ವಿಭಾಗಗಳ ನಡುವೆ ವಿಷಯ ವಿನಿಮಯ ಇಲ್ಲ
ಮೈಸೂರು: ವಿಶ್ವವಿದ್ಯಾಲಯಗಳ ವಿವಿಧ ವಿಭಾಗಗಳ ನಡುವೆ ವಿಷಯ ವಿನಿಮಯ ಇಲ್ಲದಿರುವುದು ಕಲಿಕೆಗೆ ಹಿನ್ನಡೆಯಾಗುತ್ತಿದೆ ಎಂದು ಕುವೆಂಪು ವಿವಿ ಇಂಗ್ಲಿಷ್ ಅಧ್ಯಯನ ವಿಭಾಗದ ಪ್ರಾಧ್ಯಾಪಕ ರಾಜೇಂದ್ರ ಚೆನ್ನಿ ಹೇಳಿದರು.
ಮೈಸೂರು ವಿವಿ, ಯುಜಿಸಿ- ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಸಂಸ್ಕೃತ ಅಧ್ಯಯನ ವಿಭಾಗದ ಸಂಯುಕ್ತಾಶ್ರಯದಲ್ಲಿ ಸಹಾಯಕ ಪ್ರಾಧ್ಯಾಪಕರಿಗೆ ಏರ್ಪಡಿಸಿದ್ದ 8ನೇ ಭಾರತೀಯ ಸಾಹಿತ್ಯ ಪುನಶ್ಚೇತನ ಶಿಬಿರದಲ್ಲಿ ಭಾರತೀಯ ಸಾಹಿತ್ಯದ ಹೊಸ ಓದು ಕುರಿತು ಅವರು ಮಾತನಾಡಿದರು.
ಶೈಕ್ಷಣಿಕ ವಿಚಾರಗಳು ಪರಸ್ಪರ ವಿನಿಮಯಗೊಂಡಾಗ ಗುಣಮಟ್ಟದ ಶಿಕ್ಷಣ ಒದಗಿಸಲು ಸಾಧ್ಯ. ಈ ಪದ್ಧತಿ ನಮ್ಮಲ್ಲಿ ಇಲ್ಲದಂತಾಗಿದೆ. ಸಾಹಿತ್ಯದಲ್ಲಿ ಹಳೆಯದು ಹೊಸದು ಎಂಬ ವಿಭಾಗಗಳಿಲ್ಲ. ಸಾಹಿತ್ಯ ಎಲ್ಲಾ ಕಾಲಕ್ಕೂ ಸಲ್ಲುವಂತದ್ದು. ಸಮಕಾಲೀನ ವಿಚಾರಗಳನ್ನು ಒಳಗೊಂಡಿದೆ. ಸಾಹಿತ್ಯ ಇತಿಹಾಸದ ಪ್ರತಿಧ್ವನಿಯಾಗಿದೆ. ಅದು ಇತಿಹಾಸವನ್ನು ಹೇಳುವುದರೊಂದಿಗೆ ಸಮಕಾಲೀನತೆಗೆ ಸ್ಪಂದಿಸುತ್ತದೆ. ಭಾರತದಲ್ಲಿ ಓದುಗರು ಎಂದರೆ ಕಲ್ಪಿತ ಸಮುದಾಯ ಎಂಬ ವಾದವಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಭಾರತೀಯ ಭಾಷಾ ಸಂಸ್ಥೆಯ ನಿರ್ದೇಶಕ ಪ್ರೊ.ಅವದೇಶ್ಕುಮಾರ್ ಮಿಶ್ರಾ ಮಾತನಾಡಿ, ಮನುಷ್ಯ ಸಾಹಿತ್ಯ ಓದಿದರೆ ತನ್ನ ಬುದ್ಧಿಮತ್ತೆಯನ್ನು ಹೆಚ್ಚಿಸಿಕೊಳ್ಳಬಹುದು. ಜ್ಞಾನದಿಂದ ಅಹಂಕಾರ ಸರ್ವನಾಶವಾಗುತ್ತದೆ. ಆಗ ಮಾನವೀಯ ಸಂಬಂಧ ವೃದ್ಧಿಯಾಗುತ್ತದೆ. ಸಮಾಜದಲ್ಲಿ ಕಷ್ಟ, ದುಃಖ, ದುಮ್ಮಾನ, ದುಗುಡದಿಂದ ಬಳಲುತ್ತಿರುವವರಿಗೆ ಸ್ಪಂದಿಸಲು ಮಾನವೀಯತೆ ಬೇಕು. ಅಂತಃಕರಣವಿದ್ದಲ್ಲಿ ಮಾನವೀಯತೆ ಬೆಳೆಯುತ್ತದೆ. ಸಾಹಿತ್ಯದ ಓದಿನಿಂದ ಸಹಾನುಭೂತಿ ಪ್ರಖರಗೊಳ್ಳುತ್ತದೆ ಎಂದು ತಿಳಿಸಿದರು.
ಯುಜಿಸಿ- ಶೈಕ್ಷಣಿ ಮಹಾವಿದ್ಯಾಲಯದ ನಿರ್ದೇಶಕ ಪ್ರೊ.ಲಿಂಗರಾಜ ಗಾಂಧಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ಅಧ್ಯಯನ ವಿಭಾಗದ ನಿರ್ದೇಶಕ ಪ್ರೊ.ಎಂ.ಆರ್. ವೀರಭದ್ರಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

