ಮೈಸೂರು

ಬಸ್ ಡಿಕ್ಕಿ: ಬೈಕ್ ಸವಾರನಿಗೆ ಗಾಯ

Published On :

ಕಿತ್ತೂರು: ಸಾರಿಗೆ ಬಸ್ ಡಿಕ್ಕಿಯಾಗಿ ಬೈಕ್ ಸವಾರ ತೀವ್ರ ಗಾಯಗೊಂಡಿರುವ ಘಟನೆ ಕಿತ್ತೂರಿನಲ್ಲಿ ನಡೆದಿದೆ. ಪಿರಿಯಾಪಟ್ಟಣ ತಾಲೂಕು ಒಕ್ಕಲಿಗರ ಯುವ ವೇದಿಕೆ ಉಪಾಧ್ಯಕ್ಷ ಕೆ.ಎಸ್. ದಿನೇಶ್ (38) ಗಾಯಗೊಂಡವರು. ಕಿತ್ತೂರಿನ ಸಾರ್ವಜನಿಕ ಆಸ್ಪತ್ರೆ ಎದುರು ಈ ಘಟನೆ ಸಂಭವಿಸಿದೆ. ಗಾಯಗೊಂಡ ಕೆ.ಎಸ್. ದಿನೇಶ್ ಅವರಿಗೆ ಕಿತ್ತೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯಲಾಗಿದೆ. ಈ ಸಂಬಂಧ ಬೆಟ್ಟದಪುರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.



ಮೂರು ಟ್ರ್ಯಾಕ್ಟರ್ಗಳ ವಶ: ಇಬ್ಬರ ಬಂಧನ


ಹುಣಸೂರು: ತಾಲೂಕಿನ ವಿವಿಧೆಡೆ ಕಳ್ಳತನ ಮಾಡಿದ್ದ 15 ಲಕ್ಷ ಮೌಲ್ಯದ ಮೂರು ಟ್ರ್ಯಾಕ್ಟರ್ಗಳನ್ನು ಪಟ್ಟಣ ಠಾಣೆ ಪೊಲೀಸರು ವಶಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಾಮರಾಜನಗರ ತಾ. ಬೊಮ್ಮನಹಳ್ಳಿಯ ಮಂಜುನಾಥ್ ಎಂಬವರ ಪುತ್ರ ನಾಗರಾಜ ಹಾಗೂ ಅಟ್ಟಗುಳಿಪುರದ ಕೃಷ್ಣ ಎಂಬವರ ಪುತ್ರ ಕೆ. ಮಂಜು ಬಂಧಿತ ಆರೋಪಿಗಳು.
ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಅಭಿನವ್ ಖರೆ, ಹುಣಸೂರು ತಾ. ಎಮ್ಮೆಕೊಪ್ಪಲು ಗ್ರಾಮದ ಈಶ್ವರ ಎಂಬವರ ಮನೆ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಜ.17 ರಂದು ರಾತ್ರಿ ಕಳ್ಳತನವಾಗಿತ್ತು. ಈ ಬಗ್ಗೆ ರಾತ್ರಿ ಗಸ್ತಿನಲ್ಲಿದ್ದ ಪಟ್ಟಣ ಠಾಣೆ ಎಸ್ಐ ಲವ ಮತ್ತವರ ತಂಡ ಮಾಹಿತಿ ಪಡೆದು, ಮೈಸೂರು ಗ್ರಾಮಾಂತರ ಎಸ್ಐ ಜಗದೀಶ್ ತಂಡದ ಸಹಕಾರದಿಂದ ಕಲಾ ಮಂದಿರದ ಬಳಿ ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಂಡು ನಾಗರಾಜನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಮಂಜು ಜೊತೆಗೆ ಸೇರಿ ಕುಶಾಲನಗರ ಹಾಗೂ ಗುಡ್ಡೆ ಹೊಸೂರಿನಲ್ಲಿ ತಲಾ ಒಂದು ಟ್ರ್ಯಾಕ್ಟರ್ ಕಳ್ಳತನ ಮಾಡಿದ್ದ ಪ್ರಕರಣ ಬಯಲಾಗಿ ಎಲ್ಲ ಟ್ರ್ಯಾಕ್ಟರ್ಗಳನ್ನು, ಕೃತ್ಯಕ್ಕೆ ಬಳಸಿದ್ದ ಬೈಕ್, ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವರಿಗೆ ನಗದು ಬಹುಮಾನ ನೀಡಲಾಗುವುದು ಎಂದರು.
ಡಿವೈಎಸ್ಪಿ ನಂಜುಂಡ ಮಾರ್ಗದರ್ಶನದಲ್ಲಿ ಸರ್ಕಲ್ ಗಜೇಂದ್ರಪ್ರಸಾದ್, ನೇತೃತ್ವದಲ್ಲಿ ಎಸ್ಐ ಲವ, ಎಎಸ್ಐ ಮಾದೇಗೌಡ, ಸಿಬ್ಬಂದಿ ಕಬಿರುದ್ದೀನ್, ಪ್ರಭಾಕರ, ಶೇಖರ್, ಶಂಕರ, ಮೆಹರಾಜ್, ವಿಜಯರಘು, ಸಂಜಯಕುಮಾರ್, ಸದಾಶಿವ, ಶಿವಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಡಿವೈಎಸ್ಪಿ ನಂಜುಂಡ, ಎಸ್ಐ ಗಜೇಂದ್ರಪ್ರಸಾದ್, ಎಸ್ಐಗಳಾದ ಲವ, ರಾಘವೇಂದ್ರ ಇದ್ದರು.


ಬಸ್ ಡಿಕ್ಕಿ: ಬೈಕ್ ಸವಾರನಿಗೆ ಗಾಯ

ಕಿತ್ತೂರು: ಸಾರಿಗೆ ಬಸ್ ಡಿಕ್ಕಿಯಾಗಿ ಬೈಕ್ ಸವಾರ ತೀವ್ರ ಗಾಯಗೊಂಡಿರುವ ಘಟನೆ ಕಿತ್ತೂರಿನಲ್ಲಿ ನಡೆದಿದೆ. ಪಿರಿಯಾಪಟ್ಟಣ ತಾಲೂಕು ಒಕ್ಕಲಿಗರ ಯುವ ವೇದಿಕೆ ಉಪಾಧ್ಯಕ್ಷ ಕೆ.ಎಸ್. ದಿನೇಶ್ (38) ಗಾಯಗೊಂಡವರು. ಕಿತ್ತೂರಿನ ಸಾರ್ವಜನಿಕ ಆಸ್ಪತ್ರೆ ಎದುರು ಈ ಘಟನೆ ಸಂಭವಿಸಿದೆ. ಗಾಯಗೊಂಡ ಕೆ.ಎಸ್. ದಿನೇಶ್ ಅವರಿಗೆ ಕಿತ್ತೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯಲಾಗಿದೆ. ಈ ಸಂಬಂಧ ಬೆಟ್ಟದಪುರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.