ರೈತಸಂಘದಿಂದ ನಂದಿನಿ ಜಯರಾಂ: ನಿರ್ಣಯ
ಶ್ರೀರಂಗಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ರೈತ ಸಂಘದಿಂದ ರೈತನಾಯಕಿ ನಂದಿನಿ ಜಯರಾಂ ಅವರನ್ನು ಕಣಕ್ಕೆ ಇಳಿಸಲು ತಾಲೂಕು ರೈತ ಸಂಘ ಶುಕ್ರವಾರ ನಿರ್ಣಯ ಕೈಗೊಂಡಿತು.
ಪಟ್ಟಣದ ಲಾಲ್ಮಹಲ್ ಉದ್ಯಾನವನದಲ್ಲಿ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡರ ನೇತೃತ್ವದಲ್ಲಿ ಸಭೆ ನಡೆಸಿದ ರೈತ ಮುಖಂಡರು, ಈ ಬಾರಿ ತಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಕೆ.ಆರ್.ಪೇಟೆ ತಾಲೂಕಿನ ರೈತ ನಾಯಕಿ ನಂದಿನಿ ಜಯರಾಂ ಅವರನ್ನು ಕಣಕ್ಕಿಳಿಸಲು ನಿರ್ಣಯ ಕೈಗೊಂಡರು.
ಕಳೆದ ಆರು ತಿಂಗಳ ಹಿಂದೆ ನಡೆದ ಲೋಕಸಭೆ ಉಪ ಚುಣಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಕೈ ಸುಟ್ಟಿಕೊಂಡಿದ್ದೇವೆ. ಜಿಲ್ಲಾ ರೈತ ಸಂಘ ಈ ಬಾರಿ ಕಾಂಗ್ರೆಸ್ ನಾಯಕರ ಧೋರಣೆ ಮತ್ತು ಅಸಹಕಾರಗಳಿಂದ ಬೇಸತ್ತಿದ್ದಾರೆ. ಆದ್ದರಿಂದ ಈ ಬಾರಿ ರೈತ ಸಂಘದಿಂದ ಅಭ್ಯರ್ಥಿ ಹಾಕುವುದು ಸೂಕ್ತ ಎಂಬ ಅಭಿಪ್ರಾಯವನ್ನು ಹಲವಾರು ರೈತ ಮುಖಂಡರು ವ್ಯಕ್ತಪಡಿಸಿದರು.
ತಾಲೂಕಿನ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕಳೆದ ಮಂಡ್ಯ ಲೋಕಸಭಾ ಉಪಚುಣಾವಣೆ ವೇಳೆ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡು ಆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಲಾಗಿತ್ತು. ಆದರೆ, ರೈತ ಸಂಘವನ್ನು ಕಾಂಗ್ರೆಸ್ ಹಾಗೂ ಅದರ ನಾಯಕರು ಕಡೆಗಣಿಸಿದ್ದಾರೆ. ಕೊಟ್ಟ ವಚನ ಈಡೇರಿಸದೆ ವಿಶ್ವಾಸ ದ್ರೋಹ ಎಸಗಿರುವುದಾಗಿ ಆರೋಪಿಸಿದರು.
ಜಿಲ್ಲಾ ರೈತ ನಾಯಕರ ಅಣತಿಯಂತೆ ಜಿಲ್ಲೆಯಿಂದ ತಮ್ಮದೆ ಪಕ್ಷದ ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನಾಗಿ ರೈತನಾಯಕಿ ಕೆ.ಆರ್.ಪೇಟೆಯ ನಂದಿನಿ ಜಯರಾಂ ಅವರನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ತಿಳಿಸಿದರು. ತಾಲೂಕು ಅಧ್ಯಕ್ಷ ಕೆಂಪೇಗೌಡ, ಕಡತನಾಳು ಬಾಬು, ಪಿಎಎಸ್ಕೆಯ ಪಾಂಡು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

