'ಸಾಹಿತಿಗೆ ಸಾಮಾಜಿಕ ಬದ್ಧತೆ ಮುಖ್ಯ'
ಮೈಸೂರು: ಸಮಾಜದಲ್ಲಿ ಇಷ್ಟೆಲ್ಲಾ ಅನ್ಯಾಯಗಳು ನಡೆಯುತ್ತಿದ್ದರೂ ಯಾವೊಬ್ಬ ಸಾಹಿತಿಯೂ ಟೀಕಿಸುತ್ತಿಲ್ಲ. ಇದು ಅವರಲ್ಲಿ ಸಾಮಾಜಿಕ ಬದ್ಧತೆ ಇಲ್ಲದಿರುವುದನ್ನು ತೋರಿಸುತ್ತದೆ ಎಂದು ನಾಡೋಜ ಡಾ. ದೇಜಗೌ ವಿಷಾದಿಸಿದರು.
ಮುಖ್ಯಪ್ರಾಣ ಸಾಂಸ್ಕೃತಿಕ ಅಕಾಡೆಮಿ ಭಾನುವಾರ ನಗರದ ರಾಮಕೃಷ್ಣ ಆಶ್ರಮ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ.ಪ್ರಸನ್ನ ಹೆಗಡೆ ಅವರ 'ಕನಸು' ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ತಾವು ಏನಾದರು ರಾಜಕೀಯ ವ್ಯಕ್ತಿ-ಪಕ್ಷಗಳನ್ನು ಟೀಕಿಸಿದರೆ ಅವಗಾಹನೆಗೆ ತೆಗೆದುಕೊಳ್ಳುವುದಿಲ್ಲ ಎಂಬ ಮುನ್ನಚ್ಚೆರಿಕೆಯಿಂದ ಸುಮ್ಮನಿದ್ದಾರೆ ಎಂದರು.ಡಾ. ಪ್ರಸನ್ನ ಹೆಗಡೆ ಅಂತಹ ಅಪವಾದಕ್ಕೆ ವಿರುದ್ಧವಾಗಿದ್ದು, ತಮ್ಮ ಗುಡುಗು ಚುಟುಕ ಸಾಹಿತ್ಯದಲ್ಲಿ ಭ್ರಷ್ಟರನ್ನು ಹೀಗಳೆದಿದ್ದಾರೆ. ತಮ್ಮ ನಿಲವನ್ನು ಸ್ವಷ್ಪಪಡಿಸಿದ್ದಾರೆ ಎಂದರು.
ಹಿರಿಯ ಸಾಹಿತಿ ಡಾ. ಸಿಪಿಕೆ ಮತ್ತೊಂದು 'ಗುಡುಗು' ಚುಟುಕು ಸಾಹಿತ್ಯ ಕೃತಿ ಬಿಡುಗಡೆಗೊಳಿಸಿದರು. ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಸಾನ್ನಿಧ್ಯ ವಹಿಸಿದ್ದರು. ಪ್ರಾಧ್ಯಾಪಕ ಪ್ರೊ. ಕೆ. ಭೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವಾಸು, ಪ್ರೊ.ಜಿ.ಸಿ. ರಾಜಪ್ಪ, ಡಾ.ಅರಸ್ ಇದ್ದರು. ಸುಮಾ ರಾಜ್ಕುಮಾರ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

