ಮೈಸೂರು

ಭದ್ರಬಾಹು ಮುನಿ ಪಾದುಕೆ ಪೂಜೆ

Published On :

ಚನ್ನರಾಯಪಟ್ಟಣ: ತಾಲೂಕಿನ ಶ್ರೀ ಕ್ಷೇತ್ರ ಶ್ರವಣಬೆಳಗೊಳ 2300 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಶೃತಕೇವಲಿ ಭದ್ರಬಾಹು ಮುನಿಗಳು ತಮ್ಮ 12ಸಾವಿರ ಶಿಷ್ಯರೊಂದಿಗೆ ಉತ್ತರ ಭಾಗದಿಂದ ಆಗಮಿಸಿ ತಪಸ್ಸು ಕೈಗೊಂಡಿರುವ ಇತಿಹಾಸವಿರುವ ಹಿನ್ನಲೆಯಲ್ಲಿ ಅವರ ಸವಿನೆನಪಿಗಾಗಿ ಚಿಕ್ಕಬೆಟ್ಟದಲ್ಲಿರುವ ಭದ್ರಬಾಹು ಗುಹೆಯಲ್ಲಿ ಅವರ ಪಾದಪೂಜಾ ಕಾರ್ಯಕ್ರಮ ಜರುಗಿತು.
 ಚಿಕ್ಕಬೆಟ್ಟದಲ್ಲಿ ಅನೇಕ  ಮುನಿಗಳು ದ್ಯಾನ ಮಾಡಿದ ಹಿನ್ನಲೆಯಲ್ಲಿ ಅವರ ಪಾದಗಳನ್ನು ಬೆಟ್ಟದಲ್ಲಿ  ಕೆತ್ತನೆ ಮಾಡಿದ್ದು, ಅವರು ಪಾದಗಳಿಗೆ  ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು.
ಪಾದುಕೆಗೆ ಪೂಜೆ: 2300 ವರ್ಷಗಳ ಹಿಂದೆ ತಮ್ಮ ಅನುಯಾಯಿಗಳೊಂದಿಗೆ ಚಿಕ್ಕಬೆಟ್ಟಕ್ಕೆ ಆಗಮಸಿ ತಪಸ್ಸು ಕೈಗೊಂಡು ಸಮಾಧಿಯಾಗಿರುವ ಗುಹೆಯಲ್ಲಿ ಆಚಾರ್ಯ ಭದ್ರಬಾಹು ಮುನಿಗಳ ಪಾದಕ್ಕೆ  ಚಾರುಕೀರ್ತಿ ಸ್ವಾಮೀಜಿ ಅವರು ಪಾದಗಳಿಗೆ ಬೆಳ್ಳಿಯ ಪಾದುಕೆ ತೊಡಿಸಿ ಜಲ, ಕ್ಷೀರ, ಕುಂಕುಮಾಭಿಷೇಕ ಮುತ್ತು ರತ್ನಗಳ ಅಭಿಷೇಕ ಮಾಡಿದ ನಂತರ ಪುಷ್ಪವೃಷ್ಟಿ ನಡೆಸಿದರು. ಈ ಸಂದರ್ಭದಲ್ಲಿ  ಗೊಮ್ಮಟಸಾರ ಓಲೆಗರಿ ಗ್ರಂಥದಿಂದ ಪ್ರೊ.ಬಿ.ಎಸ್. ಸಣ್ಣಯ್ಯ ಅವರು  ಕನ್ನಡಕ್ಕೆ ಅನುವಾದಿಸಿದ ನಾಲ್ಕು ಸಂಪುಟಗಳನ್ನು ಅಖಿಲ ಭಾರತ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಪಂಕಜ್ ಜೈನ ಬಿಡುಗಡೆ ಮಾಡಿದರು. ತಮಿಳುನಾಡಿನ ಅರಿಹಂತಗಿರಿಯ ಧವಲಕೀರ್ತಿ ಸ್ವಾಮೀಜಿ, ಕಂಬದಹಳ್ಳಿ ಮಠದ ಭುವನಕೀರ್ತಿ ಸ್ವಾಮೀಜಿ, ಆಚಾರ್ಯ 108 ಸಚ್ಚಿದಾನಂದಿ ಮಹಾರಾಜರು, ಮುನಿಶ್ರೀ 108ಗುಣನಂದಿ ಮಹಾರಾಜರು, ಹಿರಿಯೂರು ಶಾಸಕ ಡಿ.ಸುಧಾಕರ್, ರಾಜ್ಯ ಜೈನ ಅಸೋಸಿಯೇಷನ್ ಅಧ್ಯಕ್ಷ ಜಿತೇಂದ್ರಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.