ಮೈಸೂರು

ಹಳ್ಳಿಮನೆ ಹೋಟೆಲ್ ಮಾಲೀಕನ ವಿರುದ್ಧ ದೂರು

Published On :

ಮೈಸೂರು: ರಾಜಕೀಯ ಮುಖಂಡರು ಮತ್ತು ಅವರ ಕುಟುಂಬದವರನ್ನು ಬ್ಲಾಕ್ಮೇಲ್ ಮಾಡುತ್ತಿರುವ ಹುಣಸೂರಿನ ಹಳ್ಳಿಮನೆ ಹೋಟೆಲ್ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಎಸಿಐಸಿಎಂ ಸಂಚಾಲಕ ಎಂ.ಲಕ್ಷ್ಮಣ್ ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಅವರಿಗೆ ದೂರು ನೀಡಿದರು. ರಾಜಕೀಯ ಮುಖಂಡರು, ಅದರಲ್ಲೂ ಕಾಂಗ್ರೆಸ್ನ ಮುಖಂಡರಾದ ಸಿದ್ದರಾಮಯ್ಯ, ಎಚ್.ವಿಶ್ವನಾಥ್, ಡಾ.ಎಚ್.ಸಿ. ಮಹದೇವಪ್ಪ ಮುಂತಾದ ನಾಯಕರು ಮತ್ತು ಅವರ ಕುಟುಂಬದವರನ್ನು ಗುರಿಯಾಗಿಸಿಕೊಂಡು ಒಂದು ಗುಂಪು ಕೆಲಸ ಮಾಡುತ್ತಿದೆ. ಇದೆ ಕಾರಣಕ್ಕೆ ಹುಣಸೂರಿನ ಹಳ್ಳಿಮನೆ ಪ್ರಕರಣವೂ ನಡೆದಿದೆ. ಆದ್ದರಿಂದ ಹೊಟೇಲ್ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮಾಜಿ ಸಂಸದ ಎಚ್.ವಿಶ್ವನಾಥ್ ಅವರ ಪುತ್ರ ಪೂರ್ವಜ್ ಮತ್ತು ಇತರರು ದಾಂದಲೆ ನಡೆಸಿದ ಪ್ರಕರಣ ವಿಶ್ವನಾಥ್ ಅವರ ಘನತೆಗೆ ಕುಂದುಂಟು ಮಾಡುವ ಪ್ರಯತ್ನವಾಗಿದೆ. ಘಟನೆ ವೇಳೆ ದೃಶ್ಯ ಮಾಧ್ಯಮಕ್ಕೆ ಮತ್ತು ಪತ್ರಿಕೆಗಳಿಗೆ ನೀಡಿದ ಹೇಳಿಕೆಯಲ್ಲಿ ವ್ಯತ್ಯಾಸ ಇದೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಸಮಯದಲ್ಲೂ ವ್ಯತ್ಯಾಸ ಇದೆ. ಘಟನೆ ನಡೆದಾಗ ಪೊಲೀಸರಿಗೆ ಏಕೆ ದೂರು ನೀಡಲಿಲ್ಲ ಎಂಬುದು ಅನುಮಾನಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದ್ದಾರೆ. ಹೋಟೆಲ್ ಮಾಲೀಕನ ವಿರುದ್ಧ ಹಲವು ಕ್ರಿಮಿನಲ್ ಮೊಕದ್ದಮೆಗಳಿವೆ ಎಂದಿದ್ದಾರೆ.
ಬಿಜೆಪಿ ಕಾರ್ಯಕಾರಿಣಿ ಮುಂದಕ್ಕೆ
ಮೈಸೂರು: ನಗರದಲ್ಲಿ ಜು.12 ಮತ್ತು 13 ರಂದು ನಡೆಯಬೇಕಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ನೂತನ ರಾಷ್ಟ್ರಾಧ್ಯಕ್ಷರ ಘೋಷಣೆ ಹಿನ್ನೆಲೆ ಮುಂದೂಡಲಾಗಿದೆ ಎಂದು ಬಿಜೆಪಿ ನಗರಾಧ್ಯಕ್ಷ ಇ. ಮಾರುತಿರಾವ್ ಪವಾರ್ ಹೇಳಿದ್ದಾರೆ. ನೂತನ ರಾಷ್ಟ್ರಾಧ್ಯಕ್ಷರಾದ ಅಮಿತ್ ಷಾ ಅವರ ದಿನಾಂಕವನ್ನು ನಿಗದಿಪಡಿಸಿ ನಗರದಲ್ಲಿ ರಾಜ್ಯಕಾರ್ಯಕಾರಿಣಿ ಸಭೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಅಮಿತ್ ಷಾ ಅವರ ಆಯ್ಕೆಗೆ ನಗರ ಮತ್ತು ಜಿಲ್ಲಾ ಘಟಕಗಳು ಹರ್ಷ ವ್ಯಕ್ತಪಡಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.