ಸಂಸ್ಕೃತ ಉಳಿಸಿ ಬೆಳೆಸಿ: ಮುಕ್ತಿದಾನಂದಜಿ
ಮೈಸೂರು: ದೇವಭಾಷೆಯಾದ ಸಂಸ್ಕೃತವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನೆಮ್ಮೆಲ್ಲರ ಮೇಲಿದೆ ಎಂದು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಹೇಳಿದರು.
ನಗರದ ಸದ್ವಿದ್ಯಾ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ವಿಜಯಲಕ್ಷ್ಮೀ ಪ್ರಕಾಶನದಿಂದ ಹೊರತಂದಿರುವ ಡಾ. ಎಸ್. ಶಿವರಾಜಪ್ಪ ಅವರ ಸಂಸ್ಕೃತ ವ್ಯಾಕರಣ ಪರಿಚಯ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮನುಷ್ಯನ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಸಂಸ್ಕೃತ ಭಾಷೆ. ಹಲವು ಪ್ರಾದೇಶಿಕ ಭಾಷೆಗಳ ತಾಯಿಬೇರು ಸಂಸ್ಕೃತದ್ದೆ ಆಗಿದೆ ಎಂದರು.
ಒಂದಾನೊಂದು ಕಾಲದಲ್ಲಿ ಆಡುಭಾಷೆಯಾಗಿ, ಸಾಮಾನ್ಯರ ಭಾಷೆಯಾಗಿದ್ದ ಸಂಸ್ಕೃತ ಇಂದು ಅಸಹಜ ಭಾಷೆಯಾಗಿ ಉಳಿದಿದೆ. ಕುವೆಂಪು ಅವರ ಹೆಚ್ಚು ಸಂಸ್ಕೃತ ಭಾಷೆ ಬೆಳೆಸಿ ಕೃತಿ ರಚಿಸಿದ್ದಾರೆ. ರಾಮಕೃಷ್ಣರ ಕುರಿತ ಬರೆದಿರುವ ಪುಸ್ತಕದಲ್ಲಿ ಅಮೋಘವಾಗಿ ಪದಗಳನ್ನು ಬಳಸಿದ್ದಾರೆ. ವೇದ, ಉಪನಿಷತ್ತುಗಳಲ್ಲಿ ಸಂಸ್ಕೃತದ ಸಾರ ಅಡಗಿದೆ ಎಂದು ಅವರು ತಿಳಿಸಿದರು.
ಸಂಸ್ಕೃತ ವ್ಯಾಕರಣ ಪರಿಚಯ ಗ್ರಂಥ ಬಿಡುಗಡೆಗೊಳಿಸಿದ ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ಛಂದಸ್ಸನ್ನು ಸರಿಯಾಗಿ ತಿಳಿದುಕೊಂಡಿದ್ದರೆ ಕಾವ್ಯದ ಹೊಳಹೊಕ್ಕು ನೋಡಬಹುದು. ಹಿಂದಿನ ಎಲ್ಲಾ ವಿದ್ವಾಂಸರು ವ್ಯಾಕರಣದಲ್ಲಿ ಸಿದ್ಧಹಸ್ತರಾಗಿದ್ದರು. ವ್ಯಾಕರಣ- ನ್ಯಾಯಶಾಸ್ತ್ರ ಸಾಹಿತ್ಯದಲ್ಲಿ ಅಗತ್ಯವಾಗಿ ತಿಳಿದುಕೊಂಡಿರಬೇಕಾದ ವಿಷಯಗಳು. ಶಿವರಾಜಪ್ಪ ಅವರು ಅತ್ಯಂತ ಸರಳವಾಗಿ ವ್ಯಾಕರಣವನ್ನು ತಿಳಿಸಿಕೊಟ್ಟಿದ್ದಾರೆ. ಎಲ್ಲ ಸಂಸ್ಕೃತ ವಿದ್ಯಾರ್ಥಿಗಳು ಈ ಪುಸ್ತಕವನ್ನು ಖರೀದಿಸಿ ಸಂಸ್ಕೃತ ಜ್ಞಾನ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಕಿವಿಮಾತು ಹೇಳಿದರು.
ಸದ್ವಿದ್ಯಾ ಸಂಸ್ಥೆಯ ಎಂ.ಡಿ. ಗೋಪಿನಾಥ, ಪ್ರಕಾಶಕ ಕೆ.ವಿ. ರಾಮಪ್ರಸಾದ್, ಲೇಖಕ ಡಾ. ಎಸ್. ಶಿವರಾಜಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

