ಸವಾಲಿನಲ್ಲಿ ಕರ್ತವ್ಯ ನಿರ್ವಹಿಸುವ ಹೊಣೆ: ಅಂಶಿ
ಚಾಮರಾಜನಗರ: ಸವಾಲುಗಳನ್ನು ಎದುರಿಸಿ ಕೆಲಸ ಮಾಡಬೇಕಾದದ್ದು ಪತ್ರಕರ್ತರ ಜವಾಬ್ದಾರಿ ಎಂದು ಮಾಧ್ಯಮ ಅಕಾಡೆಮಿ ಸದಸ್ಯ ಹಾಗೂ ಕನ್ನಡಪ್ರಭ ಹಿರಿಯ ವಿಶೇಷ ವರದಿಗಾರ ಅಂಶಿ ಪ್ರಸನ್ನಕುಮಾರ್ ಹೇಳಿದರು.
ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಬುಧವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಭಾಷಾ ಪತ್ರಿಕೋದ್ಯಮ ಕಾರ್ಯಾಗಾರದಲ್ಲಿ ಮಾಧ್ಯಮ ವರದಿಗಾರಿಕೆ ಸವಾಲುಗಳ ಬಗ್ಗೆ ಉಪನ್ಯಾಸ ನೀಡಿದರು. ಪತ್ರಕರ್ತರು ಹೆಚ್ಚಿನ ಅಧ್ಯಯನ ಮಾಡುವ ಮೂಲಕ ಭಾಷೆ ಮೇಲೆ ಹಿಡಿತ ಸಾಧಿಸಬೇಕು. ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿ ಪದಬಳಸಿ ಜನಸಾಮಾನ್ಯರಿಗೆ ತಲುಪಿಸುವುದು ಮುಖ್ಯವಾಗಬೇಕು ಎಂದರು.
ಜನರಲ್ಲಿ ಗೊಂದಲ ಉಂಟುಮಾಡುವ ಪದ ಬಳಸದೆ ಎಚ್ಚರಿಕೆಯಿಂದ ಜನಸಾಮಾನ್ಯರ ಮನಸ್ಸಿಗೆ ಮುಟ್ಟುವಂತಹ ಪದ ಬಳಸಿ ವರದಿ ಸಿದ್ದಪಡಿಸಬೇಕು. ವಿಷಯ ಸರಿಯಾಗಿ ಗ್ರಹಿಸಿ ಸಮರ್ಪಕ ವರದಿ ನೀಡುವುದು ಪತ್ರಕರ್ತರ ನಿಜವಾದ ಕೆಲಸ ಎಂದು ವ್ಯಾಖ್ಯಾನಿಸಿದರು. ಖಾಸಗಿ ವಿಚಾರಗಳ ಬಗ್ಗೆ ದಾಖಲೆ ಪರಿಶೀಲನೆ ವರದಿ ಪ್ರಕಟಿಸಿ ಎಂದು ಸಲಹೆ ನೀಡಿದರು.
ಮಾದ್ಯಮ ಕಾರಣವಾಗದಿರಲಿ: ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಗಂಗಾಧರ್ ಮೊದಲಿಯಾರ್ ಮಾತನಾಡಿ, ಭಾಷೆಯ ಅವಸಾನಕ್ಕೆ ಮಾಧ್ಯಮ ಕಾರಣವಾಗಬಾರದು, ಪತ್ರಿಕೊದ್ಯಮದಲ್ಲಿ ಭಾಷೆ ಕೊಲೆಯಾಗುತ್ತಿದೆ, ಅವಸಾನದಂಚಿಗೆ ತಲುಪಿದೆ ಎಂದು ವಿಷಾದಿಸಿದರು.
ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರ ಸಮಸ್ಯೆ ಬಹಳಷ್ಟಿದೆ. ಗ್ರಾಮೀಣ ಪತ್ರಕರ್ತರು ಸಮಸ್ಯೆಗಳ ಸರಮಾಲೆಯನ್ನೆ ಎದುರಿಸಬೇಕಿದೆ. ಗ್ರಾಮೀಣ ಭಾಗದಿಂದ ವರದಿ ಮಾಡುವ ಪತ್ರಕರ್ತರು ಮೈಯೆಲ್ಲಾ ಕಣ್ಣಾಗಿರಬೇಕು ಎಂದರು. ಪತ್ರಿಕಾ ಧರ್ಮ ಕಾಪಾಡಬೇಕಾದ್ದು ಆಯಾ ವರದಿಗಾರರ ನೈಜ ಕರ್ತವ್ಯವಾಗಿದೆ. ಅನಾಹುತಕಾರಿ ವರದಿ ಪ್ರಕಟಿಸುವ ಮುನ್ನ ಜಾಗ್ರತೆ ವಹಿಸಿ, ವರದಿ ಬರೆದಾಗ ಬರುವ ಸವಾಲುಗಳನ್ನು ಎದುರಿಸಿ, ಯಾವುದಕ್ಕೂ ಅಂಜದೆ ಸಮಾಜಮುಖಿ ಕೆಲಸಕ್ಕೆ ನಿಮ್ಮ ವರದಿ ಮೂಲಕ ಆಧ್ಯತೆ ನೀಡಿ ಎಂದು ಸಲಹೆ ನೀಡಿದರು. ಪ್ರಸ್ತುತ ಪೈಪೋಟಿಯಿಂದಾಗಿ ಸಣ್ಣ ಪತ್ರಿಕೆಗಳನ್ನು ದೊಡ್ಡ ಪತ್ರಿಕೆಗಳು, ದೊಡ್ಡ ಪತ್ರಿಕೆಗಳನ್ನು ಟಿವಿ ಚಾನಲ್ಗಳು ನುಂಗುತ್ತಿವೆ. ಪತ್ರಿಕೋದ್ಯಮವೂ ಕೂಡ ಭ್ರಷ್ಟಾಚಾರಗಳಿಂದ ಹೊರತಾಗಿಲ್ಲ ಎಂದು ನುಡಿದರು.
ಸಂಘದ ಅಧ್ಯಕ್ಷ ಅಬ್ರಹಾಂಡಿಸಿಲ್ವಾ, ಪ್ರಧಾನ ಕಾರ್ಯದರ್ಶಿ ಆರ್.ಎನ್. ಸಿದ್ದಲಿಂಗಸ್ವಾಮಿ, ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯ ದೇವರಾಜು ಕಪ್ಪಸೋಗೆ, ಸಹಕಾರ್ಯದರ್ಶಿ ಕೋಟಂಬಳ್ಳಿ ಗುರುಸ್ವಾಮಿ, ಎಸ್.ಎಂ. ನಂದೀಶ್, ಬನಶಂಕರ ಆರಾಧ್ಯ, ಫಾಲಲೋಚನ ಆರಾಧ್ಯ, ಕೆ.ವಿ. ಶಶಿಧರ್, ಪೃಥಿರಾಜ್, ಗೌಡಳ್ಳಿ ಮಹೇಶ್ ಇದ್ದರು.
ನಾನು ಕನ್ನಡ ಕಲಿತದ್ದು
ಪತ್ರಿಕೆಗಳಿಂದ..
ಚಾಮರಾಜನಗರ: ನಾನು ಕನ್ನಡವನ್ನು ಸರಾಗವಾಗಿ ಒದಲು ಭಾಷೆಯ ಬಗ್ಗೆ ಹೆಚ್ಚು ಅರಿವು ಮೂಡಿದ್ದು ಪತ್ರಿಕೆಗಳನ್ನು ಒದುವುದರ ಮೂಲಕ ಹಾಗೂ ಆಕಾಶವಾಣಿಯಲ್ಲಿನ ಕಾರ್ಯಕ್ರಮಗಳ ಗ್ರಹಿಕೆಯಿಂದ ಎಂದು ಸಾಹಿತಿ ವೆಂಕಟರಾಜು ಹೇಳಿದರು. ಅವರು ಭಾಷಾ ಪತ್ರಿಕೋದ್ಯಮ ಕಾರ್ಯಗಾರದಲ್ಲಿ ಮಾತನಾಡಿ ಭಾಷೆಗೆ ಕನ್ನಡ ಪತ್ರಿಕೆಗಳ ಕೊಡುಗೆ ಅಪಾರ. ಆದರೆ ಇತ್ತಿಚಿನ ದಿನಗಳಲ್ಲಿ ಭಾಷಾ ಬಳಕೆ ಬಗ್ಗೆ ಆಗುತ್ತಿರುವ ತೊಡಕುಗಳನ್ನು ಸರಿಪಡಿಸಿಕೊಳ್ಳಬೇಕಿದೆ. ಹರಿತ ಭಾಷೆಯಲ್ಲಿ ವರದಿ ಮಾಡುವ ಮೂಲಕ ಭಾಷೆ ಇನ್ನಷ್ಟು ಬೆಳೆಸುವ ರೀತಿಯಲ್ಲಿ ಜವಾಬ್ದಾರಿ ಅರಿತು ಪತ್ರಕರ್ತರು ಕಾರ್ಯನಿರ್ವಹಿಸಬೇಕು, ವರದಿಗಾರರಾದವರು ಪುಸ್ತಕಗಳನ್ನು ಹೆಚ್ಚು ಹೆಚ್ಚು ಒದುವುದನ್ನು ರೂಡಿಸಿಕೊಳ್ಳಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

