ.4ರ ಬೆಳಗ್ಗೆ 10.30ಕ್ಕೆ ಶಾಸಕ ಸಾ.ರಾ. ಮಹೇಶ್ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ನಡೆಯಲಿದ್ದು, ಗುಳುವಿನ ಅತ್ತಿಗುಪ್ಪೆ, ಉದಯಗಿರಿ, ಚಿಕ್ಕಭೇರ್ಯ, ಕಾವಲ್‌ಹೊಸೂರು, ಗೇರದಡ, ಬಸವನಪುರ, ಕೆಂಚನಹಳ್ಳಿ ಗ್ರಾಮಗಳ ಸಮಸ್ಯೆ ಆಲಿಸುವರು.
ನಿಸರ್ಗ ಸಂಸ್ಥೆಯ ನಾಲ್ವರಿಗೆ ಪ್ರಶಸ್ತಿ
ಎಚ್.ಡಿ. ಕೋಟೆ: ನಿಸರ್ಗ ಫೌಂಡೇಷನ್‌ನ ನಂಜುಂಡಯ್ಯ ಅವರಿಗೆ ಪರಿಸರ ಸಂರಕ್ಷಣೆ ಮತ್ತು ಕಡೆಗಣಿಸಲ್ಪಟ್ಟ ಸಮುದಾಯಗಳ ಬಲವರ್ಧನೆ ಪ್ರಶಸ್ತಿ ನೀಡಲಾಗಿದೆ. ಗಿರಿಜನ ಕ್ರಿಯಾಕೂಟದ ಸಂಚಾಲಕರಾಗಿ, ದಕ್ಷಿಣ ಭಾರತ ಆದಿವಾಸಿ ಒಕ್ಕೂಟದ ಕಾರ್ಯದರ್ಶಿಯಾಗಿ, ಕಪಾರ್ಟ್ ನಿರ್ದೇಶಕರಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಇವರ ಜೊತೆಗೆ ನಿಸರ್ಗ ಸಂಸ್ಥೆಯ ಹಿರಿಯ ಕಾರ್ಯಕರ್ತ ರಾಘವೇಂದ್ರ, ದಿಲ್‌ಶಾದ್ ಹಾಗೂ ವೀರಭದ್ರಪ್ಪ ಅವರಿಗೂ ಪರಿಸರ ಸಂರಕ್ಷಣೆ ಮತ್ತು ಕಡೆಗಣಿಸಲ್ಪಟ್ಟ ಸಮುದಾಯಗಳ ಬಲವರ್ಧನೆ ಪ್ರಶಸ್ತಿ ನೀಡಲಾಗಿದೆ ಎಂದು ಸಂಸ್ಥೆ ಸುಮಾ ತಿಳಿಸಿದ್ದಾರೆ.
ಪಿಯುಸಿ ಸಮಯ ಬದಲಾವಣೆಗೆ ಕ್ರಮ
ಕೆ.ಆರ್. ನಗರ: ಪಿಯುಸಿ ವಿದ್ಯಾರ್ಥಿಗಳಿಗೆ ಈಗ ನಡೆಸಲಾಗುತ್ತಿರುವ ಬೆಳಗಿನ ತರಗತಿಗಳಿಂದ ವ್ಯಾಸಂಗಕ್ಕೆ ತೊಂದರೆಯಾಗಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ಸಮಯ ಬದಲಾವಣೆ ಮಾಡಿ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ರವರೆಗೆ ತರಗತಿಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು. ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪದಲ್ಲಿ ಮಾತನಾಡಿದ ಅವರು, ಕಾಲೇಜಿನಲ್ಲಿ ಒಟ್ಟು 1350 ವಿದ್ಯಾರ್ಥಿಛ ವ್ಯಾಸಂಗ ಮಾಡುತ್ತಿದ್ದು ಕೊಠಡಿಗಳ ಅವಶ್ಯಕತೆ ಇರುವುದರಿಂದ 1 ಎಕರೆ ಭೂಮಿಯನ್ನು ಸರ್ಕಾರದಿಂದ ಈಗಾಗಲೇ ಮಂಜೂರು ಮಾಡಿಸಲಾಗಿದೆ. ಶೀಘ್ರದಲ್ಲೇ ಕೊಠಡಿ ನಿರ್ಮಿಸಿ ಬಾಲಕರು ಮತ್ತು ಬಾಲಕಿಯರಿಗೆ ಪೂರ್ಣ ಅವಧಿ ತರಗತಿ ನಡೆಸಲಾಗುವುದು ಎಂದರು. ಡಿಡಿಪಿಯು ಕೆ.ಎಂ. ಪುಟ್ಟು, ವೈ.ಆರ್. ಪ್ರಕಾಶ್, ಪುರಸಭಾ ಸದಸ್ಯರಾದ ಎಚ್.ಸಿ. ರಾಜು, ಕೆ. ಜಗದೀಶ್, ಗೀತಾಮಹೇಶ್, ಪ್ರಾಂಶುಪಾಲ ಬಿ.ಎಚ್. ರಾಮಕೃಷ್ಣನ್, ಇ. ಬಸವರಾಜು, ಮಲ್ಲರಾಜು, ಕರೀಗೌಡ, ನಾಗರಾಜಮೂರ್ತಿ ಇದ್ದರು.
ಅವಿಶ್ವಾಸ ಗೊತ್ತುವಳಿ ಮಂಡನೆ
ಹುಲ್ಲಹಳ್ಳಿ: ನಂಜನಗೂಡು ತಾಲೂಕು ಹುಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಎಚ್.ಎಂ. ಬಸವರಾಜು ಅವರ ವಿರುದ್ಧ 15 ಜನ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಾರೆ. ಒಟ್ಟು 21 ಜನ ಸದಸ್ಯ ಬಲ ಹೊಂದಿರುವ ಈ ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತ ಬಸವರಾಜು ಅಧ್ಯಕ್ಷರಾಗಿ ಕಾರ್ಯಭಾರ ನಡೆಸುತ್ತಿದ್ದರು. ಆದರೆ, ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ನಿರ್ಲಕ್ಷ್ಯವಹಿಸಿದ್ದರು. ಇದರ ವಿರುದ್ಧ ಸಿಡಿದೆದ್ದ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದರು. ಈ ವೇಳೆ ಉಪಾಧ್ಯಕ್ಷೆ ಸರೋಜ, ಸದಸ್ಯರಾದ ವರದರಾಜು, ಶಿವಣ್ಣ, ಗೋಪಾಲನಾಯ್ಕ, ಸಿದ್ದರಾಜು, ನಾಗರಾಜ, ಬಾಲು ಮರಿತಿಮ್ಮಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

