ಮೈಸೂರು

ವಿದ್ಯೆಗೆ ಜಾತಿ, ಬಡತನದ ಭೇದವಿಲ್ಲ

Published On :

ಕ.ಪ್ರ.ವಾರ್ತೆ  ಮೈಸೂರು  ಜ. 6
ವಿದ್ಯೆಗೆ ಜಾತಿ ಮತ್ತು ಬಡತನದ ಭೇದವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಹೇಳಿದರು.
ತಾಲೂಕು ಕೋಟೆಹುಂಡಿ ಗ್ರಾಮದಲ್ಲಿ ಶಾಂತಿನಿಕೇತನ ಶಿಕ್ಷಣ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ 7ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣಕ್ಕೆ ಮಹತ್ವವಾದ ಶಕ್ತಿಯಿದ್ದು, ವಿದ್ಯೆಗೆ ಜಾತಿ ಮತ್ತು ಬಡತನದ ಭೇದವಿಲ್ಲ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದ ಅವರು, ಪಟ್ಟಣದ ಮಕ್ಕಳ ಜತೆ ಗ್ರಾಮೀಣ ಪ್ರದೇಶದ ಮಕ್ಕಳು ಪೈಪೋಟಿ ನಡೆಸಬೇಕಾದರೆ ಗುಣಮಟ್ಟದ ಶಿಕ್ಷಣ ಅವಶ್ಯಕ ಎಂದರು.
ಅಬ್ದುಲ್ ಕಲಾಂ, ಕೆ.ಆರ್. ನಾರಾಯಣನ್ ಅವರು ಕಡುಬಡತನದಲ್ಲಿ ಹುಟ್ಟಿ, ಶ್ರಮವಹಿಸಿ ಶಿಕ್ಷಣ ಪಡೆದು ರಾಷ್ಟ್ರಪತಿಗಳಾದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ನೇರವಾಗಿ 5ನೇ ತರಗತಿಗೆ ಸೇರಿ ವ್ಯಾಸಂಗ ಪಡೆದಿದ್ದರಿಂದ ಉನ್ನತ ಹುದ್ದೆ ಹೊಂದಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು.
ಈ ಶಿಕ್ಷಣ ಸಂಸ್ಥೆಗೆ ಸಂಸದರ ನಿಧಿಯಿಂದ ಎಚ್. ವಿಶ್ವನಾಥ್ ಅವರು 10 ಲಕ್ಷ ಕೊಡುವುದಾಗಿ ಭರವಸೆ ನೀಡಿದ್ದು. ಅಂತೆಯೇ ನಾನು ಸಹಾಯ ಮಾಡುತ್ತೇನೆ ಎಂದರು.
ಸಂಸದ ಎಚ್. ವಿಶ್ವನಾಥ್, ಮಾಜಿ ಶಾಸಕ ಎಂ. ಸತ್ಯನಾರಾಯಣ, ಜಿ.ಪಂ. ಸದಸ್ಯ ಜವರೇಗೌಡ, ಬಿಇಒ ರಾಮರಾಧ್ಯ, ಡಾ.ಚಿದಾನಂದ ಅವರು ಮುಖ್ಯ ಅತಿಥಿಗಳಾಗಿದ್ದರು. ಮುಖಂಡರಾದ ಸಿ.ಎಂ ಸಿದ್ದರಾಮೇಗೌಡ, ರೇವಣ್ಣ, ಮಹೇಶ್, ನಾಡನಹಳ್ಳಿ ರವಿ, ಮಾಕಿ ಮಹದೇವ್, ಉದ್ಭೂರು ಮೂರ್ತಿ, ಕೇರ್ಗಳ್ಳಿ ನಾಗಣ್ಣ, ಶಿವಪ್ಪ ಹಾಗೂ ಸಂಸ್ಥೆ ಅಧ್ಯಕ್ಷ ಕೋಟೆಹುಂಡಿ ಮಹದೇವ್, ಕಾರ್ಯದರ್ಶಿ ಶಿವಮ್ಮ ಮಹದೇವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.