ಸೆಸ್ಕ್ ಆವರಣದಲ್ಲಿ ಕೆಎಸ್ಆರ್ಟಿಸಿ ನಿಲ್ದಾಣ
ಟಿ. ನರಸೀಪುರ: ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿ ಆವರಣದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಸೂಕ್ತವೆಂದು ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್. ಸಿದ್ದಾರ್ಥ ಹೇಳಿದರು. ಸಭೆಯಲ್ಲಿ ಮಾತನಾಡಿದ ಅವರು, ನಾಲ್ಕು ಎಕರೆ ವಿಸ್ತೀರ್ಣದ ಸೆಸ್ಕ್ ಕಚೇರಿ ನಿವೇಶನದಲ್ಲಿ ಮೂರು ಎಕರೆ ಸರ್ಕಾರಿ ಸಾರಿಗೆ ನಿಲ್ದಾಣಕ್ಕೆ ಹಾಗೂ ಒಂದು ಎಕರೆಯನ್ನು ಆಟೋ ಹಾಗೂ ಕಾರು ನಿಲ್ದಾಣಕ್ಕೆ ನೀಡಬಹುದು. ಇದರಿಂದ ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆಯಾಗಲಿದೆ. ಸೆಸ್ಕ್ ಕಚೇರಿಯನ್ನು ರೇಷ್ಮೆ ಮಾರುಕಟ್ಟೆ ಮುಂಭಾಗದ ಸರ್ಕಾರಿ ಸಾರಿಗೆ ನಿಲ್ದಾಣದ ಉದ್ದೇಶಿತ ನಿವೇಶನಕ್ಕೆ ಸ್ಥಳಾಂತರಿಸಲು ಸಿಎಂ ಸಿದ್ದರಾಮಯ್ಯ ಅವರು ಗಮನಹರಿಸಬೇಕೆಂದು ಮನವಿ ಮಾಡಿದರು.
ಸಾಮಾಜಿಕ ಸಾಮರಸ್ಯ ಕಾಪಾಡಲು ಪಣ ತೊಡಿ
ಹುಣಸೂರು: ಸಮಾಜದ ಅನಿಷ್ಟಗಳನ್ನು ಹೋಗಲಾಡಿಸಲು, ಸಾಮಾಜಿಕ ಸಾಮರಸ್ಯ ಕಾಪಾಡಲು ಪ್ರತಿಯೊಬ್ಬ ರೋಟರಿ ಸದಸ್ಯರು ಅಭಿವೃದ್ಧಿಯೆಂಬ ದೀಪ ಬೆಳಗಬೇಕು ಎಂದು ಜಿಲ್ಲಾ ಮಾಜಿ ಗೌರ್ನರ್ ಡಾ.ದೇವದಾಸ ರೈ ಅಭಿಪ್ರಾಯಪಟ್ಟರು. ಪಟ್ಟಣದ ರೋಟರಿ ಭವನದ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ 2014-15ನೇ ಸಾಲಿನ ಹುಣಸೂರು ರೋಟರಿಯ ನೂತನ ಅಧ್ಯಕ್ಷರಾಗಿ ಧರ್ಮಾಪುರ ನಾರಾಯಣ್, ಕಾರ್ಯದರ್ಶಿಯಾಗಿ ಶಿವಕುಮಾರ್ ವಿ.ರಾವ್ ಅವರಿಗೆ ದೇವದಾಸ ರೈ ಪದವಿ ಪ್ರದಾನ ಮಾಡಿ ನಂತರ ಮಾತನಾಡಿದ ಅವರು, ಇತರರ ನೋವು ನಲಿವು ನಮ್ಮ ನೋವು ನಲಿವೆಂದು ಅರಿತು ಸ್ಪಂದಿಸಿದರೆ, ಮಾತ್ರ ಮಾಡಿದ ಸೇವೆ ಸಾರ್ಥಕವಾಗುತ್ತದೆ ಎಂದು ಹೇಳಿದರು. ರೋಟರಿ ಇಂಟರ್ನ್ಯಾಷನಲ್ ಅಧ್ಯಕ್ಷ ಗ್ಯಾರಿ ಸಿ.ಕೆ.ಹ್ವಾಗ್ ಈ ಸಾಲಿಗಾಗಿ ಲೈಟ್ ಅಪ್ ರೋಟರಿ ಎಂಬ ಸಂದೇಶವಾಕ್ಯ ಆಯ್ದುಕೊಂಡಿದ್ದಾರೆ. ಕತ್ತಲೆಯಲ್ಲಿ ಕುಳಿತು ಕತ್ತಲೆ ದೂಷಿಸುವುದಕ್ಕಿಂತಲೂ ಒಂದು ಮೇಣದಬತ್ತಿಯನ್ನು ಹಚ್ಚುವುದು ಒಳ್ಳೆಯದು ಎನ್ನುವ ಚೀನಾದ ತತ್ವಜ್ಞಾನಿ ಕನ್ಫ್ಯೂಷಿಯಸ್ನ ಮಾತುಗಳೇ ಹ್ವಾಗ್ ಅವರು ಲೈಟ್ ಅಪ್ ರೋಟರಿ ಸಂದೇಶವನ್ನು ಆಯ್ದುಕೊಳ್ಳಲು ಪ್ರೇರೇಪಣೆ ನೀಡಿದೆ ಎಂದು ತಿಳಿಸಿದರು. ರೋಟರಿ 3180 ಜಿಲ್ಲೆಯ ಅಸಿಸ್ಟೆಂಟ್ ಗವರ್ನರ್ ಎಂ.ಎಸ್. ಕರುಂಬಯ್ಯ ಜಿಲ್ಲಾ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ನೂತನ ರೋಟರಿ ಅಧ್ಯಕ್ಷ ಧರ್ಮಾಪುರ ನಾರಾಯಣ್ ಮುಂದಿನ ಸಾಲಿನ ತಮ್ಮ ಉದ್ದೇಶಿತ ಯೋಜನೆಗಳನ್ನು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

