ಮೈಸೂರು

ನಾಳೆ ಹುಣಸೂರಲ್ಲಿ ಕೃಷಿ ಉತ್ಸವ

Published On :

ಹುಣಸೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೈತರಿಗೆ ಅರಿವು ಮೂಡಿಸಲು ಮಾ. 3ಕ್ಕೆ ಪಟ್ಟಣದಲ್ಲಿ ಕೃಷಿ ಉತ್ಸವ ಆಯೋಜಿಸಿರುವುದಾಗಿ ಉತ್ಸವ ಸಮಿತಿ ಗೌರವಾಧ್ಯಕ್ಷ ಶಾಸಕ ಎಚ್.ಪಿ. ಮಂಜುನಾಥ್ ತಿಳಿಸಿದರು. ಪುರಸಭಾ ಮೈದಾನದಲ್ಲಿ ನಡೆಯುವ ಉತ್ಸವ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಡಿಮೆ ಪ್ರದೇಶದಲ್ಲಿ ಹೆಚ್ಚು ಇಳುವರಿ ತೆಗೆಯುವ ಕುರಿತು ಕೃಷಿ ತಜ್ಞರು, ಪ್ರಗತಿ ಪರ ರೈತರಿಂದ ಉಪನ್ಯಾಸ, ಸಂವಾದ ಏರ್ಪಡಿಸಲಾಗಿದೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಎಂ. ರಾಮು ತಾಲೂಕಿನ ಹನಗೋಡು, ಬಿಳಿಕೆರೆ, ಗಾವಡಗೆರೆ, ಕರ್ಣಕುಪ್ಪೆ, ಕರೀ ಮುದ್ದನಹಳ್ಳಿ, ಕಸಬಾ, ಗೋವಿಂದನಹಳ್ಳಿ ವಲಯಗಳಿಂದ ಸಮಾರು 15 ರಿಂದ 20 ಸಾವಿರ ಮಂದಿ ರೈತರು, ಸ್ವಸಹಾಯ ಸಂಘಗಳ ಮಹಿಳೆಯರು ಭಾಗವಹಿಸುವ ನಿರೀಕ್ಷೆ ಇದೆ.  ತಂಬಾಕಿಗೆ ಪರ್ಯಾಯ ಬೆಳೆ, ಲಾಭದಾಯಕ ಹೈನುಗಾರಿಕೆ ಮತ್ತು ಇತರೆ ಪಶುಸಂಗೋಪನೆ ಹಾಗೂ ಜಲ ಸಂರಕ್ಷಣೆ ಮತ್ತು ಪರ್ಯಾಯ ಇಂಧನ ಬಳಕೆ ಕುರಿತು ತಜ್ಞರು ಮಾಹಿತಿ ನೀಡುವುದಾಗಿ ತಿಳಿಸಿದರು.


ಇಂದು ಗಾವಡಗೆರೆ ಮಠದಲ್ಲಿ ಪಂಜರದ ಗಿಳಿ ನಾಟಕ


ಹುಣಸೂರು: ಶಿಕ್ಷಣ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಗ್ರಾಮೀಣ ಜನರ ಬದುಕಿಗೆ ಅನುಕೂಲವಾಗುವಂತಹ ಗುಣಾತ್ಮಕ ಯೋಜನೆಗಳನ್ನು ಕೈಗೊಂಡಿರುವುದಾಗಿ ಗಾವಡಗೆರೆ ಓಂ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ ತಿಳಿಸಿದರು. ಮಠದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದಲ್ಲಿ ಅನಾಥ ಮಕ್ಕಳಿಗೆ ಶಿಕ್ಷಣ, ಕಲೆ, ಸಾಹಿತ್ಯ, ಸಾಂಸ್ಕೃತಿ ಮತ್ತು ಎಲ್ಲರ ಬದುಕನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬರಿಗೂ ಬಡವ, ಶ್ರೀಮಂತ, ಜಾತಿ ತಾರತಮ್ಯವಿಲ್ಲದೆ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬುದು ತಮ್ಮ ಆಶಯ. ಈ ಹಿನ್ನೆಲೆಯಲ್ಲಿ ಮಾ. 2ರ ಸಂಜೆ ಮಠದ ಅವರಣದಲ್ಲಿ ಪಂಜರದ ಗಿಳಿ ನಾಟಕವನ್ನು ಮಠದ ವಿದ್ಯಾರ್ಥಿಗಳಿಂದ ಪ್ರದರ್ಶಿಸಲಾಗುತ್ತಿದೆ. ರಂಗಕರ್ಮಿ, ನಮ್ಮೂರಿನ ಮಗಳು ಭಾಗಿರಥಿಬಾಯಿ ಕದಂ ನಾಟಕ ನಿರ್ದೇಶಿಸಿದ್ದಾರೆ ಎಂದರು. ಜಿಪಂ ಮಾಜಿ ಸದಸ್ಯ ಜಾಬಗೆರೆ ರಮೇಶ್ಕುಮಾರ್, ಮುಖಂಡ ಪುಟ್ಟಲಿಂಗಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.