ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು
ಮೈಸೂರು: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸವಾರನೊಬ್ಬ ಮೃತಪಟ್ಟು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಎಸ್ಪಿ ಕಚೇರಿ ಎದುರಿನ ವೃತ್ತದಲ್ಲಿ ಗುರುವಾರ ರಾತ್ರಿ ನಡೆದಿದೆ.
ಉದಯಗಿರಿ ನಿವಾಸಿ ಹಾಗೂ ಪಿಡಬ್ಲ್ಯೂ ಎಂಜಿನಿಯರ್ ಜಮೀರ್ ಅಹಮ್ಮದ್ ಎಂಬವರ ಪುತ್ರ ಮೊಹಿದ್ ಮುಸ್ತಾಫ (25) ಮೃತಪಟ್ಟವರು. ಇವರು ಎಂಐಟಿ ಕಾಲೇಜಿನಲ್ಲಿ ಬಿ.ಇ ಅಂತಿಮ ವರ್ಷದ ವಿದ್ಯಾರ್ಥಿ.
ಮೊಹಿದ್ ರಾತ್ರಿ ತನ್ನ ಬೈಕಿನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಬೈಕ್ ಡಿಕ್ಕಿಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಮೊಹಿದ್ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್ನಲ್ಲಿದ್ದ ನಿವೃತ್ತ ಸೈನಿಕ ದಿನೇಶ್ ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಗರ ಸಂಚಾರ ಉಪ ವಿಭಾಗದ ಎಸಿಪಿ ಪ್ರಭಾಕರ ಬಿ. ಬಾರ್ಕಿ, ದೇವರಾಜ ಸಂಚಾರ ಠಾಣೆ ಇನ್ಸ್ಪೆಕ್ಟರ್ ಆರ್.ಪಿ. ಅಶೋಕ್ ಸ್ಥಳಕ್ಕೆ ಭೇಟಿ ನೀಡಿದ್ದರು. ಲಷ್ಕರ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರವೇ ಕಾರ್ಯಕರ್ತರನ್ನು ಬಿಡುಗಡೆಗೊಳಿಸಿ
ಮೈಸೂರು: ಸಿಎಫ್ಟಿಆರ್ಐ ನಿರ್ದೇಶಕ ಡಾ.ರಾಮ ರಾಜಶೇಖರ್ ಅವರ ಕನ್ನಡ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣಗೌಡ ಬಣ) ಕಾರ್ಯಕರ್ತರು ರಾಮಸ್ವಾಮಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟಿಸಿದರು.
ಕನ್ನಡ ವಿರೋಧಿ ಚಟುವಟಿಕೆ ನಡೆಸುತ್ತಿರುವ ಡಾ.ರಾಮ ರಾಜಶೇಖರ್ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದ ಅವರು, ಡಾ. ರಾಮ ರಾಜಶೇಖರ್ ಅವರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರಾಣಿ ಬಹದ್ದೂರ್ ಸಭಾಂಗಣದ ಬಳಿ ಪ್ರತಿಭಟಿಸಿದ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಕರವೇ ಕಾರ್ಯಕರ್ತರನ್ನು ಸರ್ಕಾರ ಬಿಡುಗಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದರು.ಮುಖಂಡರಾದ ಶ್ರೀನಿವಾಸ್, ಜಾಫರ್ ಇದ್ದರು.
ಇಂಧನ ಬೆಲೆ ಏರಿಕೆ ಖಂಡಿಸಿ ಡಿಸಿ ಕಚೇರಿ ಎದುರು ಧರಣಿ
ಮೈಸೂರು: ಇಂಧನ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಮಧ್ಯಾಹ್ನ ಪ್ರತಿಭಟಿಸಿದರು. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಆಟೋಗೆ ಬಳಸುವ ಅನಿಲ ಹಾಗೂ ಆಹಾರ ಪದಾರ್ಥಗಳ ಬೆಲೆಯನ್ನು ಕೇಂದ್ರ ಸರ್ಕಾರವು ಪದೇ ಪದೇ ಏರಿಸುತ್ತಿದೆ. ಈ ರೀತಿ ಅವೈಜ್ಞಾನಿಕ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಇಂಧನ ಬೆಲೆ ಏರಿಕೆಯನ್ನು ಕೇಂದ್ರ ಸರ್ಕಾರವು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು. ಜಿಲ್ಲಾಧಿಕಾರಿ ಸಿ.ಶಿಖಾ ಅವರು ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಶ್ರ ಚಾ.ರಂ. ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮುಖಂಡರಾದ ಮನಮೋಹನ್, ಪ್ರಭಾಶಂಕರ್, ಜಯಪ್ರಕಾಶಗೌಡ, ಮಹೇಶ್, ಗಣೇಶ್, ಗುರುಶಂಕರ್ ಇದ್ದರು.
ದಂಡ ಪಾವತಿಸಿ ಕೈದಿಯ ಬಿಡುಗಡೆ
ಮೈಸೂರು: ಜೈಲಿನಿಂದ ಬಿಡುಗಡೆಯಾದ ಕೈದಿಗಳನ್ನು ಮಾನವೀಯತೆಯಿಂದ ಕಾಣುವಂತೆ ಪತ್ರಿಕೋದ್ಯಮಿ ರಾಜಶೇಖರ ಕೋಟಿ ಕರೆ ನೀಡಿದರು. ಕಾಂಗ್ರೆಸ್ ಮುಖಂಡ ಮಹದೇವ್ ಅವರ 52ನೇ ಹುಟ್ಟುಹಬ್ಬದ ಅಂಗವಾಗಿ ನಗರದ ಕಾರಾಗೃಹದಲ್ಲಿ ಅವಧಿ ಮುಗಿದರೂ ದಂಡ ಪಾವತಿಸಲಾಗದೆ ಬಂಧಿಯಾಗಿದ್ದ ಕೆ.ಆರ್. ನಗರ ತಾಲೂಕಿನ ವಡ್ಡರಕೊಪ್ಪಲು ಗ್ರಾಮದ ಬಲರಾಮೇಗೌಡ ಅವರನ್ನು 25 ಸಾವಿರ ಪಾವತಿಸಿ ಬಿಡುಗಡೆ ಮಾಡಿದ ವೇಳೆ ಅವರು ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಸಿ.ಎನ್. ಮಂಜೇಗೌಡ, ಡಿ.ರವಿಶಕರ್ ಇದ್ದರು.
ಮೃಗಾಲಯಕ್ಕೆ14ರಂದು ರಜೆ ಇಲ್ಲ
ಮೈಸೂರು: ಈದ್ ಮಿಲಾದ್ ಪ್ರಯುಕ್ತ ವಿದ್ಯಾರ್ಥಿಗಳು, ಪ್ರವಾಸಿಗರು, ಜನಸಾಮಾನ್ಯರು ಹಾಗೂ ಸ್ಥಳೀಯರು ಜ. 14 ರಂದು ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನ ವೀಕ್ಷಿಸಲು ಅನುವಾಗುವಂತೆ ವಾರದ ರಜೆ ರದ್ದುಪಡಿಸಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.
ನಾಳೆ ಮುದ್ದು ಮಕ್ಕಳ ಸ್ಪರ್ಧೆ
ಸಿದ್ಧಾರ್ಥನಗರದ ಮಂಜುಶ್ರೀ ಕ್ರಿಯೇಶನ್ಸ್ ಸಂಸ್ಥೆಯು 27ನೇ ವಾರ್ಷಿಕೋತ್ಸವ ಅಂಗವಾಗಿ ಕ್ಯೂಟ್ ಬೇಬಿ ಶೋ- 2014 ಸ್ಪರ್ಧೆಯನ್ನು ಜ.12ರ ಬೆಳಗ್ಗೆ 10ಕ್ಕೆ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದೆ. 1 ತಿಂಗಳಿಂದ 4 ವರ್ಷದವರೆಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಅಲ್ಲದೆ ವಿವಿಧ ವಯೋವಾನದ ಮಕ್ಕಳಿಗೆ ಚಿತ್ರ ಸ್ಪರ್ಧೆ, ಮಹಿಳೆಯರಿಗೆ ಮೆಹಂದಿ ಸ್ಪರ್ಧೆ ಇದೆ. ಮೊ. 9880379863 ಸಂಪರ್ಕಿಸಿ.
ದತ್ತು ಸ್ವೀಕಾರ
ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಲ್ಲಿ ವಿಜಯನಗರದ ಆರ್. ಅಪರ್ಣ ಅವರು ಕಾಳಿಂಗ ಸರ್ಪ ಹಾಗೂ ಬೆಂಗಳೂರಿನ ಬಸವನಗುಡಿ ಫಾನಿ ಪ್ರಕಾಶ್ ಟಂಡ್ರ ಅವರು ಬ್ರೌನ್ ಕಪುಚಿನ್ ಮಂಕಿಯನ್ನು ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದ್ದಾರೆ.
ವೇಷಭೂಷಣ ಸ್ಪರ್ಧೆ
ಯಶು ಚಿಲ್ಡ್ರನ್ಸ್ ಅಕಾಡೆಮಿಯು ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಅಂಗವಾಗಿ ಜ.12ರ ಬೆಳಗ್ಗೆ 11ಕ್ಕೆ 15 ವರ್ಷದೊಳಗಿನ ಮಕ್ಕಳಿಗೆ ವಿವಿಧ ವೇಷಭೂಷಣ ಸ್ಪರ್ಧೆಯನ್ನು ಚಾಮರಾಜ ಜೋಡಿರಸ್ತೆಯ ಸಂಸ್ಥೆ ಆವರಣದಲ್ಲಿ ಆಯೋಜಿಸಿದೆ. ಮೊ. 9449680130 ಸಂಪರ್ಕಿಸಿ.
ವಿಚಾರಣೆ ಮುಂದಕ್ಕೆ
ಜಿಪಂನ ಬಿಜೆಪಿಯ ಇಬ್ಬರು ಸದಸ್ಯರ ವಿಪ್ ಉಲ್ಲಂಘನೆ ಪ್ರಕರಣವನ್ನು ರಾಜ್ಯ ಚುನಾವಣಾ ಆಯೋಗ ಮುಂದೂಡಿದೆ. ಜಿಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ವೇಳೆ ಬಿಜೆಪಿ ಸದಸ್ಯರಾದ ಕೆಂಪಣ್ಣ ಮತ್ತು ಮಂಜುಳಾ ಪುಟ್ಟಸ್ವಾಮಿ ಅವರು ವಿಪ್ ಉಲ್ಲಂಘಿಸಿ ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದರು. ಈ ಸಂಬಂಧ ಜಿಲ್ಲಾ ಬಿಜೆಪಿ ಅವರಿಬ್ಬರ ಸದಸ್ಯತ್ವ ಅನರ್ಹಗೊಳಿಸುವಂತೆ ಚುನಾವಣಾ ಆಯೋಗದ ಮೆಟ್ಟಿಲೇರಿದ್ದರು.
ಕಂಪ್ಲಾಪುರದಲ್ಲಿ ಗ್ರಾಮಸಭೆ
ಪಿರಿಯಾಪಟ್ಟಣ: ಸರ್ಕಾರದ ವತಿಯಿಂದ ಸಿಗುವ ಯಾವುದೇ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡಾಗ ಯೋಜನೆಗಳು ಸಾಕಾರಗೊಳ್ಳುತ್ತವೆ ಎಂದು ಗ್ರಾಪಂ ಸದಸ್ಯ ಪ್ರಕಾಶ್ಗೌಡ ಹೇಳಿದರು.ತಾಲೂಕಿನ ಕಂಪಲಾಪುರ ಗ್ರಾಪಂ ಆವರಣದಲ್ಲಿ ಏರ್ಪಡಿಸಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ರಸ್ತೆಗಳ ನಿರ್ಮಾಣ ಕಾಮಗಾರಿಗಳನ್ನು ಹಂತಹಂತವಾಗಿ ಮಾಡಲಾಗುತ್ತಿದ್ದು, ಇದಕ್ಕೆ ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು. ವೈದ್ಯಾಧಿಕಾರಿ ಡಾ.ಎಸ್.ಕೆ. ರವಿಕುಮಾರ್ ಮಾತನಾಡಿ, ಶೌಚಾಲಯ ನಿರ್ಮಿಸಿಕೊಂಡು ಅದನ್ನು ಉಪಯೋಗಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದ ಅವರು, ಶೌಚಾಲಯ ನಿರ್ಮಾಣದಿಂದಾಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಶಾಲಾ ವಿದ್ಯಾರ್ಥಿಗಳು ಶಾಲೆಯ ಚರಂಡಿ, ಮೈದಾನ ಸರಿಪಡಿಸುವಂತೆ ಹಾಗೂ ಶಾಲೆಯ ಮುಂಭಾಗ ರಸ್ತೆ ಉಬ್ಬು ಹಾಕಿಸುವಂತೆ ಬಗ್ಗೆ ಸಲ್ಲಿಸಿದರು. ತಾಪಂ ಸದಸ್ಯೆ ರತ್ನಮ್ಮ, ಗ್ರಾಪಂ ಅಧ್ಯಕ್ಷೆ ಪುಷ್ಪಾ ರಮೇಶ್, ಉಪಾಧ್ಯಕ್ಷೆ ರಾಜಮ್ಮ, ನೋಡಲ್ ಅಧಿಕಾರಿ ರಮೇಶ್, ಪಿಡಿಒ ಕುಮಾರ್, ಗ್ರಾಪಂ ಸದಸ್ಯರಾದ ಮಾಲತಿ, ರಾಮೇಗೌಡ, ತಮ್ಮಯ್ಯ, ಕಾವೇರಮ್ಮ, ಜಲೇಂದ್ರ ಇದ್ದರು.
ಮಾದಾಪುರದಲ್ಲಿ ಮಕ್ಕಳ ವಿಶೇಷ ಗ್ರಾಮಸಭೆ
ಎಚ್.ಡಿ. ಕೋಟೆ: ತಾಲೂಕಿನ ಮಾದಾಪುರ ಗ್ರಾಪಂ ಆವರಣದಲ್ಲಿ ಮಹಿಳಾ ಸಮಾಖ್ಯಾ ಕರ್ನಾಟಕ ಹಾಗೂ ಮಾದಾಪುರ ಗ್ರಾಪಂ ಸಹಯೋಗದೊಂದಿಗೆ ನಡೆದ ಮಕ್ಕಳ ವಿಶೇಷ ಗ್ರಾಮಸಭೆಯನ್ನು ಗ್ರಾಪಂ ಅಧ್ಯಕ್ಷೆ ಎಸ್. ನಿರ್ಮಲ ಉದ್ಘಾಟಿಸಿದರು. ಗ್ರಾಪಂ ವ್ಯಾಪ್ತಿಗೆ ಸಂಬಂಧಿಸಿದ 10 ಗ್ರಾಮಗಳಲ್ಲಿನ ಶಾಲೆಯ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು. ಮಕ್ಕಳು ತಮ್ಮ ಗ್ರಾಮಗಳಲ್ಲಿ, ಶಾಲೆಗಳಲ್ಲಿ ಕಂಡುಬರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಸಮಸ್ಯೆಗಳನ್ನು ಪರಿಹರಿಸುವುದಾಗಿ ಮಾದಾಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಸ್. ಸುರೇಶ್ ಕೂಡಲೇ ಬಗೆಹರಿಸುವುದಾಗಿ ಮಕ್ಕಳಿಗೆ ಭರವಸೆ ನೀಡಿದರು. ನಂತರ ಮಕ್ಕಳ ಹಕ್ಕುಗಳ ಬಗ್ಗೆ ವಿವರಿಸಿದರು. ಶಿವಣ್ಣ, ಕುಮಾರಿ, ಪುಷ್ಪ, ರಾಜೇಶ್ವರಿ ಹಾಗೂ ವಿವಿಧ ಶಾಲೆಯ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.
ಕಾಡಾನೆಗಳ ದಾಳಿಯಿಂದ ಬೆಳೆ ಹಾನಿ
ಹುಣಸೂರು: ಮೇವನ್ನರಿಸಿ ಬಂದ ಕಾಡಾನೆಗಳ ಹಿಂಡು ಮುಸುಕಿನ ಜೋಳ, ಬಾಳೆಯನ್ನು ತಿಂದು ನಾಶಪಡಿಸಿರುವ ಘಟನೆ ತಾಲೂಕಿನ ಉಮ್ಮತ್ತೂರು ಗ್ರಾಪಂ ವ್ಯಾಪ್ತಿಯ ಹೊಸೂರು ಗೇಟ್ ಬಳಿ ಜರುಗಿದೆ. ಶುಕ್ರವಾರ ಬೆಳಗಿನ ಜಾವ ಹೊಸೂರು ಗೇಟ್ನ ಮುಖ್ಯರಸ್ತೆಯ ಪಕ್ಕದಲ್ಲೇ ಇರುವ ರಮೇಶ್ ಎಂಬವವರ ಜಮೀನಿನಲ್ಲಿ ಬೆಳೆದಿದ್ದ 10 ತೆಂಗಿನ ಮರಗಳನ್ನು ಬುಡಸಮೇತ ಕಿತ್ತು ಬಿಸಾಡಿರುವ ಆನೆಗಳು, 10 ಗುಂಟೆ ಭೂಮಿಯಲ್ಲಿ ಬೆಳೆದಿದ್ದ ಮುಸುಕಿನ ಜೋಳ, ಬಾಳೆ, ಕೋಸು ಗಿಡಗಳನ್ನು ತಿಂದು ತುಳಿದು ನಾಶಪಡಿಸಿವೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಇಂದು ಜಾನಪದ ಗೀತೆ ಸ್ಪರ್ಧೆ
ಹುಣಸೂರು: ತಾಲೂಕಿನ ಬಿಳಿಕೆರೆಯಲ್ಲಿರುವ ವಿದ್ಯಾವಾರಿಧಿ ಶಿಕ್ಷಣ ಸಂಸ್ಥೆಯಲ್ಲಿ ಹಂದನಹಳ್ಳಿ ದಿ.ಪಟೇಲ್ ಬಸಪ್ಪನವರ ಸ್ಮರಣಾರ್ಥ 14ನೇ ವರ್ಷದ ಜಿಲ್ಲಾಮಟ್ಟದ ಜಾನಪದ ಗೀತೆ ಸ್ಪರ್ಧೆಯು ಜ.11ರ ಬೆಳಗ್ಗೆ 10.30ಕ್ಕೆ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದೆ. ಪ್ರೌಢಶಾಲಾ ಹಾಗೂ ಮುಕ್ತ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಅಂದು ಸಂಜೆ 5.30ಕ್ಕೆ ಸಾಂಸ್ಕೃತಿಕ ಸಭಾಂಗಣದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಶಾಲಾ ವಾರ್ಷಿಕೋತ್ಸವ ಆಯೋಜಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಎಚ್.ಪಿ. ಮಂಜುನಾಥ್ ಶಾಲಾ ಸಭಾಂಗಣ ಉದ್ಘಾಟಿಸುವರು. ಪ್ರಾಂಶುಪಾಲ ಡಿ. ಮಲ್ಲೇಗೌಡ ತಿಳಿಸಿದ್ದಾರೆ.
ನೇಮಕ
ಟಿ. ನರಸೀಪುರ: ಬನ್ನೂರು ಟೌನ್ ಬಿಜೆಪಿ ಶಕ್ತಿ ಕೇಂದ್ರದ ನೂತನ ಅಧ್ಯಕ್ಷರಾಗಿ ಬಿ.ಕೆ. ಮಂಜುನಾಥ್ ನೇಮಕವಾಗಿದ್ದಾರೆ.
ರಾಜ್ಯ ಮುಕ್ತ ಚೆಸ್ ಪಂದ್ಯಾವಳಿ
ಮೈಸೂರು: ಮೈಸೂರು ಜಿಲ್ಲಾ ಚದುರಂಗ ಸಂಸ್ಥೆ, ಯುನೈಟೆಡ್ ಕರ್ನಾಟಕ ಚದುರಂಗ ಸಂಸ್ಥೆಯು ರೋಟರಿ ಮೈಸೂರು ಸಹಯೋಗದಲ್ಲಿ ಜ.18 ಮತ್ತು 19 ರಂದು ಐಡಿಯಲ್ ಜಾವ ರೋಟರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮುಕ್ತ ರ್ಯಾಪಿಡ್ ಚದುರಂಗ ಪಂದ್ಯಾವಳಿ ಆಯೋಜಿಸಿದೆ. ಮಾಹಿತಿಗಾಗಿ ಮೊ. 99000 71193, 94481 65258 ಸಂಪರ್ಕಿಸಬಹುದು.
ಜಾಲಬರಹ ಕಾರ್ಯಾಗಾರ 18ಕ್ಕೆ
ಮೈಸೂರು ವಿವಿ ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರದ ವತಿಯಿಂದ ಜ. 18 ರ ಬೆಳಗ್ಗೆ 10.30 ರಿಂದ ಸಂಜೆ 5 ರವರೆಗೆ ಜಾಲ ಬರಹ (ವೆಬ್ ಕಂಟೆಂಟ್ ಬರವಣಿಗೆ) ಕಾರ್ಯಾಗಾರ ನಡೆಯಲಿದೆ. ಮೈಸೂರು ವಿವಿಯ ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಆಸಕ್ತರು ಜ.16 ರೊಳಗಾಗಿ ಕೇಂದ್ರದಲ್ಲಿ ಹೆಸರು ನೋಂದಾಯಿಸುವಂತೆ ನಿರ್ದೇಶಕ ಪ್ರೊ.ನಿರಂಜನ ವಾನಳ್ಳಿ ಕೋರಿದ್ದಾರೆ. ಮಾಹಿತಿಗಾಗಿ ದೂ. 2419337 ಸಂಪರ್ಕಿಸಿ.
ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಾಳೆ
ಸಕಲಕಲಾ ಸಿರಿ ವಿದ್ಯಾಪೀಠ ಚಾರಿಟಬಲ್ ಟ್ರಸ್ಟ್ನ 6ನೇ ವಾರ್ಷಿಕೋತ್ಸವ ಅಂಗವಾಗಿ ಜ.12ರ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ರಾಜ್ಯಮಟ್ಟದ ನೃತ್ಯಸ್ಪರ್ಧೆಯನ್ನು ಹೂಟಗಳ್ಳಿಯ ಕೆಎಚ್ಬಿ ಕಾಲೋನಿಯ ಟ್ರಸ್ಟ್ ಆವರಣದಲ್ಲಿ ಹಮ್ಮಿಕೊಂಡಿದೆ. ಸ್ಪರ್ಧೆಯು ಸೋಲೋ, ಗ್ರೂಪ್, ಕಪಲ್ ಗುಂಪಿನಲ್ಲಿ ನಡೆಯಲಿದೆ. ಮೊ. 9844983935 ಸಂಪರ್ಕಿಸಬಹುದು.
ತಿರುಪ್ಪಾವೈ ಕಂಠಪಾಠ ಸ್ಪರ್ಧೆ
ಸರಸ್ವತಿಪುರಂನ ಶ್ರೀವೈಷ್ಣವ ಸಭಾವು ತಿರುಪ್ಪಾವೈ ಕಂಠಪಾಠ ಸ್ಪರ್ಧೆಯನ್ನು ಜ.12ರ ಬೆಳಗ್ಗೆ 10ಕ್ಕೆ ಶ್ರೀವೈಷ್ಣವ ಸಭಾ ಭವನದಲ್ಲಿ ಆಯೋಜಿಸಿದೆ. 6 ರಿಂದ 14 ವರ್ಷದವರೆಗಿನ ಮಕ್ಕಳು ಇದರಲ್ಲಿ ಭಾಗವಹಿಸಬಹುದು. ಮೊ. 9901964242 ಸಂಪರ್ಕಿಸಬಹುದು.
ಸಚಿವ ಸಂಪುಟ ನಿರ್ಧಾರಕ್ಕೆ ಸ್ವಾಗತ
ರಾಜ್ಯ ಪಿಯು ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ ಬಿ.ಇಡಿ ತರಬೇತಿ ಪಡೆಯಲು ವೇತನಸಹಿತ ರಜೆ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿರುವುದನ್ನು ಅಖಿಲ ಕರ್ನಾಟಕ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹಿತರಕ್ಷಣಾ ಸಂಘದ ಅಧ್ಯಕ್ಷ ಇ. ಶಿವೇಗೌಡ ಸ್ವಾಗತಿಸಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

