ಮೂಗೂರಿನಲ್ಲಿ ಬ್ರಹ್ಮ ರಥೋತ್ಸವ
ಮೂಗೂರು: ಮೂಗೂರಿನ ಗ್ರಾಮ ದೇವತೆ ಪುರಾಣ ಪ್ರಸಿದ್ಧ ಶ್ರೀ ತ್ರಿಪುರ ಸುಂದರಿಯಮ್ಮನವರ ಬ್ರಹ್ಮ ರಥೋತ್ಸವವು ಶನಿವಾರ ವಿಜೃಂಭಣೆಯಿಂದ ನೆರವೇರಿತು.
ಶ್ರೀ ತ್ರಿಪುರ ಸುಂದರಿಯಮ್ಮನವರ ದೇವಾಲಯದಲ್ಲಿ ಶನಿವಾರ ಮುಂಜಾನೆಯಿಂದಲೇ ಬ್ರಹ್ಮ ರಥೋತ್ಸವಕ್ಕೆ ಧಾರ್ಮಿಕ ಸಿದ್ಧತೆಗಳು ಭರದಿಂದ ನಡೆದವು. ಬಿಸಿಲನ್ನು ಲೆಕ್ಕಿಸದೇ ಭಕ್ತಾದಿಗಳು ಸಾಲಿನಲ್ಲಿ ನಿಂತು ದರ್ಶನ ಪಡೆದು ನಮನ ಸಲ್ಲಿಸಿದರು. ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಮ್ಮನವರಿಗೆ ಪೂಜಾ ಕೈಂಕರ್ಯಗಳು ನಡೆದವು. ಉತ್ಸವ ಮೂರ್ತಿಯನ್ನು ದೇವಾಲಯದ ಆವರಣದಲ್ಲಿ ಪ್ರದಕ್ಷಿಣೆ ಹಾಕಿದ ನಂತರ ಮಂಟಪಕ್ಕೆ ತಂದು ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ತರಲಾಯಿತು.
ಮಧ್ಯಾಹ್ನ 3.35ಕ್ಕೆ ವಾಟಾಳು ಶ್ರೀ ಸಿದ್ದಲಿಂಗಶಿವಚಾರ್ಯ ಸ್ವಾಮೀಜಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾಧಿಗಳು ಸಂಭ್ರಮದಿಂದ ರಥೋತ್ಸವದಲ್ಲಿ ಭಾಗವಹಿಸಿ, ರಥವನ್ನು ಎಳೆದು ಹಣ್ಣು-ಜವನವನ್ನು ಅರ್ಪಿಸಿ, ತಮ್ಮ ಇಷ್ಟಾರ್ಥವನ್ನು ನೆರೆವೇರಿಸುವಂತೆ ಪ್ರಾರ್ಥಿಸಿದರು.
ಮೂಗೂರಿನ ಅಂಗಡಿ ಬೀದಿ ಮೂಲಕ ಸಂಚರಿಸಿ ಕಡಿದಾದ ರಸ್ತೆಯಲ್ಲಿ ಅಲ್ಪಸ್ವಲ್ಪ ತಡೆಯೊಡ್ಡಿದರೂ ಭಕ್ತಾದಿಗಳು ಅಮ್ಮನವರಿಗೆ ಜೈಕಾರ ಕೂಗುತ್ತಾ ಸುಲಲಿತವಾಗಿ ಬಂಡಿ ಬೀದಿ ತಲುಪಿ ಕೇಂದ್ರ ಸ್ಥಾನಕ್ಕೆ ಮರಳಿತು. ರಥವು ಶಿಥಿಲಗೊಂಡಿದ್ದರಿಂದ ಬಲಕ್ಕೆ ಬಾಗಿದ್ದು, ಜನತೆಯಲ್ಲಿ ಆತಂಕ ಉಂಟು ಮಾಡಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಹರಕೆಯನ್ನು ಹೊತ್ತಿದ್ದ ಭಕ್ತಾದಿಗಳು ಸಾರ್ವಜನಿಕರಿಗೆ ಬೆಳಿಗ್ಗೆಯಿಂದ ಮಧ್ಯಾಹ್ನವರೆಗೂ ಅಲ್ಲಲ್ಲಿ ಪಾನಕ, ಮಜ್ಜಿಗೆ ಸೇರಿದಂತೆ ಉಪಹಾರವನ್ನು ವಿತರಿಸುತ್ತಿದ್ದುದು ಸಾಮಾನ್ಯವಾಗಿತ್ತು. ರಥೋತ್ಸವಕ್ಕೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ತಹಸೀಲ್ದಾರ್ ಅರುಣಪ್ರಭಾ, ಮಾಜಿ ಪ್ರಧಾನ ಎಂ.ಡಿ.ಬಸವರಾಜು, ಪಾರುಪತ್ತೇದಾರ ನಾಗೇಂದ್ರ, ಕನ್ನಡ ಚಳವಳಿಗಾರ ಮೂಗೂರು ನಂಜುಂಡಸ್ವಾಮಿ, ಗ್ರಾಪಂ ಅಧ್ಯಕ್ಷ ಜಗದೀಶ್ಮೂರ್ತಿ, ಮಾಜಿ ಉಪಾಧ್ಯಕ್ಷ ಮಹದೇವಸ್ವಾಮಿ, ಎಂ.ಆರ್.ಸುಂದರ್, ಎಂ.ಆರ್.ಶಿವಮೂರ್ತಿ ಗೌಡ, ನಾಗರಾಜು, ಎಂ.ಕೆ.ಸಿದ್ದರಾಜು, ಎಂ. ರಾಜು, ಕೃಷ್ಣಸ್ವಾಮಿ, ರಮೇಶ್ನಾಯ್ಕ, ಮಹದೇವನಾಯ್ಕ, ಯಜಮಾನ್ ಪುಟ್ಟಮಾದಯ್ಯ, ಎಂ.ಪಿ. ಮರಿಸ್ವಾಮಿ, ದೇವನಂದ, ನಿಂಗಪ್ಪ, ಮೂಗೂರು ಕುಮಾರಸ್ವಾಮಿ, ನಂಜಪ್ಪ, ಎಂ.ಡಿ. ಸಾಗರ್, ವಿನಯ್, ಸತೀಶ್ಗೌಡ ಇದ್ದರು.
ತೆಪ್ಪೋತ್ಸವ: ಮೂಗೂರಿನ ಶ್ರೀ ತ್ರಿಪುರ ಸುಂದರಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ತೆಪ್ಪೋತ್ಸವವು ಕಲ್ಯಾಣಿಯಲ್ಲಿ ಸಂಭ್ರಮದಿಂದ ಶುಕ್ರವಾರ ರಾತ್ರಿ ನೆರೆವೇರಿತು. ಅಮ್ಮನವರಿಗೆ ಅಲಂಕೃತ ಹೂವಿನ ಪಲ್ಲಕ್ಕಿ ಉತ್ಸವದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಡೋಲು ಕುಣಿತ, ವೀರಗಾಸೆ, ಆಕರ್ಷಿತ ಬಾಣ ಬೀರಿಸು ಪ್ರದರ್ಶನದೊಂದಿಗೆ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

