ಕುವೆಂಪು ಪ್ರತಿಮೆ ಫಲಕದಲ್ಲಿ ತಪ್ಪು ಸರಿಪಡಿಸಲು ಆಗ್ರಹ
ಮೈಸೂರು: ಕುವೆಂಪುನಗರದಲ್ಲಿ ಪ್ರತಿಷ್ಠಾಪಿಸಿರುವ ಕುವೆಂಪು ಪ್ರತಿಮೆಯ ಪೀಠದ ಮೇಲೆ ಕುವೆಂಪು ಸೂಕ್ತಿಗಳನ್ನು ಬರೆಯಲಾಗಿದ್ದು, ಅದರಲ್ಲಿ ತಪ್ಪುಗಳು ನುಸುಳಿವೆ ಎಂದು ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ತಿಳಿಸಿದ್ದಾರೆ.
ಪೀಠದ ಪೂರ್ವ ಕಡೆ ಹೀಗೆ ಬರೆದಿದ್ದು'ಕೊನೆ ಕೊಂಡಿತೊ ಓರೊರ್ವರ ಗರ್ವದ ಕಾಲ, ಇದು ಸರ್ವರ ಕಾಲ', ಇದೇನು ತಪ್ಪಾಗಿ ಬರೆದಿದೆಯಲ್ಲ ಎಂದುಕೊಂಡು ದಕ್ಷಿಣದ ಕಡೆ ಬರೆದಿರುವುದುನ್ನು ನೋಡಿದೆ, 'ನೇಗಿಲ ಗೆರೆಯೇ ಸಗ್ಗದ ಹಾದಿ, ಕರ್ಮವೆ ಬಾಗಿಲಿ ಹೊಯ್ಯುವ ಬೀದಿ' ಎಂದು ಬರೆದಿತ್ತು. ಇದೇನು ಎರಡು ಕಡೆಯೂ ತಪ್ಪಾಗಿ ಬರೆದಿದ್ದಾರಲ್ಲ ಅಂದುಕೊಂಡು ಮನೆಗೆ ಬಂದು ಪುಸ್ತಕ ನೋಡಿದೆ. ಹೌದು, ತಪ್ಪಾಗಿ ಬರೆಯಲಾಗಿದೆ. ಅದರ ಸರಿಯಾದ ಪಾಠ ಹೀಗಿದೆ.
ಕೊನೆಗಂಡಿತೊ ಓರೊರ್ವರ ಗರ್ವದ ಕಾಲ, ಇದು ಸರ್ವರ ಕಾಲ (ಕುವೆಂಪು- ಸಮಗ್ರ ಕಾವ್ಯ, ಸಂ 2, ಪುಟ 75). ಇದು 1950ನೇ ಜನವರಿ 26ನೇ ತಾರಿಖು ಭಾರತ ಗಣರಾಜ್ಯವಾಗಿ ಘೋಷಣೆಯಾದ ದಿನ ಬರೆದ ಕವನ. ಇನ್ನು ಎರಡನೆಯದರ ಸರಿಯಾದ ಪಾಠ ಇದು- ನೇಗಿಲ ಗೆರೆಯೇ ಸಗ್ಗದ ಹಾದಿ, ಕರ್ಮವೆ ಬಾಗಿಲಿಗೊಯ್ಯುವ ಬೀದಿ (ಸಮಗ್ರ ಕಾವ್ಯ ಸಂ. 1, ಪುಟ 78). ಈ ತಪ್ಪುಗಳನ್ನು ಸಂಬಂಧಪಟ್ಟವರು ತಕ್ಷಣ ಸರಿಪಡಿಸಬೇಕು. ತಪ್ಪುಗಳು ಆಗದಂತೆ ಕುವೆಂಪು ಸದಾ ಎಚ್ಚರ ವಹಿಸುತ್ತಿದ್ದರು. ತಪ್ಪಿಲ್ಲದಂತೆ ಕವಿಯ ಮಾತುಗಳನ್ನು ಉಲ್ಲೇಖಿಸುವುದು ಕವಿಗೆ ತೋರುವ ಕನಿಷ್ಠ ಗೌರವ ಎಂದಿದ್ದಾರೆ.
ಅಂದು ಕುವೆಂಪು ಪ್ರತಿಮೆ ತೆರೆಯುವ ಹಬ್ಬದ ಭರದಲ್ಲಿ ಅವರ ಕಬ್ಬವನ್ನು ಮರೆತರು. ಹೀಗಾಗಬಹುದೆಂದು ಕವಿ ತನ್ನ ಮೂವತ್ತೊಂದನೆಯ ವಯಸ್ಸಿನಲ್ಲೇ ಬರೆದ (24.9.1935) ಕವಿಯ ಕೀರ್ತಿ ಎಂಬ ಕವನದಲ್ಲಿ ಶಂಕಿಸಿದ್ದು, ಈಗ ನಿಜವಾಗೇಬಿಟ್ಟಿತು. ಕುವೆಂಪು ಕಾವ್ಯ ಮತ್ತು ಜೀವನ ಸಂದೇಶವನ್ನು ಅಲ್ಲಿ ನೆರೆದಿದ್ದ ಜನತೆಗೆ ಮುಟ್ಟಿಸುವ ಸದಾವಕಾಶವನ್ನು ಸಂಘಟಕರು ಕಳೆದುಕೊಂಡರೆಂದು ವಿಷಾದವಾಗುತ್ತದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

