ಖಾಸಗಿ ವಾಹನ ಚಾಲಕರಿಗೆ ಅಪಘಾತ ವಿಮಾ
ಮೈಸೂರು: ರಾಜ್ಯ ಸರ್ಕಾರವು ಕಾರ್ಮಿಕ ಇಲಾಖೆಯು ಅಸಂಘಟಿತ ವಲಯದ ಖಾಸಗಿ ವಾಹನ ಚಾಲಕರ ಕಲ್ಯಾಣಕ್ಕಾಗಿ ಕರ್ನಾಟಕ ರಾಜ್ಯ ವಾಣಿಜ್ಯ ಖಾಸಗಿ ವಾಹನ ಚಾಲಕರ ಅಪಘಾತ ಪರಿಹಾರ ವಿಮಾ ಯೋಜನೆಯನ್ನು 2012-13ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿದೆ.
ಈ ಯೋಜನೆಯಡಿ 20 ವರ್ಷದಿಂದ 70 ವರ್ಷದವರೆಗಿನ ಆಟೋ, ಟ್ಯಾಕ್ಸಿ , ಮ್ಯಾಕ್ಸಿಕ್ಯಾಬ್, ಲಾರಿ, ಬಸ್ ಹಾಗೂ ಖಾಸಗಿ ವಾಹನ ಚಾಲಕರು (ಬ್ಯಾಡ್ಜ್ ಹೊಂದಿದ ಚಾಲಕರು) ಈ ಯೋಜನೆಯಡಿ ಒಂದೇ ಬಾರಿ ನೋಂದಣಿ ಶುಲ್ಕ 25 ನೀಡಿ ಹಾಗೂ ಅರ್ಜಿ ಶುಲ್ಕ 1 ನೀಡಿ ನೋಂದಾಯಿಸಬೇಕು.
ನೋಂದಣಿಯಾದ ವಾಹನ ಚಾಲಕರಿಗೆ 2 ಲಕ್ಷದ ಉಚಿತ ಅಪಘಾತ ವಿಮೆ ನೀಡಲಾಗುವುದು. ತಾತ್ಕಾಲಿಕ ಶಾಶ್ವತ ನಿಷ್ಕ್ರಿಯತೆಗೆ ಪರಿಹಾರ ಸಹ ನೀಡಲಾಗುವುದು. ಚಾಲಕರ ನೋಂದಣಿ ಕಾರ್ಯವನ್ನು ಮೆ. ಮೈಸೂರು ಐ.ಟಿ ಸಲ್ಯೂಷನ್ಸ್ (ಪ್ರೈ) ಲಿ., ಕೆಎಸ್ಎಸ್ಐಡಿಸಿ, ಪ್ಲಾಟ್ ನಂ.55, ಹೆಬ್ಬಾಳ ಕೈಗಾರಿಕಾ ಕೇಂದ್ರ, ಮೈಸೂರು ಇವರಿಗೆ ನೀಡಿರುತ್ತದೆ.
ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದಂತೆ ಮೊದಲನೆ ಹಂತದಲ್ಲಿ 2012-13ನೇ ಸಾಲಿನಲ್ಲಿ ಒಟ್ಟು 8,287 ಚಾಲಕರು ಈ ಯೋಜನೆಯಡಿ ನೋಂದಣಿಗೊಂಡಿದ್ದಾರೆ. ಎರಡನೇ ಹಂತದ ಚಾಲಕರ ನೋಂದಣಿ ಕಾರ್ಯವನ್ನು ನಿರ್ವಹಿಸಲು ಮೆ. ಮೈಸೂರು ಐ.ಟಿ ಸಲ್ಯೂಷನ್ಸ್ (ಪ್ರೈ) ಲಿ. ಇವರಿಗೆ ನೀಡಲಾಗಿದ್ದು, 2014ರ ಜ. 6 ರಿಂದ ನೋಂದಣಿ ಕಾರ್ಯವು ಪುನರ್ ಆರಂಭಗೊಂಡಿರುತ್ತದೆ. ಮೆ. ಮೈಸೂರು ಐ.ಟಿ ಸಲ್ಯೂಷನ್ಸ್ (ಪ್ರೈ) ಲಿ. ಇವರು ನೋಂದಣಿ ಕಾರ್ಯವನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಐಒಎಸ್ಕೆ ಸೆಂಟರ್ ಅನ್ನು ಅಳವಡಿಸಲಾಗುವುದು ಹಾಗೂ ಕಾರ್ಮಿಕ ಅಧಿಕಾರಿಯ ಕಚೇರಿಯಲ್ಲಿಯೂ ಸಹ ನೋಂದಣಿ ಕಾರ್ಯ ನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ. ಎಲ್ಲ ತಾ. ಕೇಂದ್ರಗಳಲ್ಲಿ ಚಾಲಕರ ನೋಂದಣಿ ಕಾರ್ಯವನ್ನು ನಿರ್ವಹಿಸುವ ಸಲುವಾಗಿ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಕೆಐಒಎಸ್ಕೆ ಸೆಂಟರ್ನ್ನು ಅಳವಡಿಸಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

