'ಕನ್ನಡದ ಅಂಗೈಲಿ ಆಂಗ್ಲಭಾಷೆ ಅರಳಲಿ'
ಮೈಸೂರು: ಕನ್ನಡದ ಅಂಗೈಯಲ್ಲಿ ಆಂಗ್ಲಭಾಷೆ ಅರಳಲಿ ಎಂದು ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ಎಸ್. ತುಕಾರಾಮ್ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಮುಕ್ತ ಗಂಗೋತ್ರಿಯ ತುಂಗಭದ್ರ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಇಂಗ್ಲಿಷ್ ಕಲಿಕಾ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇಂಗ್ಲಿಷ್ ಕಲಿತವರೆಲ್ಲ ಬುದ್ಧಿವಂತರಲ್ಲ: ಇಂಗ್ಲಿಷ್ ಕಲಿತವರೆಲ್ಲ ಬುದ್ಧಿವಂತರು ಎಂದು ಭಾವಿಸುವುದು ಸರಿಯಲ್ಲ. ಅಂತೆಯೇ ಇಂಗ್ಲಿಷ್ ಕಲಿತ್ತಿಲ್ಲ ಅದಕ್ಕಾಗಿ ಯಾವುದೇ ಕೆಲಸವೂ ಸಿಗುತ್ತಿಲ್ಲ ಎಂಬ ಕೀಳರಿಮೆ ಸಲ್ಲದು. ನಿರಾಳವಾಗಿ ಯಾವುದೇ ಅಂಜಿಕೆಯಿಲ್ಲದೆ ಇಂಗ್ಲಿಷ್ ಕಲಿಯಬೇಕು. ಆದರೆ ತಾಯಿಯ ನುಡಿಯ ಅಂಗೈಯಲ್ಲಿ ಆಂಗ್ಲಭಾಷೆ ಅರಳಲಿ ಎಂದು ಅವರು ಆಶಿಸಿದರು.
ಭಾಷಾ ಕೌಶಲ ಇಲ್ಲದೆ ಸಂವಹನ ಅಸಾಧ್ಯ. ಇಂತಹ ಭಾಷಾ ಕಲಿಕಾ ಶಿಬಿರಗಳು ಸಂವಹನ ಭರವಸೆಯನ್ನು ಮೂಡಿಸಲಿವೆ. ಕಲಿಕೆಯನ್ನು ಒಂದು ವ್ರತದಂತೆ ಭಾವಿಸಿದಾಗಿ ಯಾವುದು ಅಸಾಧ್ಯವಲ್ಲ. ಕನ್ನಡದ ಗೌರವಕ್ಕೆ ಧಕ್ಕೆಯಾಗದಂತೆ ಇತರೆ ಭಾಷೆ ಕಲಿಯುವ ಕಾಳಜಿಯನ್ನು ಮರೆಯಬಾರದು ಎಂದು ಅವರು ತಿಳಿಸಿದರು. ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ವ್ಯಕ್ತಿ ತಮ್ಮ ಮಾತೃಭಾಷೆಯಲ್ಲಿ ಪರಿಪೂರ್ಣ ಸಾಮರ್ಥ್ಯ ಹೊಂದಿರುವುದಿಲ್ಲವೋ ಅಂಥವರು ಬೇರೆ ಭಾಷೆ ಕಲಿಯಲು ಕಷ್ಟವಾಗಲಿದೆ. ತಮ್ಮ ಭಾಷೆಯಲ್ಲಿ ಪ್ರಭುತ್ವ ಸಾಧಿಸಿದಾಗ ಮಾತ್ರ ಇತರೆ ಭಾಷೆಯ ಸಂವಹನ ಸಮಸ್ಯೆಯಾಗದು ಎಂದರು.
ದೇಶದಲ್ಲಿ ಜಾತಿ, ಭಾಷೆ ಹಾಗೂ ಬಡತನದ ಕೀಳರಿಮೆ ಸಮಸ್ಯೆಯಾಗಿ ಕಾಡುತ್ತಿದೆ. ಇಂತಹ ಕೀಳರಿಮೆ ಸಮಾಜವನ್ನು ಆವರಿಸಿದ್ದು, ಅದರಿಂದ ಹೊರಬರದೆ ಯಾವುದೇ ಸಾಧನೆ ಅಸಾಧ್ಯ. ಇಂದಿನ ಯುವಜನತೆ ಸುಂದರ ಕನಸುಗಳನ್ನು ಕಾಣುತ್ತಿಲ್ಲ. ಸುಂದರ ಬದುಕು ಕಟ್ಟಲು ಸುಂದರ ಕನಸು ಕಾಣಿರಿ ಎಂದು ಅವರು ಸಲಹೆ ನೀಡಿದರು.
ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶೈಲೇಶ್ ರಾಜೇ ಅರಸ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

