'ರಾಮ್ ರಾಜಶೇಖರನ್ ಕ್ಷಮೆಯಾಚಿಸಲಿ'
ಮೈಸೂರು: ಸೌಹಾರ್ದತೆಯ ನೆಲೆಬೀಡಾದ ಪುಟ್ಟ ಭಾರತ ಕೇಂದ್ರೀಯ ಆಹಾರ ಸಂಶೋಧನಾಲಯ ಸಂಸ್ಥೆಯನ್ನು ನಿರ್ದೇಶಕರು ತಮ್ಮ ಬೌದ್ಧಿಕ ಮತ್ತು ಸಾಂಸ್ಕೃತಿಕ ದಿವಾಳಿತನದಿಂದ ಕ್ರೌರ್ಯದ ಪರಮಾವಧಿ ಸಂಸ್ಥೆಯನ್ನಾಗಿ ಮಾರ್ಪಡಿಸಿದ್ದು, ಈ ಕೂಡಲೇ ಅವರು ಕ್ಷಮೆಯಾಚಿಸಬೇಕು. ಇಲ್ಲ ಈ ನಾಡಿನಿಂದ ತೊಲಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಆಗ್ರಹಿಸಿದ್ದಾರೆ.
ಆರು ದಶಕಗಳ ಹಿಂದೆ ನೂರಾರು ಕೋಟಿ ರುಪಾಯಿ ಬೆಲೆ ಬಾಳುವ ಜಾಗವನ್ನು ಆಗಿನ ಮಹಾರಾಜರು ನಾಡಿನ ರೈತ ಮತ್ತು ಶ್ರೀ ಸಾಮಾನ್ಯನಿಗೆ ಸಹಕಾರಿಯಾಗಲಿ ಎನ್ನುವ ದೃಷ್ಟಿಯಿಂದ ಆಹಾರ ಸಂಶೋಧನೆಗೆಂದು ಕೇಂದ್ರ ಸರ್ಕಾರಕ್ಕೆ ಕೇವಲ ಒಂದು ರುಪಾಯಿ ಪಡೆದುಕೊಂಡು ನೀಡಿದ್ದಾರೆ. ಸುಮಾರು 65 ವರ್ಷಗಳಿದ ಅನೇಕ ಆಹಾರ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಅನೇಕ ಸಂಶೋಧನೆಗಳು ನಡೆದು ಮುಖ್ಯವಾಗಿ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಇಂತಹ ಸಂಸ್ಥೆಯ ನಿರ್ದೇಶಕರು ಈ ನಾಡಿನ ಕೊಡುಗೆ ಮರೆತಿರುವುದು ವಿಪರ್ಯಾಸ.
ಪ್ರಾರಂಭದ ನಿರ್ದೇಶಕರಾದ ಪ್ರೊ.ಬಾಲಸುಬ್ರಹ್ಮಣ್ಯಂ ಅವರಿಂದ ಎಲ್ಲಾ ನಿರ್ದೇಶಕರು ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯನ್ನು ಗೌರವಿಸುತ್ತಲೆ ಬಂದಿದ್ದಾರೆ. ಸಿಎಫ್ಟಿಆರ್ಐ ನಿರ್ದೇಶಕರೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕಾವ್ಯ ಕಮ್ಮಟ ಕಾರ್ಯಕ್ರಮವನ್ನೂ ನಡೆಸಿದ್ದು ಇತಿಹಾಸ. ಆದರೆ, ಡಾ.ರಾಮ್ ರಾಜಶೇಖರನ್ ಬಂದ ಕೂಡಲೇ ಮಾಡಿದ ಮೊದಲ ಕೆಲಸ ಜೇನುಗೂಡಿಗೆ ಕಲ್ಲು ಹೊಡೆದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಆದ್ದರಿಂದ ಈ ಕೂಡಲೇ ಕನ್ನಡಿಗರನ್ನು ಕೆಣಕುವ ಇಂತಹ ಕೃತ್ಯ ನಿಲ್ಲಿಸಬೇಕು. ಕನ್ನಡ ಸಹೃದಯ ಬಳಗದ ಕಚೇರಿಯನ್ನು ತೆರೆದು ಕನ್ನಡದ ಕೆಲಸ ಸುಗಮವಾಗಿ ನಡೆಯಲು ಅನುವು ಮಾಡಿಕೊಡಬೇಕು. ಕರವೇ ಕಾರ್ಯಕರ್ತರ ಮೇಲೆ ದಾಖಲಿಸಿರುವ ಮೊಕದ್ದಮೆನ್ನು ಕೂಡಲೇ ವಾಪಸ್ ಪಡೆಯಬೇಕು. ನಿಲ್ಲಿಸಿರುವ ಆಹಾರ ವಿಜ್ಞಾನ ಮಾಸ ಪತ್ರಿಕೆಯನ್ನು ಹೊರತರಬೇಕು. ಕನ್ನಡಿಗರಿಗೆ ಕಿರುಕುಳ ನೀಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

