ನೋಂದಣಿ, ಪರವಾನಗಿ ಪಡೆಯಲು ಸೂಚನೆ
ಮೈಸೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಮತ್ತು ನಿಯಮಗಳು-2011ರಡಿ ಆಹಾರ ವ್ಯಾಪಾರಸ್ಥರು ಪರವಾನಗಿ ಪಡೆಯುವುದು ಕಡ್ಡಾಯವಾಗಿರುತ್ತದೆ. ವರ್ಷಕ್ಕೆ 12 ಲಕ್ಷಕ್ಕೆ ಮಿಗಿಲಾಗಿ ವ್ಯವಹರಿಸುವ ಆಹಾರ ವಸ್ತುಗಳ ವಹಿವಾಟುದಾರರು ಪರವಾನಗಿಯನ್ನು ಹಾಗೂ 12 ಲಕ್ಷಕ್ಕಿಂತ ಕಡಿಮೆ ವ್ಯವಹರಿಸುವ ಆಹಾರ ವಸ್ತುಗಳ ವಹಿವಾಟುದಾರರು ನೋಂದಣಿ ಮಾಡಿಸಿಕೊಳ್ಳಬೇಕಿದೆ. ಚಾಲ್ತಿಯಲ್ಲಿರುವ ಎಲ್ಲ ಬಗೆಯ ಆಹಾರ ಪದಾರ್ಥಗಳ ವಹಿವಾಟುದಾರರು ಪರವಾನಗಿ, ನೋಂದಣಿ ಪಡೆಯಲು ಫೆ.4 ಕಡೆಯ ದಿನವಾಗಿದೆ. ನಂತರ ಪರವಾನಗಿ ರಹಿತ ಆಹಾರ ವಸ್ತುಗಳ ವ್ಯವಹಾರವು ಕಾನೂನು ಬಾಹಿರವಾಗಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಸೆಕ್ಷನ್-63 ರನ್ವಯ 5 ಲಕ್ಷ ದಂಡ ಮತ್ತು 6 ತಿಂಗಳ ಸೆರೆವಾಸ ವಿಧಿಸಬಹುದು ಎಂದು ಆಹಾರ ಸುರಕ್ಷತೆ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅಂಕಿತ ಅಧಿಕಾರಿಗಳ ಕಾರ್ಯಾಲಯ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ನಗರಪಾಲಿಕೆಯ ವ್ಯಾಪ್ತಿ, ಎನ್ಪಿಸಿ ಆಸ್ಪತ್ರೆ ಆವರಣ, ಮೈಸೂರು, ದೂ.2438144ನ್ನು ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

