ಮೈಸೂರು

ಗೌರವಧನ ವಿಳಂಬ: ಪ್ರೇರಕರ ಪ್ರತಿಭಟನೆ

Published On :

ನಂಜನಗೂಡು, ಜ. 30
ತಾಲೂಕಿನ 45 ಗ್ರಾಪಂಗಳಲ್ಲಿ ಭಾರತ್ ಸಾಕ್ಷರತ್ ಕಾರ್ಯಕ್ರಮದಲ್ಲಿ ಅನಕ್ಷರಸ್ಥ ಹೋಗಲಾಡಿಸಲು ದುಡಿಯುತ್ತಿರುವ ನೌಕರರಿಗೆ ಕಳೆದ 13 ತಿಂಗಳಿಂದ ಗೌರವ ಧನ ನೀಡದೇ ಇರುವುದರಿಂದ ಪ್ರೇರಕರು ತರಬೇತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿರುವ ಘಟನೆ ಗುರುವಾರ ಪಟ್ಟಣದಲ್ಲಿ ಜರುಗಿದೆ.
ಪಟ್ಟಣದ ಸಿನಿಮಾ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದಿನಿಂದ ಲೋಕಶಿಕ್ಷಣ ಸಮಿತಿ ಸ್ವಯಂ ಸೇವಕರು, ಮುಖ್ಯ ಶಿಕ್ಷಕರ ತರಬೇತುದಾರರ ಸಭೆ ಆಯೋಜಿಸಲಾಗಿತ್ತು. ಈ ಸಭೆಗೆ ಪ್ರೇರಕರು ಹಾಜರಾಗದೆ ಸಂಬಳ ನೀಡಬೇಕೆಂದು ಆಗ್ರಹಿಸಿ ಪ್ರತಿಭಟಿಸಿದರು.
ವಯಸ್ಕರ ಶಿಕ್ಷಣ ಅಧಿಕಾರಿ ಡಾ. ಶಂಕರೇಗೌಡ ಮಾತನಾಡಿ, ರಾಜ್ಯದಲ್ಲಿ 18 ಜಿಲ್ಲೆಗಳಲ್ಲಿ ಲೆಕ್ಕಪರಿಶೋಧಕ ಕಾರ್ಯ ಮುಗಿದಿದ್ದು, ಶೀಘ್ರದಲ್ಲೆ ಗೌರವಧನ ಬಿಡುಗಡೆಯಾಗುವ ಸಂಭವವಿದೆ. ಆದ್ದರಿಂದ ಪ್ರೇರಕರು ಪ್ರತಿಭಟನೆ ಕೈಬಿಟ್ಟು ತರಬೇತಿಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.  ಶಿಕ್ಷಕರನ್ನು ಕುರಿತು ಟಿ. ವಿಶ್ವೇಶ್ವರಯ್ಯ ಮಾತನಾಡಿದರು.


ಪಿರಿಯಾಪಟ್ಟಣ: ಆದಿವಾಸಿಗಳ ಪ್ರತಿಭಟನೆ
ಪಿರಿಯಾಪಟ್ಟಣ: ಆದಿವಾಸಿ ಬುಡಕಟ್ಟು ಹಕ್ಕುಗಳ ಅನುಷ್ಟಾನ ಹಾಗೂ ರಕ್ಷಣೆಗಾಗಿ ಒತ್ತಾಯಿಸಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಸದಸ್ಯರು ತಾಲೂಕು ಆಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.
ಧರಣಿ ನೇತೃತ್ವ ವಹಿಸಿದ್ದ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಟಿ. ಮಧುಕುಮಾರ್ ಮಾತನಾಡಿ, ಗಿರಿಜನರ ಅಭಿವೃದ್ದಿಗಾಗಿ ಬಂದಿರುವ 40 ಕೋಟಿ ಹಣವನ್ನು ಖರ್ಚು ಮಾಡದೆ ಜಿಲ್ಲಾಧಿಕಾರಿಗಳು ಹಾಗೆಯೇ ಇಟ್ಟಿದ್ದಾರೆ. ಆದಿವಾಸಿಗಳಾದ ನಾವು ನೆಲ, ಜಲ, ಕಾಡಿನ ರಕ್ಷಣೆಯ ಬಗ್ಗೆ ಹೆಚ್ಚಿನ ಜವಾಬ್ಧಾರಿ ವಹಿಸುತ್ತಾ ಬಂದಿರುತ್ತೇವೆ. ಆದಿವಾಸಿಗಳಿಗೆ ಮೀಸಲಿರಿಸಿರುವ ಕೆಲವು ಯೋಜನೆಗಳನ್ನು ಆದಿವಾಸಿಗಳಲ್ಲದವರು ಕಬಳಿಸುತ್ತಿದ್ದಾರೆ ಈ ಬಗ್ಗೆ ಸರ್ಕಾರಗಳು ತಿಳಿದೂ ತಿಳಿಯದಂತಿದೆ ಎಂದು ದೂರಿದರು. ಈವರೆಗೆ ಬುಡಕಟ್ಟು ಜನರಿಗಾಗಿ ಅನುಷ್ಟಾನಗೊಳಿಸಿರುವ ಎಲ್ಲ ಯೋಜನೆಗಳ ಮೌಲ್ಯ ಮಾಪನವಾಗಬೇಕು. ಹಾಡಿಗಳ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ಹಾಡಿಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.