ಸಾಲಿಗ್ರಾಮದಲ್ಲಿ ಬ್ರಹ್ಮ ರಥೋತ್ಸವ
ಸಾಲಿಗ್ರಾಮ: ಪಟ್ಟಣದ ಶ್ರೀಜ್ಯೋರ್ತಿ ಮಹೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ ಭಾವಗಳಿಂದ ನೆರವೇರಿತು. ಶಿವ, ಪಾರ್ವತಿ ಹಾಗೂ ಗಣೇಶ ದೇವರನ್ನು ಪ್ರತಿಷ್ಠಾಪಿಸಿ ಹೂವು ಹಾಗೂ ವಿವಿಧ ಅಲಂಕಾರಿಕ ವಸ್ತುಗಳಿಂದ ರಥವನ್ನು ಶೃಂಗೇರಿಸಿ ರಥೋತ್ಸವಕ್ಕೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ನಂತರ ಭಕ್ತರು ರಥವನ್ನು ಎಳೆದರು. ಇದೇ ವೇಳೆ ನೂರಾರು ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಳನ್ನು ಈಡೇರಿಸುವಂತೆ ದೇವರನ್ನು ಪ್ರಾರ್ಥಿಸಿ ರಥಕ್ಕೆ ಹಣ್ಣು ಜವನಗಳನ್ನು ಎಸೆದರು. ರಥೋತ್ಸವದ ಅಂಗವಾಗಿ ನವಗ್ರಹ ಹೋಮ, ನಿತ್ಯೋತ್ಸವ ಸೇರಿದಂತೆ ವಿವಿಧ ಮಾದರಿಯ ಪೂಜೆಗಳನ್ನು ಮಾಡಲಾಯಿತು. ರಥೋತ್ಸವದಲ್ಲಿ ಶ್ರೀ ಗುರುರಾಘವೇಂದ್ರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಸಾ.ರಾ. ನಂದೀಶ್, ಸುನೀತಾ ಸಾ.ರಾ. ನಂದೀಶ್, ಗ್ರಾಪಂ ಅಧ್ಯಕ್ಷೆ ರಾಣಿ ರಾಜಣ್ಣ, ಸದಸ್ಯ ಎಸ್.ಟಿ. ರೇವಣ್ಣ, ಎಪಿಎಂಸಿ ನಿರ್ದೇಶಕ ಸೋಮಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ. ಮಧುಚಂದ್ರ, ಮುಖಂಡ ಅಪ್ಪಾಜಿಗೌಡ, ಎಸ್.ಆರ್. ದಿನೇಶ್, ಪಾಪಣ್ಣ, ಮರೀಗೌಡ ಭಾಗವಹಿಸಿದ್ದರು.
ರೈತರ ಬಲವರ್ಧನೆಗಾಗಿ ರೈತಕೂಟ ಸ್ಥಾಪನೆ
ನಂಜನಗೂಡು: ತಾಲೂಕಿನ ಹೆಡಿಯಾಲ ಮತ್ತು ದೇವರಾಯ ಶೆಟ್ಟಿಪುರ ಗ್ರಾಪಂ ವ್ಯಾಪ್ತಿಯ ಈರೇಗೌಡನ ಹುಂಡಿ, ಮಹದೇವ ನಗರ ಹಾಗೂ ನಾಗಣಾಪುರ ಕಾಲೋನಿಯಲ್ಲಿ ನಬಾರ್ಡ್ ಹಾಗೂ ಪ್ರತಿಭೆ ಸಂಸ್ಥೆ ವತಿಯಿಂದ ರೈತಕೂಟ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಅರವಾ ಮುದಾನ್ ಅವರು ರೈತಕೂಟ ಉದ್ಘಾಟಿಸಿ, ಕೃಷಿ ಮತ್ತು ಕೃಷಿಯೇತರ ಚಟುವಟಿಕೆ ಅಭಿವೃದ್ಧಿಗೊಳಿಸುವ ಸಲುವಾಗಿ ಕೃಷಿ ಮತ್ತು ಗ್ರಾಮಾಭಿವೃದ್ಧಿ ದೃಷ್ಟಿಯಿಂದ ಹಳ್ಳಿಗಳ ಎಲ್ಲಾ ಸಮುದಾಯದ ರೈತರು ಸಂಘಟನೆ ಮತ್ತು ಮಾಹಿತಿಗಾಗಿ ರೈತಕೂಟ ಎಂಬ ವೇದಿಕೆ ರಚಿಸಲಾಗಿದೆ ಎಂದರು. ಈ ವೇದಿಕೆಯಡಿ ಎಲ್ಲಾ ವರ್ಗದ ರೈತರು ಭಾಗವಹಿಸುವ ಮೂಲಕ ರೈತಕೂಟಗಳನ್ನು ಬಲಗೊಳಿಸಿ ಕೃಷಿಯಲ್ಲಿ ಅಭಿವೃದ್ಧಿ ಹೊಂದುವಂತೆ ಶುಭಕೋರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

