ಮೈಸೂರು

ಕ್ರಿಮಿಕೀಟ ಸಾಯಿಸಿ... ರೋಗ ತೊಲಗಿಸಿ...

Published On :

ಮೈಸೂರು: ಸಾರ್ವಜನಿಕರಲ್ಲಿ ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಬಗ್ಗೆ ಅರಿವು ಮೂಡಿಸಲು ಭಾರತೀಯ ಗ್ರಾಮೀಣ ಶೈಕ್ಷಣಿಕ ಅಭಿವೃದ್ಧಿ ಹಾಗೂ ಅವಿಷ್ಕಾರಿ ತಂತ್ರಜ್ಞಾನ ಕೇಂದ್ರವು (ಕ್ರೆಡಿಟ್-ಐ) ಹಮ್ಮಿಕೊಂಡಿರುವ ಜಾಗೃತಿ ಅಭಿಯಾನ ಶನಿವಾರ ಆರಂಭವಾಯಿತು.
ಮೈಸೂರು ಮಹಾನಗರ ಪಾಲಿಕೆ ಹಾಗೂ ಮುಂಬೈನ ಸಿನರ್ಜಿ ಸರ್ಕಾರೇತರ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ರಾಜೀವನಗರದ ಮುಖ್ಯ ವೃತ್ತದಲ್ಲಿ ಏರ್ಪಡಿಸಿದ್ದ  ಹಿಟ್- ಸಾಯಿಸಿ ಕ್ರಿಮಿಕೀಟಗಳನ್ನು, ತೊಲಗಿಸಿ ರೋಗಗಳನ್ನು ಎಂಬ ಈ ಅಭಿಯಾನವನ್ನು ನಗರ ಪಾಲಿಕೆ ಆರೋಗ್ಯ ನಿರೀಕ್ಷಕ ಭಾಸ್ಕರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವೈದ್ಯರಾದ ಡಾ. ಸಂದೇಶ್‌ಕುಮಾರ್ ಅವರು ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಘಿ, ಚಿಕೂನ್‌ಗುನ್ಯಾ ಮೊದಲಾದ ರೋಗಗಳು ಹಾಗೂ ಈ ಕಾಯಿಲೆಯಿಂದ ಆರೋಗ್ಯದ ದುಷ್ಪರಿಣಾಮ ಹಾಗೂ ಅದರ ನಿವಾರಣೆಗೆ ಅನುಸರಿಸಬೇಕಾದ ಕ್ರಮ ಕುರಿತು ಮಾಹಿತಿ ನೀಡಿದರು.
ಬಡಾವಣೆಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ನಂತರ ಜಾಗೃತಿ ಅಭಿಯಾನದಲ್ಲಿ ಸಂಸ್ಥೆ ಸದಸ್ಯರು ಬೀದಿ ನಾಟಕ ಪ್ರದರ್ಶಿಸಿ ಸಾರ್ವಜನಿಕರ ಗಮನ ಸೆಳೆದರು.
ಬಡಾವಣೆಗಳಲ್ಲಿ ರೋಗ ಹರಡದಂತೆ ಸಿಂಪಡಿಸುವ ಔಷಧಗಳನ್ನು ಗೋದ್ರೇಜ್ ಸಂಸ್ಥೆ ಉಚಿತವಾಗಿ ವಿತರಿಸಿದ್ದು, ನಗರ ಪಾಲಿಕೆ ಸಿಬ್ಬಂದಿ ಅಲ್ಲದೆ, ಮ್ಯಾಜಿಕ್ ಬಸ್, ಪಿಆರ್‌ಎನ್ ಎಂಟರ್‌ಪ್ರೈಸಸ್ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.   ಲಿಡ್ಕರ್ ಕಾಲೋನಿಯಲ್ಲಿ ಅಭಿಯಾನ ನಡೆಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.