ಮೈಸೂರು

ಫೋನ್ ಇನ್‌ಗೆ ದೂರುಗಳ ಸುರಿಮಳೆ

Published On :

ಹುಣಸೂರು: ಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಮಸ್ಯೆ ಹಾಗೂ ದೂರುಗಳ ಸುರಿಮಳೆಯನ್ನೇ ಸುರಿಸಿದರು.
ಹನಗೋಡಿನ ಇಮ್ತಿಯಾಜ್ ಪಾಷ ಹನಗೋಡಿನ ಸರ್ಕಾರಿ ಶಾಲೆಯ ಚಾವಣಿ ಕುಸಿದಿದೆ. ಜೀವಭಯದಲ್ಲಿ ಮಕ್ಕಳು ಕಲಿಯಬೇಕಿದೆ. ಕೂಡಲೇ ಸರಿಪಡಿಸಲು ಆಗ್ರಹಿಸಿದರು. ಶಿಕ್ಷಣ ಇಲಾಖೆಗೆ ಮಾಹಿತಿ ನೀಡಲಾಗುವುದೆಂದು ಇಒ ಡಾ.ಪ್ರೇಮಕುಮಾರ್ ಭರವಸೆ ನೀಡಿದರು. ಕಟ್ಟೆಮಳಲವಾಡಿಯ ಅಣೆಕಟ್ಟಿನ ಬಳಿ ಉದ್ಯಾನ ನಿರ್ಮಿಸಿದಲ್ಲಿ ಕೆಆರ್‌ಎಸ್‌ನಷ್ಟೇ ಪ್ರಸಿದ್ಧಿ ಪಡೆಯಲಿದೆ. ಕಟ್ಟೆಮಳಲವಾಡಿಯಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿದೆ. ಪಂಚಾಯಿತಿ ಗಮನ ಹರಿಸಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಚೂಡಿದಾರ್ ಧರಿಸುವಂತೆ ವಸ್ತ್ರನೀತಿ ರೂಪಿಸಿದಲ್ಲಿ ಆಗಬಹುದಾದ ಅಹಿತಕರ ಘಟನೆಗಳನ್ನು ತಡೆಗಟ್ಟಬಹುದು ಎಂದು ಕಾಂಗ್ರೆಸ್ ಮುಖಂಡ ನಸ್ರುಲ್ಲಾ ಖಾನ್ ಹೇಳಿದರು.
ತಾಲೂಕಿನ ಮೂರು ಹೋಬಳಿಗಳಲ್ಲಿ ಇಲ್ಲಿಯವರೆಗೆ ಸಮರ್ಪಕವಾಗಿ ಮಳೆಯಾಗದೇ ಇರುವುದರಿಂದ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಬೇಕು. ಸರ್ಕಾರ ರೈತರಿಗೆ ಸತತ 8 ಗಂಟೆಗಳ ವಿದ್ಯುತ್ ಸರಬರಾಜನ್ನು ನಿಗದಿಪಡಿಸಬೇಕು ಹಾಗೂ ಬೀಜಗನಹಳ್ಳಿಯಲ್ಲಿರುವ ತೆರೆದ ಕೊಳವೆಬಾವಿಯನ್ನು ಮುಚ್ಚಿಸುವಂತೆ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಬಿ.ಎನ್. ನಾಗರಾಜಪ್ಪ ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಇಒ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪಿಡಿಒಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.