ಇಂದು ವಿದ್ಯುತ್ ಪೂರೈಕೆ ವ್ಯತ್ಯಯ
ನಂಜನಗೂಡು: ಪಟ್ಟಣ ವ್ಯಾಪ್ತಿಯ ಶ್ರೀಕಂಠೇಶ್ವರ ದೇವಸ್ಥಾನದ ಹತ್ತಿರ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಜ.27ರ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಹಳ್ಳದ ಕೇರಿ, ಮಹದೇವನಗರ ಕುಡಿಯುವ ನೀರಿನ ಸ್ಥಾವರ ಹಾಗೂ ತಮ್ಮಡಗೆರೆಯಲ್ಲಿ ವಿದ್ಯುತ್ ಅಡಚಣೆಯಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಸರ್ಕಾರಿ ಜಮೀನು ಒತ್ತುವರಿ ತೆರವು
ರಾವಂದೂರು: ಪಿರಿಯಾಪಟ್ಟಣ ತಾಲೂಕಿನ ಹಿಟ್ನನಹಳ್ಳಿ ಗ್ರಾಮದಲ್ಲಿ ಸರ್ವೆ ನಂ.3ರಲ್ಲಿ 4.5 ಎಕರೆ ಒತ್ತುವರಿ ಜಮೀನನ್ನು ರಾಜಸ್ವ ನಿರೀಕ್ಷಕ ಪುಟ್ಟಶೆಟ್ಟಿ ನೇತೃತ್ವದಲ್ಲಿ ಭಾನುವಾರ ತೆರವುಗೊಳಿಸಲಾಯಿತು. ಒತ್ತುವರಿಯಾಗಿದ್ದ 4.5 ಎಕರೆಯಷ್ಟು ಪ್ರದೇಶವನ್ನು ತಹಸೀಲ್ದಾರ್ ಎಂ.ಕೆ. ಸವಿತಾ ಮಾರ್ಗದರ್ಶನದ ಮೇರೆಗೆ ಉಪತಹಸೀಲ್ದಾರ್ ಸಣ್ಣರಾಮಪ್ಪ ಆದೇಶದ ಅನುಸಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಒತ್ತುವರಿ ಪ್ರದೇಶದಲ್ಲಿ ಬೆಳೆಯಲಾಗಿದ್ದ 65 ತೆಂಗಿನ ಮರಗಳು, 20 ನೀಲಗಿರಿ ಮರಗಳು ಸೇರಿದ್ದು ಇವುಗಳನ್ನು ಜೆಸಿಬಿ ಯಂತ್ರದ ಮೂಲಕ ಕಿತ್ತು ಹಾಕಲಾಯಿತು. ಪಿಡಿಒ ದೇವರಾಜು, ಗ್ರಾಮಲೆಕ್ಕಿಗ ನಂದೀಶ್, ಸರ್ವೇಯರ್ ಜಯಕುಮಾರ್, ಮುಖಂಡ ಜಗದೀಶ್ ಇದ್ದರು.
ಬೃಹತ್ ಸ್ವಚ್ಛತಾ ಅಭಿಯಾನ
ಎಚ್.ಡಿ. ಕೋಟೆ: ಗಣರಾಜ್ಯೋತ್ಸವ ಅಂಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಭಾನುವಾರ ತಾಲೂಕಿನ 17 ಕಾರ್ಯಕ್ಷೇತ್ರಗಳಲ್ಲಿ ಸ್ವಚ್ಛತಾ ಅಭಿಯಾನ ಮತ್ತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆರೋಗ್ಯ ಇಲಾಖೆ ಸಿಬ್ಬಂದಿ, ಶಾಲಾ ಶಿಕ್ಷಕರು, ಯೋಜನೆ ಅಧಿಕಾರಿ ವರ್ಗದವರು, ರೈತ ಮುಖಂಡರು ಮತ್ತು ಗ್ರಾಮದ ಮುಖಂಡರು ಭಾಗವಹಿಸಿದ್ದರು. ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ವತಿಯಿಂದ ಕೆಂಚನಹಳ್ಳಿಯಲ್ಲಿ ನೈರ್ಮಲ್ಯದ ಬಗ್ಗೆ ವಿಡಿಯೋ ಮೂಲಕ ಮಾಹಿತಿ ನೀಡಲಾಯಿತು. ಸ್ವಚ್ಛತಾ ಅಭಿಯಾನದಲ್ಲಿ ಸುಮಾರು 60 ಜನ ಗಣ್ಯವ್ಯಕ್ತಿಗಳು ಹಾಗೂ 5000 ಸದಸ್ಯರು ಭಾಗವಹಿಸಿದ್ದರು.
ಫೆ.2 ರಂದು ವೈದ್ಯಕೀಯ ಶಿಬಿರ
ಹುಣಸೂರು: ರೋಟರಿ ಮೈಸೂರು ಉತ್ತರ, ಶಾರದಮ್ಮ- ಗೋವಿಂದರಾಜಶೆಟ್ಟಿ ಚಾರಿಟಬಲ್ ಟ್ರಸ್ಟ್ನ ಸಂಯುಕ್ತಾಶ್ರಯದಲ್ಲಿ ಫೆ.2ರ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ತಾಲೂಕಿನ ಗಾವಡಗೆರೆಯ ಶ್ರೀ ಗುರುಲಿಂಗಜಂಗಮ ಮಠದಲ್ಲಿ ವೈದ್ಯಕೀಯ ಉಚಿತ ಶಿಬಿರ ಆಯೋಜಿಸಲಾಗಿದೆ.ಶಿಬಿರದಲ್ಲಿ ತಜ್ಞ ವೈದ್ಯರಿಂದ ವೈದ್ಯಕೀಯ ತಪಾಸಣೆ, ಸಲಹೆ, ಸಣ್ಣ ಪುಟ್ಟ ರೋಗ ಗಳಿಗೆ ಸ್ಥಳದಲ್ಲೇ ಚಿಕಿತ್ಸೆ, ಕೆಲವು ಕಾಯಿಲೆಗಳಿಗೆ ಲಭ್ಯವಿರುವ ಔಷಧ ವಿತರಣೆ, ಮಧುಮೇಹ ರೋಗಿಗಳಿಗೆ ಸ್ತಳದಲ್ಲಿಯೇ ರಕ್ತ ಪರೀಕ್ಷೆ ಮಾಡಲಾಗುತ್ತದೆ. ಕೀಲು ಮತ್ತು ಮೂಳೆ, ದಂತ, ಪ್ರಸೂತಿ, ಸ್ತ್ರೀರೋಗ, ಮಕ್ಕಳ ವೈದ್ಯರು ಭಾಗವಹಿಸುವರು.
ನೇಮಕ
ಟಿ. ನರಸೀಪುರ: ವರುಣ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಉಪಾಧ್ಯಕ್ಷರಾಗಿ ಮರಶೆ ಗ್ರಾಮದ ಸಿದ್ದನಾಯ್ಕ ನೇಮಕವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

