'ಕುಲಕಸುಬಿಗೇ ಜೋತು ಬೀಳಬೇಕಿಲ್ಲ'
ನಂಜನಗೂಡು: ಯಾವುದೇ ಸಮುದಾಯ ಕುಲಕಸುಬಿಗೆ ಅಂಟಿಕೊಳ್ಳುವ ಪ್ರಮೇಯ ಈಗ ಇಲ್ಲ ಎಂದು ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಅಭಿಪ್ರಾಯಪಟ್ಟರು.
ಪಟ್ಟಣದ ಕಾಮಾಕ್ಷಿಬಾಯಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಜಿಲ್ಲಾ ಗಾಣಿಗರ ಸಮ್ಮೇಳನದಲ್ಲಿ ಪಾಲ್ಗೊಂಡು ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ವರ್ಣಾಶ್ರಮ ವ್ಯವಸ್ಥೆಯ ಕಾಲದಲ್ಲಿ ಹಿಂದುಳಿದವರಿಗೆ ಕುಲಕಸುಬಿನ ಹಣೆಪಟ್ಟಿ ಕಟ್ಟಿದ ಪುರೋಹಿತಶಾಹಿ ಸಮುದಾಯದವರು ಅಂತಹ ಸಮುದಾಯಗಳಿಂದ ದುಡಿಸಿ ತಾವು ಐಷಾರಾಮಿ ಜೀವನ ನಡೆಸುತ್ತಿದ್ದರು.
ಈಗ ಕಾಲ ಬದಲಾಗಿದೆ. ತುಳಿತಕ್ಕೊಳಗಾದ ಪ್ರತಿ ಸಮುದಾಯದಿಂದಲೂ ಕೂಗು ಎದ್ದಿದೆ ಇದು ಒಳ್ಳೆಯ ಬೆಳವಣಿಗೆ ಎಂದರು.
ವಿದ್ಯೆ, ಬುದ್ದಿ, ಅಧಿಕಾರ ಮತ್ತು ಅಂತಸ್ತು ಕುರಿತಾದ ಚಿಂತನೆ ಕೆಳವರ್ಗದಲ್ಲಿ ಪ್ರಾರಂಭಗೊಂಡಿದೆ. ಆದರೆ ಶೋಷಿತರಾದ ನಾವೆಲ್ಲರೂ ಒಂದು ಎಂಬ ವಿಚಾರದಲ್ಲಿ ಕೆಳವರ್ಗದ ಸಮುದಾಯಗಳು ಮೈಮರೆತಿವೆ. ಬ್ರಾಹ್ಮಣರಲ್ಲೂ ಹಿಂದುಳಿದವರಿದ್ದಾರೆ ಅವರೂ ಸಹ ಮೇಲೆ ಬರಬೇಕು ಎಂದರು.
ಯಾರಪ್ಪನ ಮನೆ ಆಸ್ತಿ ಅಲ್ಲ: ಪ್ರಜಾಪ್ರಭುತ್ವ ಯಾರಪ್ಪನ ಮನೆ ಆಸ್ತಿಯಲ್ಲ. ನಾನು ಸರಿಇಲ್ಲ ಎಂದರೆ ನನ್ನನ್ನೂ ಬದಲಾಯಿಸಿ. ರಾಜಕಾರಣ ನಿಂತ ನೀರಾಗಬಾರದು. ಕ್ಷೇತ್ರದ ಮತದಾರನ ಮುಖಕ್ಕೆ ಮಸಿ ಬಳಿಯದೆ ಕಳಂತರಹಿತನಾಗಿರುವ ನಾನು ನಿರ್ಭಯ, ನಿಷ್ಪಕ್ಷಪಾತ ರಾಜಕಾರಣಿ. ಹಾಗಾಗಿ ಸೋಲು, ಗೆಲುವುಗಳಿಗೆ ನಾನು ಅಂಜುವುದಿಲ್ಲ. ಮತದಾರನ ಆದೇಶದಂತೆ ಕೆಲಸ ಮಾಡುವುದಾಗಿ ಪ್ರಸಾದ್ ಹೇಳಿಕೊಂಡರು.
ವಿಧಾನಪರಿಷತ್ ಸದಸ್ಯ ಬಿ.ಜೆ ಪುಟ್ಟಸ್ವಾಮಿ, ಮಾಜಿ ಮೇಯರ್ ಅನಂತ, ರಾಜ್ಯ ಗಾಣಿಗರ ಸಂಘದ ಅಧ್ಯಕ್ಷ ಎಂ.ಪಿ .ರಮೇಶ್, ಸಂಘದ ಪದಾಧಿಕಾರಿಗಳಾದ ಎಂ. ಲಕ್ಷ್ಮೀಶ್, ರಾಮಚಂದ್ರು, ಹೇಮಂತ್ಕುಮಾರ್, ಎಚ್.ಎಂ. ನಾಗರಾಜು, ನಾಗೇಂದ್ರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

